ಬೆಂಗಳೂರು: ಡ್ರಿಂಕ್ ಅಂಡ್ ಡ್ರೈವ್ ಪತ್ತೆ ಹಚ್ಚುವ ಯಂತ್ರದ ಲೋಪ ಪ್ರಶ್ನಿಸಿ ಹೈಕೋರ್ಟ್ ಗೆ ಕಾರು ಮಾಲೀಕನೊಬ್ಬ ಅರ್ಜಿಯನ್ನು ಸಲ್ಲಿಸಿದ್ದಾರೆ. ಜೊತೆಗೆ ತಾನು ಕುಡಿಯದೇ ಇದ್ದರೂ ಡ್ರಿಂಕ್ ಅಂಡ್ ಡ್ರೈವ್ ಯಂತ್ರದ ಲೋಪದಿಂದ ದಂಡ ವಿಧಿಸಿದ್ದನ್ನು ಪ್ರಶ್ನಿಸಿದ್ದಾರೆ.
ಈ ಸಂಬಂಧ ಕರ್ನಾಟಕ ಹೈಕೋರ್ಟ್ ಗೆ ಅಜಯ್ ಕುಮಾರ್ ಕಶ್ಯಪ್ ಎಂಬುವರು ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಕಾರು ಚಾಲನೆ ಮಾಡುವಾಗ ಟ್ರಾಫಿಕ್ ಪೊಲೀಸರು ತಡೆದಿದ್ದರು. ಡ್ರಿಂಕ್ ಅಂಡ್ ಡ್ರೈವ್ ಯಂತ್ರದ ಮೂಲಕ ಪತ್ತೆ ವೇಳೆಯಲ್ಲಿ ಎರಡು ಬಾರಿ ನೆಗೆಟಿವ್ ತೋರಿಸಿ, 3ನೇ ಬಾರಿ ಪಾಸಿಟಿವ್ ಬಂದಿತ್ತು ಎಂದಿದ್ದಾರೆ.
ತಾನು ಮದ್ಯಪಾನ ಮಾಡದಿದ್ದರೂ ಯಂತ್ರದಲ್ಲಿ ಪಾಸಿಟಿವ್ ತೋರಿಸಿತ್ತು. ಕುಡಿದಿಲ್ಲವೆಂದರೂ ಒಪ್ಪದೇ ಪೊಲೀಸರು ಕಾರು ಸೀಜ್ ಮಾಡಿ 10,000 ದಂಡವನ್ನು ವಿಧಿಸಿದ್ದಾರೆ. ತಾವೇ ಖಾಸಗಿ ಲ್ಯಾಬ್ ನಲ್ಲಿ ಟೆಸ್ಟ್ ಮಾಡಿಸಿದಾಗಲೂ ನೆಗೆಟಿವ್ ಬಂದಿದೆ. ಡ್ರಿಂಕ್ ಅಂಡ್ ಡ್ರೈವ್ ಪತ್ತೆ ಯಂತ್ರದಲ್ಲೇ ಲೋಪವಿದೆ ಎಂಬುದಾಗಿ ವಾದಿಸಿದ್ದಾರೆ.
ರಾಜ್ಯ ಸರ್ಕಾರವನ್ನು ಹೈಕೋರ್ಟ್ ಏಕಸದಸ್ಯ ಪೀಠವು ಪ್ರಶ್ನಿಸಿದೆ. ಯಂತ್ರದಲ್ಲೇ ಲೋಪವಿದ್ದಾಗ ಕುಡಿತದ ಆರೋಪ ಒಪ್ಪಲಾಗುವುದಿಲ್ಲ. ಹೀಗಾಗಿ ಈ ಯಂತ್ರಗಳ ವಿಶ್ವಾಸಾರ್ಹತೆ ಬಗ್ಗೆ ಸರ್ಕಾರ ಉತ್ತರಿಸಬೇಕು ಎಂಬುದಾಗಿ ಹೈಕೋರ್ಟ್ ನ್ಯಾಯಮೂರ್ತಿ ಬಿಎಂ ಶ್ಯಾಮ್ ಪ್ರಸಾದ್ ಅವರಿದ್ಧ ನ್ಯಾಯಪೀಠವು ಅಭಿಪ್ರಾಯ ಪಟ್ಟಿದೆ. ಅಲ್ಲದೇ ರಾಜ್ಯ ಸರ್ಕಾರಕ್ಕೆ, ಟ್ರಾಫಿಕ್ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.
BIG NEWS: ರಾಜ್ಯದ ‘ಆರೋಗ್ಯ ಇಲಾಖೆ’ಯ ಈ ಅಧಿಕಾರಿಗಳ ‘ನಿಯೋಜನೆ ರದ್ದು’: ರಾಜ್ಯ ಸರ್ಕಾರ ಮಹತ್ವದ ಆದೇಶ
‘ಶ್ರೀರಂಗಪಟ್ಟಣ ದಸರಾ’ಗೆ ಮುಹೂರ್ತ ಫಿಕ್ಸ್: ಸೆ.25ರಿಂದ ನಾಲ್ಕು ದಿನ ಆಚರಣೆ