ಬೆಂಗಳೂರು: ಇಂದು ರಾಮೇಶ್ವರಂ ಕಫೆ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ 10 ಜನರಿಗೆ ಗಾಯವಾಗಿದೆ ಎಂಬುದಾಗಿ ನಗರ ಪೊಲೀಸ್ ಆಯುಕ್ತರು ಖಚಿತ ಮಾಹಿತಿಯನ್ನು ನೀಡಿದ್ದಾರೆ.
ಈ ಕುರಿತಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಇಂದು ಬೆಂಗಳೂರು ನಗರದ ಐ.ಟಿ.ಪಿ.ಎಲ್. ರಸ್ತೆಯಲ್ಲಿರುವ ದಿ ರಾಮೇಶ್ವಂ ಕಥೆಯಲ್ಲಿ ಮದ್ಯಾಹ್ನ ಸುಮಾರು 12-50 ರಿಂದ 01-00 ಗಂಟೆಯ ಸಮಯದಲ್ಲಿ ಬಾಂಬ್ ಸ್ಫೋಟಗೊಂಡಿರುತ್ತದೆ. ಈ ಸ್ಫೋಟದಿಂದ ಹೋಟೆಲ್ ಸಿಬ್ಬಂಧಿ ಹಾಗೂ ಗ್ರಾಹಕರು ಸೇರಿದಂತೆ ಹೊಟೆಲ್‌ನಲ್ಲಿದ್ದ ಒಟ್ಟು 10 ವ್ಯಕ್ತಿಗಳು ಗಾಯಗೊಂಡಿರುತ್ತಾರೆ. ಯಾವುದೇ ಜೀವಹಾನಿಯಾಗಿರುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.
ಈ ಕುರಿತು ಹೆಚ್.ಎ.ಎಲ್ ಪೊಲೀಸ್ ಠಾಣೆಯಲ್ಲಿ Unlawful Activities (Prevention) Act 1967 & Explosive Substances Act ರಂತೆ ಪ್ರಕರಣ ದಾಖಲಾಗಿರುತ್ತದೆ. ಸ್ಥಳಕ್ಕೆ ವಿಧಿ ವಿಜ್ಞಾನ ತಜ್ಞರು, ಮತ್ತು ಬಾಂಬ್ ನಿಷ್ಕ್ರಿಯ ದಳ ದವರು ಬೇಟಿ ನೀಡಿ ಪರಿಶೀಲನೆ ಕೈಗೊಂಡಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
‘ರಾಜ್ಯ ಸರ್ಕಾರಿ ನೌಕರ’ರಿಗೆ ಮಹತ್ವದ ಮಾಹಿತಿ: ಪ್ರಥಮ ಅಧಿವೇಶನ ‘ಇಲಾಖಾ ಪರೀಕ್ಷೆ’ಗೆ ಅರ್ಜಿ ಆಹ್ವಾನ
ಉದ್ಯೋಗ ವಾರ್ತೆ: ‘KPSC’ಯಿಂದ ‘364 ಭೂಮಾಪಕರ’ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ