ಓಹಿಯೋ: ಓಹಿಯೋದ ಅಕ್ರಾನ್ ನಲ್ಲಿ ಭಾನುವಾರ ಮುಂಜಾನೆ ಹುಟ್ಟುಹಬ್ಬದ ಪಾರ್ಟಿಯ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದು, 27 ಜನರನ್ನು ಗಾಯಗೊಂಡಿರೋದಾಗಿ ತಿಳಿದು ಬಂದಿದೆ.
ಶಂಕಿತ ಇನ್ನೂ ತಲೆಮರೆಸಿಕೊಂಡಿದ್ದಾನೆ. ಸ್ಥಳೀಯ ವರದಿಗಳ ಪ್ರಕಾರ, ಶೂಟಿಂಗ್ ಘಟನೆಯ ನಂತರ ಅನೇಕ ಆಸ್ಪತ್ರೆಗಳನ್ನು ಲಾಕ್ ಡೌನ್ ಮಾಡಲಾಗಿದೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
A mass shooting has reportedly occurred at a birthday party. More than 27 people have been shot, and several hospitals have been placed on lockdown. 🧐#Akron #Ohio pic.twitter.com/tQYpczWQ6Y
— T_CAS videos (@tecas2000) June 2, 2024
ಸುರಕ್ಷತಾ ಕಾರಣಗಳಿಗಾಗಿ ಶೂಟಿಂಗ್ ಸ್ಥಳದಿಂದ ದೂರವಿರಲು ಅಧಿಕಾರಿಗಳು ಸ್ಥಳೀಯರಿಗೆ ಸೂಚಿಸಿದ್ದಾರೆ. ಇದರಿಂದ ಅವರು ಯಾವುದೇ ಅಡೆತಡೆಯಿಲ್ಲದೆ ತಮ್ಮ ತನಿಖೆಯನ್ನು ಮುಂದುವರಿಸಬಹುದು.
ಕೆಲ್ಲಿ ಅವೆನ್ಯೂದಲ್ಲಿನ ಶೂಟಿಂಗ್ ಸ್ಥಳದಲ್ಲಿ ಗೊಂದಲದ ದೃಶ್ಯಗಳು ಉಂಟಾಗಿದ್ದು, ಹಲವಾರು ಗುಂಡುಗಳು ಕೇಳಿ ಜನರು ತಮ್ಮ ಪ್ರಾಣಕ್ಕಾಗಿ ಓಡುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.