Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : `ಟಾಯ್ಲೆಟ್ ಕಮೋಡ್‌’ನಲ್ಲಿ ಅಡಗಿ ಕುಳಿತ ವಿಷಕಾರಿ ಹಾವು : ವಿಡಿಯೋ ವೈರಲ್ | WATCH VIDEO

18/11/2025 7:16 AM

ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸುಳ್ಳು ಜಾಹೀರಾತುಗಳ ಬಗ್ಗೆ ಜಾಗರೂಕರಾಗಿರುವಂತೆ ನಾಗರಿಕರಿಗೆ ಗೃಹ ಸಚಿವಾಲಯ ಸಲಹೆ

18/11/2025 7:15 AM

BIG NEWS : ಬೆಂಗಳೂರು ಜನತೆ ಗಮನಿಸಿ : ಇನ್ಮುಂದೆ ಎಲ್ಲೆಂದರಲ್ಲಿ ಕಸ ಸುಟ್ಟರೆ 1 ಲಕ್ಷ ದಂಡ, 5 ವರ್ಷ ಜೈಲು ಫಿಕ್ಸ್!

18/11/2025 7:13 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಲೆಮಹದೇಶ್ವರ ಬೆಟ್ಟದ ಸ್ಮೃತಿವನಕ್ಕೆ 1 ಕೋಟಿ ಅನುದಾನ ಮಂಜೂರು: ಸಚಿವ ಈಶ್ವರ ಖಂಡ್ರೆ
KARNATAKA

ಮಲೆಮಹದೇಶ್ವರ ಬೆಟ್ಟದ ಸ್ಮೃತಿವನಕ್ಕೆ 1 ಕೋಟಿ ಅನುದಾನ ಮಂಜೂರು: ಸಚಿವ ಈಶ್ವರ ಖಂಡ್ರೆ

By kannadanewsnow0925/05/2025 7:15 PM

ಮೈಸೂರು : ಜಗತ್ತಿನಲ್ಲಿ ಹೆಣ್ಣಿಗಾಗಿ, ಹೊನ್ನಿಗಾಗಿ, ಮಣ್ಣಿಗಾಗಿ ಕ್ರಾಂತಿಗಳು ನಡೆದಿವೆ ಆದರೆ, ಸಮಾನತೆಗಾಗಿ, ಸಮಸಮಾಜದ ನಿರ್ಮಾಣಕ್ಕಾಗಿ ಕ್ರಾಂತಿ ನಡೆದಿದ್ದು ಕಲ್ಯಾಣದಲ್ಲಿ ಮಾತ್ರ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಮೈಸೂರು ಕಲಾಮಂದಿರದಲ್ಲಿಂದು ಆಯೋಜಿಸಿದ್ದ ಬಸವಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೌಢ್ಯ, ಅಸ್ಪೃಶ್ಯತೆ, ಶ್ರೇಣಿರಹಿತ, ಜಾತಿ ರಹಿತ ಸಮಾಜ ಬಸವಾದಿ ಶರಣರ ಕಲ್ಪನೆಯಾಗಿತ್ತು. 800 ವರ್ಷಗಳು ಕಳೆದರೂ ಅದು ಸಾಕಾರವಾಗಿಲ್ಲ ಎಂದರು.

ಮಹಿಳೆಯರಿಗೆ ಸಮಾನತೆ ನೀಡಿದ್ದೇ ಬಸವಾದಿ ಶರಣರು. ಅಕ್ಕನಿಗೆ ಮಹಾದೇವಿ ಎಂದು ಹೇಳುವ ಮೂಲಕ ಸರಿಸಮಾನವಾದ ಸ್ಥಾನ ಮಾನ ನೀಡಿದರು. ಮಹಿಳಾ ಸ್ವಾತಂತ್ರ್ಯ, ಮಹಿಳಾ ಸಮಾನತೆಗೆ 12ನೇ ಶತಮಾನದಲ್ಲೇ ನಾಂದಿ ಹಾಡಿದರು ಎಂದರು.

ವಚನಗಳಲ್ಲಿ ಎಲ್ಲಸಮಸ್ಯೆಗೂ ಪರಿಹಾರ:

ಇಂದು ಸಮಾಜದಲ್ಲಿನ ಎಲ್ಲ ಸಮಸ್ಯೆಗಳಿಗೂ ವಚನಗಳಲ್ಲಿ ಪರಿಹಾರವಿದೆ. ಇಂದು ಯುವಜನರು ಮದ್ಯ, ಮಾದಕವಸ್ತುಗಳ ದಾಸರಾಗುತ್ತಿದ್ದಾರೆ. ಇಂತಹ ಯುವಕರಿಗೆ ವಚನಗಳು ಮಾರ್ಗದರ್ಶನ ಮಾಡುತ್ತವೆ. ಸರಿದಾರಿಗೆ ತರುತ್ತವೆ ಎಂದರು.

ವೃತ್ತಿ ಗೌರವ ಅತಿ ಮುಖ್ಯ:

ಬಸವಾದಿ ಶರಣರು ಕಾಯಕವೇ ಕೈಲಾಸ ಎಂದು ಭಾವಿಸಿದ್ದರು. ಎಲ್ಲ ವೃತ್ತಿಗಳನ್ನೂ, ಎಲ್ಲ ರೀತಿಯ ವೃತ್ತಿ ಮಾಡುವವರನ್ನೂ ಸಮಾನವಾಗಿ ಕಾಣುತ್ತಿದ್ದರು. ಹೀಗಾಗಿಯೇ ಈಗ 700 ಕೋಟಿ ರೂಪಾಯಿ ವೆಚ್ಚದಲ್ಲಿ ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಆಧುನಿಕ ಅನುಭವ ಮಂಟಪದಲ್ಲಿ ಎಲ್ಲ 770 ಅಮರಗಣಂಗಳ ವೃತ್ತಿಗೆ ಗೌರವ ನೀಡಿ, ಅವರ ವಚನಗಳನ್ನು ಕೆತ್ತಿಸಲಾಗುತ್ತಿದೆ. ಶರಣ ಗ್ರಾಮದಲ್ಲಿ ವೃತ್ತಿ ಗೌರವಕ್ಕೆ ಪ್ರತಿಷ್ಠೆ ತರುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಅನುಭವ ಮಂಟಪಕ್ಕೆ 120 ಕೋಟಿ ರೂ. ಬಿಡುಗಡೆ :

ಹಣಕಾಸು ಸಚಿವರೂ ಆದ ಸಿದ್ದರಾಮಯ್ಯನವರು ಆಧುನಿಕ ಅನುಭವ ಮಂಟಪ ನಿರ್ಮಾಣಕ್ಕೆ 120 ಕೋಟಿ ರೂ. ನೀಡಿದ್ದು, ಇನ್ನೂ 400 ಕೋಟಿ ರೂ. ವೆಚ್ಚದೊಂದಿಗೆ ಮುಂದಿನ ವರ್ಷದೊಳಗೆ ಅನುಭವ ಮಂಟಪ ಪೂರ್ಣಗೊಳಿಸುವುದು ತಮ್ಮ ಗುರಿಯಾಗಿದೆ ಎಂದರು.

ಇಂದು ಸಮಾಜ ದ್ವೇಷ, ಅಸೂಯೆಗಳಿಂದ ತುಂಬಿದೆ, ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ಒಳಕು ಮೂಡಿಸಿ ಸ್ವಾರ್ಥ ಸಾಧನೆಗೆ ಕೆಲವರು ಪ್ರಯತ್ನಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಸಮಾಜವನ್ನು ಒಗ್ಗೂಡಿಸುವ ಅಗತ್ಯವಿದ್ದು, ಅದಕ್ಕೆ ಬಸವಾದಿ ಶರಣರ ತತ್ವಾದರ್ಶಗಳ ಪಾಲನೆ ಪರಿಹಾರವಾಗುತ್ತದೆ ಎಂದರು.

ಸಮಾಜ ತಮಗೆ ಎಲ್ಲವನ್ನೂ ನೀಡಿದ್ದು, ಸಮಾಜಕ್ಕೆ ತಾವು ಕೂಡ ಏನಾದರೂ ನೀಡಬೇಕು ಎಂಬುದು ತಮ್ಮ ತಂದೆಯಿಂದ ಕಲಿತ ಪಾಠವಾಗಿದ್ದು, ತಾವು ವೀರಶೈವ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ತಾವು ಸಮಾಜದ ಕಾರ್ಯಕ್ಕೆ ಸಮಯ ಮೀಸಲಿಟ್ಟಿರುವುದಾಗಿ ಹೇಳಿದರು.

ಮಲೆ ಮಹದೇಶ್ವರ ಬೆಟ್ಟದ ಸ್ಮೃತಿ ವನಕ್ಕೆ 1 ಕೋಟಿ ರೂ. :

ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಪೀಠಾಧ್ಯಕ್ಷರ ಮನವಿಗೆ ಸರ್ಕಾರ ಸ್ಪಂದಿಸಿದ್ದು, ಬೆಟ್ಟದಲ್ಲಿ ಸ್ಮೃತಿವನ ನಿರ್ಮಾಣಕ್ಕಾಗಿ 1 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ಈಶ್ವರ ಖಂಡ್ರೆ ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರುಗಳಾದ ಬಿ.ವೈ. ವಿಜಯೇಂದ್ರ, ಶ್ರೀವತ್ಸ ಸಂಸತ್ ಸದಸ್ಯ ಯಧುವೀರ ಒಡೆಯರ್ ಹಾಗೂ ಹರಚರ ಗುರುಮೂರ್ತಿಗಳು ಪಾಲ್ಗೊಂಡಿದ್ದರು.

BREAKING: ಭಾರಿ ಮಳೆಯಿಂದ ಕುಸಿದು ಬಿದ್ದ ಅಂಗಡಿಯ ಗೋಡೆ: ನಾಲ್ವರಿಗೆ ಗಂಭೀರ ಗಾಯ

BIG NEWS : ರಾಜ್ಯದಲ್ಲಿ ಮೇ.29ರಿಂದ ಶಾಲೆಗಳು ಪುನಾರಂಭ : ಮೊದಲ ದಿನವೇ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ ವಿತರಣೆ.!

Share. Facebook Twitter LinkedIn WhatsApp Email

Related Posts

SHOCKING : `ಟಾಯ್ಲೆಟ್ ಕಮೋಡ್‌’ನಲ್ಲಿ ಅಡಗಿ ಕುಳಿತ ವಿಷಕಾರಿ ಹಾವು : ವಿಡಿಯೋ ವೈರಲ್ | WATCH VIDEO

18/11/2025 7:16 AM1 Min Read

BIG NEWS : ಬೆಂಗಳೂರು ಜನತೆ ಗಮನಿಸಿ : ಇನ್ಮುಂದೆ ಎಲ್ಲೆಂದರಲ್ಲಿ ಕಸ ಸುಟ್ಟರೆ 1 ಲಕ್ಷ ದಂಡ, 5 ವರ್ಷ ಜೈಲು ಫಿಕ್ಸ್!

18/11/2025 7:13 AM1 Min Read

ALERT : ಪೋಷಕರೇ ಎಚ್ಚರ : ಮಕ್ಕಳ ಕಣ್ಣಿಗೆ `ಕಾಜಲ್’ ಹಚ್ಚಿದ್ರೆ ಈ ಗಂಭೀರ ಸಮಸ್ಯೆ ಬರಬಹುದು.!

18/11/2025 6:58 AM1 Min Read
Recent News

SHOCKING : `ಟಾಯ್ಲೆಟ್ ಕಮೋಡ್‌’ನಲ್ಲಿ ಅಡಗಿ ಕುಳಿತ ವಿಷಕಾರಿ ಹಾವು : ವಿಡಿಯೋ ವೈರಲ್ | WATCH VIDEO

18/11/2025 7:16 AM

ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸುಳ್ಳು ಜಾಹೀರಾತುಗಳ ಬಗ್ಗೆ ಜಾಗರೂಕರಾಗಿರುವಂತೆ ನಾಗರಿಕರಿಗೆ ಗೃಹ ಸಚಿವಾಲಯ ಸಲಹೆ

18/11/2025 7:15 AM

BIG NEWS : ಬೆಂಗಳೂರು ಜನತೆ ಗಮನಿಸಿ : ಇನ್ಮುಂದೆ ಎಲ್ಲೆಂದರಲ್ಲಿ ಕಸ ಸುಟ್ಟರೆ 1 ಲಕ್ಷ ದಂಡ, 5 ವರ್ಷ ಜೈಲು ಫಿಕ್ಸ್!

18/11/2025 7:13 AM

ಡಾ. ಶಾಹೀನ್ ಭಯೋತ್ಪಾದನಾ ಪ್ರಕರಣ: 3 ಪಾಸ್‌ಪೋರ್ಟ್, ಪಾಕ್ ಪ್ರವಾಸ, 7 ಬ್ಯಾಂಕ್ ಖಾತೆಗಳ ಸ್ಫೋಟಕ ಸತ್ಯ!

18/11/2025 7:05 AM
State News
KARNATAKA

SHOCKING : `ಟಾಯ್ಲೆಟ್ ಕಮೋಡ್‌’ನಲ್ಲಿ ಅಡಗಿ ಕುಳಿತ ವಿಷಕಾರಿ ಹಾವು : ವಿಡಿಯೋ ವೈರಲ್ | WATCH VIDEO

By kannadanewsnow5718/11/2025 7:16 AM KARNATAKA 1 Min Read

ಮನೆಯ ಸ್ನಾನಗೃಹದಲ್ಲಿರುವ ಟಾಯ್ಲೆಟ್ ಸೀಟಿನ ಒಳಗೆ ವಿಷಕಾರಿ ಹಾವು ಅಡಗಿ ಕುಳಿತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾಮಾಜಿಕ…

BIG NEWS : ಬೆಂಗಳೂರು ಜನತೆ ಗಮನಿಸಿ : ಇನ್ಮುಂದೆ ಎಲ್ಲೆಂದರಲ್ಲಿ ಕಸ ಸುಟ್ಟರೆ 1 ಲಕ್ಷ ದಂಡ, 5 ವರ್ಷ ಜೈಲು ಫಿಕ್ಸ್!

18/11/2025 7:13 AM

ALERT : ಪೋಷಕರೇ ಎಚ್ಚರ : ಮಕ್ಕಳ ಕಣ್ಣಿಗೆ `ಕಾಜಲ್’ ಹಚ್ಚಿದ್ರೆ ಈ ಗಂಭೀರ ಸಮಸ್ಯೆ ಬರಬಹುದು.!

18/11/2025 6:58 AM

ಗಮನಿಸಿ : ನೀವು 5 ವರ್ಷಗಳಿಂದ ಒಂದೇ ʼಮೊಬೈಲ್ ನಂಬರ್ʼ ಬಳಸುತ್ತಿದ್ದೀರಾ ? ಈ ವಿಡಿಯೋ ಒಮ್ಮೆ ನೋಡಿ | WATCH VIDEO

18/11/2025 6:46 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.