ನವದೆಹಲಿ: ಇತ್ತೀಚಿನ ಬೆಳವಣಿಗೆಯಲ್ಲಿ, ಲೋಕಸಭಾ ಚುನಾವಣೆಯ ಏಳನೇ ಮತ್ತು ಅಂತಿಮ ಹಂತದ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಹಲವಾರು ಭಾಗಗಳಲ್ಲಿ ಶನಿವಾರ (ಜೂನ್ 1) ಹಿಂಸಾಚಾರ ಭುಗಿಲೆದ್ದಿದೆ.
ಜಾದವ್ಪುರ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಕಚ್ಚಾ ಬಾಂಬ್ಗಳನ್ನು ಎಸೆಯಲಾಗಿದ್ದು, ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಮೀಸಲು ವಿದ್ಯುನ್ಮಾನ ಮತದಾನ ಯಂತ್ರವನ್ನು (ಇವಿಎಂ) ಗುಂಪೊಂದು ನೀರಿಗೆ ಎಸೆದಿದೆ.ಜಾದವ್ಪುರ ಕ್ಷೇತ್ರದ ಭಂಗರ್ನಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ಬೆಂಬಲಿಗರು ಘರ್ಷಣೆ ನಡೆಸಿದರು. ಪೊಲೀಸರ ಮಧ್ಯಪ್ರವೇಶವು ಪ್ರತಿಭಟನೆಗಳಿಗೆ ಕಾರಣವಾಯಿತು, ಎರಡೂ ಪಕ್ಷಗಳು ಪರಸ್ಪರ ಆರೋಪ ಮಾಡಿದವು. ಜನಸಮೂಹವನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು ಮತ್ತು ಈ ಪ್ರದೇಶದಿಂದ ಹಲವಾರು ಕಚ್ಚಾ ಬಾಂಬ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.
Democracy In Bengal
EVM & VVPAT Machine Were Reportedly Thrown In Water By A Mob At Booth Number 40, 41 In Kultai, South 24 Parganas, West Bengal. #ExitPoll pic.twitter.com/mZe7ygkXtH
— Narendra Modi Fan (Modi Ka Parivar) (@narendramodi177) June 1, 2024