ಹುಬ್ಬಳ್ಳಿ: ಇಲ್ಲಿನ ಗದಗ ರಸ್ತೆಯಲ್ಲಿರುವ ರೈಲ್ ಸೌಧ ಸಭಾಭವನದಲ್ಲಿ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ ಅವರು ಗುರುವಾರ (19.12.2024) ವಿವಿಧ ಇಲಾಖೆಗಳ ಪ್ರಧಾನ ಮುಖ್ಯಸ್ಥರೊಂದಿಗೆ ಸುರಕ್ಷತಾ ಸಭೆ ನಡೆಸಿದರು. ರೈಲ್ವೆ ಸುರಕ್ಷತೆಯನ್ನು ಖಾತ್ರಿಪಡಿಸುವ ಈ ನಿರ್ಣಾಯಕ ಚರ್ಚೆಯ ನಂತರ, ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಸಂಭವಿಸಬಹುದಾಗಿದ್ದ ಅನಾಹುತಗಳನ್ನು ತಪ್ಪಿಸಿದ, ಜಾಗರೂಕತೆ ವಹಿಸಿದ ಹಾಗೂ ಕರ್ತವ್ಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡ, ಅನುಕರಣೀಯ ಸುರಕ್ಷತಾ ಪ್ರಜ್ಞೆ ತೋರಿದ ವಲಯದ ಮೈಸೂರು ಮತ್ತು ಬೆಂಗಳೂರು ವಿಭಾಗಳ ನೌಕರರಿಗೆ ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ್ ಅವರು ಉದ್ಯೋಗಿಗಳಿಗೆ “ತಿಂಗಳ ಸುರಕ್ಷತಾ ವ್ಯಕ್ತಿ” ಪ್ರಶಸ್ತಿ ನೀಡಿ ಗೌರವಿಸಿದರು.
ಅಪಾಯಕಾರಿ ಸಂದರ್ಭಗಳು ಗಂಭೀರ ಅಪಘಾತಗಳಾಗಿ ಬದಲಾಗುವ ಮೊದಲು ಅದನ್ನು ನಿಲ್ಲಿಸಲು ನೌಕರರು ತ್ವರಿತವಾಗಿ ಮತ್ತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದರು. ಪ್ರಶಸ್ತಿ ಪುರಸ್ಕೃತರನ್ನು ಆಯಾ ವಿಭಾಗಗಳಿಂದ ಪಟ್ಟಿ ಮಾಡಲಾಗಿದೆ:
ಮೈಸೂರು ವಿಭಾಗ:
1. ಅಮಿತ್, ಸ್ಟೇಷನ್ ಮಾಸ್ಟರ್/ ಬಳ್ಳೇಕೆರೆ
2. ರವಿ ಲಮಾಣಿ, ಸ್ಟೇಷನ್ ಮಾಸ್ಟರ್/ ಬ್ಯಾಡಗಿ
3. ಯಲ್ಲಪ್ಪ ಮಾಳಗೇರ್, ಪಾಯಿಂಟ್ಸ್ ಮ್ಯಾನ್/ ಬ್ಯಾಡಗಿ
4. ಮಂಜುನಾಥ್, ಲೋಕೋ ಪೈಲಟ್
5. ರೌಶನ್ ಕುಮಾರ್, ಸಹಾಯಕ ಲೋಕೋ ಪೈಲಟ್
6. ಸುನಿಲ್ ಕುಮಾರ್, ಟೆಕ್ನಿಷಿಯನ್/ ಚಿಕ್ಕಜಾಜೂರು
7. ತಿಪ್ಪೇಸ್ವಾಮಿ, ಟೆಕ್ನಿಷಿಯನ್/ ಚಿಕ್ಕಜಾಜೂರು
8. ಅಮಿತ್ ಕುಮಾರ್ ಮಹತೋ, ರಾತ್ರಿ ಗಸ್ತು ಸಿಬ್ಬಂದಿ
9. ಮುಹಮ್ಮದ್ ನಿಷಾದ್, ಗೇಟ್ ಮ್ಯಾನ್.
ಬೆಂಗಳೂರು ವಿಭಾಗ:
1. ರಮೇಶ್ ಟಿ.ಎಚ್., ಟ್ರ್ಯಾಕ್ ನಿರ್ವಹಣೆಗಾರ.
ಅರವಿಂದ್ ಶ್ರೀವಾಸ್ತವ ಅವರು ಸುರಕ್ಷತೆಗಾಗಿ ಉದ್ಯೋಗಿಗಳ ತ್ವರಿತ ಚಿಂತನೆ ಮತ್ತು ಸಮರ್ಪಣೆಯನ್ನು ಶ್ಲಾಘಿಸಿದರು, “ಸುರಕ್ಷತೆ ಮೊದಲು ಮತ್ತು ಸುರಕ್ಷತೆ ಯಾವಾಗಲೂ” ನೈಋತ್ಯ ರೈಲ್ವೆಯ ಉನ್ನತ ಆದ್ಯತೆಯಾಗಿದೆ ಎಂದು ಪುನರುಚ್ಚರಿಸಿದರು.
ಸಿ ಟಿ ರವಿ ಹೇಳಿಕೆಯಿಂದ ಇಡೀ ಹೆಣ್ಣು ಕುಲಕ್ಕೇ ದೊಡ್ಡ ಅಪಮಾನ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು ಜನತೆ ಗಮನಕ್ಕೆ: ನಾಳೆ, ನಾಡಿದ್ದು ಬೆಳಿಗ್ಗೆ 10ರಿಂದ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut