Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ: ಆರೋಪಿಯ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಣೆ; ಹೈಕೋರ್ಟ್ ಆದೇಶ ಎತ್ತಿ ಹಿಡಿದ ನ್ಯಾಯಾಲಯ

19/03/2026 1:07 PM

ಇರಾನ್ ಆಕ್ರಮಣದ ವಿರುದ್ಧ ವಿಶ್ವಸಂಸ್ಥೆಗೆ ಕತಾರ್ 9ನೇ ಬಾರಿ ಪತ್ರ: ‘ಕೂಡಲೇ ಕ್ರಮ ಕೈಗೊಳ್ಳಿ’ಎಂದು ಯುಎನ್‌ಎಸ್‌ಸಿಗೆ ಆಗ್ರಹ!

19/03/2026 1:02 PM

ವಯಸ್ಸು-ಎತ್ತರಕ್ಕೆ ಅನುಗುಣವಾಗಿ ಪುರುಷ, ಮಹಿಳೆಯರ ದೇಹದ ತೂಕ ಎಷ್ಟಿರಬೇಕು..? ಇಲ್ಲಿದೆ ಮಾಹಿತಿ

19/03/2026 12:59 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ 5884 ಅರಿವು ಕೇಂದ್ರಗಳಲ್ಲಿ 1 ವರ್ಷ ಸಂವಿಧಾನ ಜಾಗೃತಿ ‘ಅರಿವು ಯಾತ್ರೆ’ ಅಭಿಯಾನ: ಸಚಿವ ಪ್ರಿಯಾಂಕ್‌ ಖರ್ಗೆ
KARNATAKA

ರಾಜ್ಯದ 5884 ಅರಿವು ಕೇಂದ್ರಗಳಲ್ಲಿ 1 ವರ್ಷ ಸಂವಿಧಾನ ಜಾಗೃತಿ ‘ಅರಿವು ಯಾತ್ರೆ’ ಅಭಿಯಾನ: ಸಚಿವ ಪ್ರಿಯಾಂಕ್‌ ಖರ್ಗೆ

By kannadanewsnow0926/11/2025 1:16 PM

ಬೆಂಗಳೂರು: ʼಸಂವಿಧಾನ ದಿನʼದಂದು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ‘ಅರಿವು ಯಾತ್ರೆ’ ಅಭಿಯಾನದ ಮೂಲಕ ರಾಜ್ಯದ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಮುದಾಯದಲ್ಲಿ ಸಂವಿಧಾನದ ಮೂಲಭೂತ ಮೌಲ್ಯಗಳಾದ ಸ್ವಾತಂತ್ರ‍್ಯ, ಸಮಾನತೆ, ಬಾಂಧವ್ಯ, ನ್ಯಾಯ ಮತ್ತು ಗೌರವಗಳನ್ನು ದೈನಂದಿನ ಜೀವನದಲ್ಲಿ ಬೇರೂರಿಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಜಾರಿಗೊಳಿಸುವ ಮೂಲಕ ಸಂವಿಧಾನದ ಆಶಯಗಳನ್ನು ಗ್ರಾಮೀಣ ಜನಸಮುದಾಯಕ್ಕೆ ಅರಿವು ಮೂಡಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ವಿಕಾಸಸೌಧದದ ತಮ್ಮ ಕಚೇರಿ ಕೊಠಡಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಅರಿವು ಯಾತ್ರೆ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಇತರೆ ಅನುಷ್ಠಾನ ಇಲಾಖೆಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳ ಸಹಭಾಗಿತ್ವದಲ್ಲಿ ಇಡೀ ವರ್ಷ ಈ ಅಭಿಯಾನವನ್ನು ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಲ್ಲಿನ 5884 ಅರಿವು ಕೇಂದ್ರಗಳಲ್ಲಿ ನಡೆಸಲಿದ್ದು, ಅರಿವು ಕೇಂದ್ರಗಳನ್ನು ಸಾಂವಿಧಾನಿಕ ಮೌಲ್ಯಗಳನ್ನು ತಿಳಿಸುವ ಪ್ರಮುಖ ಕೇಂದ್ರಗಳನ್ನಾಗಿ ರೂಪಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದರು.

ಪ್ರತಿ ಗ್ರಾಮ ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲಿ ಸಂವಿಧಾನಿಕ ಮೌಲ್ಯಗಳನ್ನು ಸಾಂಸ್ಥಿಕಗೊಳಿಸುವುದು; ಗೌರವ, ಸಮಾನತೆ, ಬಾಂಧವ್ಯವನ್ನು ಪಾಲಿಸುವ ಮತ್ತು ಗ್ರಾಮ ಸಭೆಗಳಂತಹ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ನಾಗರಿಕರ ಬಲವನ್ನು ನಿರ್ಮಿಸುವುದು; ಸಮಾಜದ ಶಾಂತಿ ಮತ್ತು ಆರ್ಥಿಕ ಪ್ರಗತಿಗೆ ಬಾಂಧವ್ಯವು ಅತಿ ಮುಖ್ಯವೆಂಬುದನ್ನು ಒತ್ತಿಹೇಳುವುದು; ಹಕ್ಕುಗಳು ಮತ್ತು ಸರ್ಕಾರದ ಯೋಜನೆಗಳು ಪ್ರತಿಯೊಬ್ಬ ನಾಗರಿಕನಿಗೂ ಸಮರ್ಪಕವಾಗಿ ಲಭ್ಯವಾಗುವಂತೆ ಮಾಡುವುದು ಹಾಗೂ ಕರ್ನಾಟಕವನ್ನು ಪ್ರಗತಿಪರ ಸುಧಾರಣೆಗಳಲ್ಲಿ ರಾಷ್ಟ್ರೀಯ ಮಾದರಿಯಾಗಿ ರೂಪಿಸುವುದು ಈ ಆಂದೋಲನದ ಪ್ರಮುಖ ಉದ್ದೇಶವಾಗಿದೆ ಎಂದು ಸಚಿವರು ವಿವರಿಸಿದರು.

ಅಭಿಯಾನದ ಪ್ರಾರಂಭಿಕ ಹಂತದಲ್ಲಿ 5,884 ಅರಿವು ಕೇಂದ್ರಗಳ ಮೇಲ್ವಿಚಾರಕರಿಗೆ ಹಾಗೂ ಸ್ವ-ಸಹಾಯ ಸಂಘದ ಮಹಿಳೆಯರು, ನರೇಗಾ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರಿಗೂ ತರಬೇತಿ ನೀಡಲಾಗುವುದು ಎಂದೂ ಸಚಿವರು ಪ್ರಕಟಿಸಿದರು.

ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಾರ್ಯಕ್ರಮದ ನೇರ ಪ್ರಸಾರದಲ್ಲಿ ಪಾಲ್ಗೊಂಡಿದ್ದರು. ಸಂವಿಧಾನ ಪೀಠಿಕೆ ಭಾಗವನ್ನು ವಾಚನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂವಿಧಾನ ಜಾಗೃತಿ ಹಾಡುಗಳ ಗಾಯನ ಪ್ರಸ್ತುತ ಪಡಿಸಲಾಯಿತು. ಶಿಗ್ಗಾವಿ ಶಾಸಕ ಯಾಸೀರ್‌ ಅಹಮದ್‌ ಖಾನ್‌ ಪಠಾಣ್‌, ಕರ್ನಾಟಕ ಸರ್ಕಾರದ ಅಭಿವೃದ್ಧಿ ಆಯುಕ್ತರಾ ಡಾ. ಉಮಾ ಮಹದೇವನ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕಾರ್ಯದರ್ಶಿ ಸಮೀರ್‌ ಶುಕ್ಲಾ, ಪಂಚಾಯತ್‌ ರಾಜ್‌ ಇಲಾಖೆಯ ಕಾರ್ಯದರ್ಶಿ ಡಿ.ರಂದೀಪ್‌, ಪಂಚಾಯತ್‌ ರಾಜ್‌ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share. Facebook Twitter LinkedIn WhatsApp Email

Related Posts

ವಯಸ್ಸು-ಎತ್ತರಕ್ಕೆ ಅನುಗುಣವಾಗಿ ಪುರುಷ, ಮಹಿಳೆಯರ ದೇಹದ ತೂಕ ಎಷ್ಟಿರಬೇಕು..? ಇಲ್ಲಿದೆ ಮಾಹಿತಿ

19/03/2026 12:59 PM2 Mins Read

ಬೇವು ಬೆಲ್ಲ ಸೇವನೆ ಮಾಡುವಾಗ ಯಾವ ಮಂತ್ರ ಹೇಳಬೇಕು ಗೋತ್ತೇ..

19/03/2026 12:46 PM2 Mins Read

ಅಶ್ಲೀಲ ವಿಡಿಯೋ ಹಂಚಿಕೆ ಕೇಸ್ ನಲ್ಲಿ, ಜೆಡಿಎಸ್ ಕಾರ್ಯಕರ್ತರ ಹೆಸರು ಉಲ್ಲೇಖ : ಅಚ್ಚರಿಗೆ ಕಾರಣವಾದ SIT ಚಾರ್ಜ್ ಶೀಟ್!

19/03/2026 12:40 PM1 Min Read
Recent News

ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ: ಆರೋಪಿಯ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಣೆ; ಹೈಕೋರ್ಟ್ ಆದೇಶ ಎತ್ತಿ ಹಿಡಿದ ನ್ಯಾಯಾಲಯ

19/03/2026 1:07 PM

ಇರಾನ್ ಆಕ್ರಮಣದ ವಿರುದ್ಧ ವಿಶ್ವಸಂಸ್ಥೆಗೆ ಕತಾರ್ 9ನೇ ಬಾರಿ ಪತ್ರ: ‘ಕೂಡಲೇ ಕ್ರಮ ಕೈಗೊಳ್ಳಿ’ಎಂದು ಯುಎನ್‌ಎಸ್‌ಸಿಗೆ ಆಗ್ರಹ!

19/03/2026 1:02 PM

ವಯಸ್ಸು-ಎತ್ತರಕ್ಕೆ ಅನುಗುಣವಾಗಿ ಪುರುಷ, ಮಹಿಳೆಯರ ದೇಹದ ತೂಕ ಎಷ್ಟಿರಬೇಕು..? ಇಲ್ಲಿದೆ ಮಾಹಿತಿ

19/03/2026 12:59 PM

ಬೇವು ಬೆಲ್ಲ ಸೇವನೆ ಮಾಡುವಾಗ ಯಾವ ಮಂತ್ರ ಹೇಳಬೇಕು ಗೋತ್ತೇ..

19/03/2026 12:46 PM
State News
KARNATAKA

ವಯಸ್ಸು-ಎತ್ತರಕ್ಕೆ ಅನುಗುಣವಾಗಿ ಪುರುಷ, ಮಹಿಳೆಯರ ದೇಹದ ತೂಕ ಎಷ್ಟಿರಬೇಕು..? ಇಲ್ಲಿದೆ ಮಾಹಿತಿ

By kannadanewsnow5719/03/2026 12:59 PM KARNATAKA 2 Mins Read

ಬೆಂಗಳೂರು: ಇಂದಿನ ಅವಸರದ ಜೀವನಶೈಲಿಯಲ್ಲಿ ನಾವು ನಮ್ಮ ದೇಹದ ಬಗ್ಗೆ ಕಾಳಜಿ ವಹಿಸುವುದು ಮರೆಯುತ್ತಿದ್ದೇವೆ. ಆರೋಗ್ಯವಾಗಿರಲು ಕೇವಲ ಉತ್ತಮ ಆಹಾರ…

ಬೇವು ಬೆಲ್ಲ ಸೇವನೆ ಮಾಡುವಾಗ ಯಾವ ಮಂತ್ರ ಹೇಳಬೇಕು ಗೋತ್ತೇ..

19/03/2026 12:46 PM

ಅಶ್ಲೀಲ ವಿಡಿಯೋ ಹಂಚಿಕೆ ಕೇಸ್ ನಲ್ಲಿ, ಜೆಡಿಎಸ್ ಕಾರ್ಯಕರ್ತರ ಹೆಸರು ಉಲ್ಲೇಖ : ಅಚ್ಚರಿಗೆ ಕಾರಣವಾದ SIT ಚಾರ್ಜ್ ಶೀಟ್!

19/03/2026 12:40 PM

BREAKING : ಮಠದಲ್ಲೇ ನೇಣು ಬಿಗಿದುಕೊಂಡು ದೇವೇಂದ್ರಪ್ಪ ಸ್ವಾಮೀಜಿ ಆತ್ಮಹತ್ಯೆ !

19/03/2026 12:27 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.