ಬೆಂಗಳೂರು: ರಾಜ್ಯದಲ್ಲಿ ಕೊಳವೆ ಬಾವಿ ಕೊರೆದು, ಮುಚ್ಚದೇ ಬಿಡುತ್ತಿರುವಂತವರ ವಿರುದ್ಧ ಸರ್ಕಾರ ಸಮರ ಸಾರುತ್ತಿದೆ. ಕೊಳವೆ ಬಾವಿ ಕೊರೆದು, ನೀರು ಬೀಳದೇ ಇದ್ದರೇ ಮುಚ್ಚುವುದು ಕಡ್ಡಾಯ ಮಾಡುವಂತ ನಿರ್ಧಾರ ಕೈಗೊಂಡಿದೆ. ಒಂದು ವೇಳೆ ಕೊಳವೆ ಬಾವಿ ಕೊರೆದು ಮುಚ್ಚದೇ ಇದ್ದರೇ ಒಂದು ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ದಂಡವನ್ನು ವಿಧಿಸೋ ನಿರ್ಣಯವನ್ನು ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ The Karnataka Groundwater (Regulation and Control of Development and Management) (ತಿದ್ದುಪಡಿ) ವಿಧೇಯಕ, 2024ಕ್ಕೆ ಅನುಮೋದಿಸಿದೆ ಹಾಗೂ ಸದರಿ ವಿಧೇಯಕವನ್ನು ಮುಂಬರುವ ವಿಧಾನ ಮಂಡಲದ ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ಅನುಮೋದಿಸಿದೆ.
ಒಂದು ವೇಳೆ ಚಳಿಗಾಲದ ವಿಧಾನ ಮಂಡಲದ ಅಧಿವೇಶನದಲ್ಲಿ ಈ ತಿದ್ದುಪಡಿ ವಿಧೇಯಕಕ್ಕೆ ಉಭಯ ಸದನಗಳಲ್ಲಿ ಒಪ್ಪಿಗೆ ಸಿಕ್ಕಲೇ ಕೊಳವೆ ಬಾವಿ ಕೊರೆದು, ಅನಾಹುತವಾದವರಿಗೆ ದಂಡ ಖಚಿತವಾಗಿದೆ.
ಕೊಳವೆ ಬಾವಿಗೆ ಏನೆಲ್ಲ ಶಿಕ್ಷೆ ಮತ್ತು ದಂಡ?
ಕಾರ್ಯನಿರತವಲ್ಲದ ಅಥವಾ ಸ್ಥಗಿತಗೊಂಡಿರುವ ಕೊಳವೆ ಬಾವಿಗಳಲ್ಲಿ ಮಕ್ಕಳು ಅಪಘಾತಕ್ಕಿ ಡಾಗುವುದನ್ನು ತಪ್ಪಿಸಲು ಪರಿಣಾಮಕಾರಿ ಕ್ರಮ ವಹಿಸಲು
1) ಒಂದು ವರ್ಷ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಲು.
2) ಕಲಂ 11(ಎ) ರನ್ವಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ವಿಫಲರಾಗುವ ಮತ್ತು ಅಧಿಸೂಚಿತವಲ್ಲದ ಪ್ರದೇಶಗಳಲ್ಲಿ ಅಂತರ್ಜಲ ಉಪಯೋಗಿಸಲು ನಿಯಮ ಉಲ್ಲಂಘಿಸುವ ವ್ಯಕ್ತಿಗಳಿಗೆ 5 ಸಾವಿರ ದಂಡ ಮತ್ತು 3 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುತ್ತದೆ.
3) ಕಲಂ 21(ಎ) ಅನ್ವಯ ಕೊಳವೆ ಬಾವಿ ಕೊರೆಯುವ ಸಂಸ್ಥೆಗಳು ಅನುಷ್ಠಾನ ಏಜೆನ್ಸಿಗಳು, ಭೂ ಮಾಲಿಕರು ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿದ್ದಲ್ಲಿ ಒಂದು ವರ್ಷದ ಶಿಕ್ಷೆ ಮತ್ತು 20 ಸಾವಿರ ದಂಡ ವಿಧಿಸಲು ಅವಕಾಶ ಕಲ್ಪಿಸುತ್ತದೆ.