ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತೆ ಆಗಿದೆ. ಇದೇ ಸಂದರ್ಭದಲ್ಲಿ ನಗರದಲ್ಲಿ ಇಂದು ಒಂದೇ ದಿನ ಭಾರೀ ಮಳೆಯಿಂದಾಗಿ 10 ಮರಗಳು ಮುರಿದು ಬಿದ್ದಿದ್ದರೇ, 23 ರೆಂಬೆ ಕೊಂಬೆಗಳು ಮುರಿದು ಬಿದ್ದಿದ್ದಾವೆ.
ಬೆಂಗಳೂರಿನ ವಿಧಾನಸೌಧ, ದಾಸರಹಳ್ಳಿ ಶಿವಾಜಿನಗರ, ಮಲ್ಲೇಶ್ವರಂ, ಫ್ರೇಜರ್ ಟೌನ್, ಕಾರ್ಪೊರೋಷನ್ ಸೇರಿದಂತೆ ವಿವಿಧೆಡೆ ಬಿರುಗಾಳಿ, ಗುಡುಗು ಸಹಿತ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ರಸ್ತೆಗಳೆಲ್ಲ ಜಲಾವೃತಗೊಂಡಿದ್ದು, ಅಲ್ಲಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಬೆಂಗಳೂರಿನ ಭಾರೀ ಮಳೆಯ ಅವಾಂತರದಿಂದಾಗಿ ಕತ್ರಿಗುಪ್ಪೆ ಸಮೀಪದಲ್ಲಿ ಮರವೊಂದು ಆಟೋ ಮೇಲೆ ಬಿದ್ದ ಪರಿಣಾಮ, ಅದರಲ್ಲಿದ್ದಂತ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇದರ ನಡುವೆ ಮುಂದಿನ 3 ಗಂಟೆಗಳಲ್ಲಿ ಬೆಂಗಳೂರಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಮುಂಜಾಗ್ರತಾ ಕ್ರಮ ವಹಿಸುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು ಸುರಿದಂತ ಭಾರೀ ಮಳೆಯಿಂದಾಗಿ ಬೆಂಗಳೂರಲ್ಲಿ 10 ಮರಗಳು ಮುರಿದು ಬಿದ್ದಿದ್ದಾವೆ. ಇದಲ್ಲದೇ 23 ಮರದ ರೆಂಬೆ ಕೊಂಬೆಗಳು ಮುರಿದು ಬಿದ್ದಿದ್ದಾವೆ. 5 ಮರಗಳನ್ನು ತೆರೆವುಗೊಳಿಸಿದ್ದರೇ, 13 ರೆಂಬೆಕೊಂಬೆಗಳನ್ನು ತೆರವುಗೊಳಿಸಲಾಗಿದೆ.
BIG NEWS: ಕಾಂಗ್ರೆಸ್ ಪಕ್ಷ ಎಂದಿಗೂ ದೇಶವನ್ನು ಬಿಟ್ಟುಕೊಟ್ಟ ಉದಾಹರಣೆಯೇ ಇಲ್ಲ: ಸಚಿವ ಸಂತೋಷ್ ಲಾಡ್