ಬೆಂಗಳೂರು: ರಾಜ್ಯದ ಸರ್ಕಾರಿ, ಅನುದಾನಿತ ಶಾಲೆಗಳ ಒಂದರಿಂದ 10ನೇ ತರಗತಿ ಮಕ್ಕಳಿಗೆ ವಾರದಲ್ಲಿ ಮೂರು ದಿನ ರಾಗಿ ಹೆಲ್ತ್ ಮಿಕ್ಸ್ ವಿತರಿಸುವ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರು ಇಂದು ಚಾಲನೆ ನೀಡಲಿದ್ದಾರೆ. ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ 53,619 ಪ್ರಾಥಮಿಕ, ಪ್ರೌಢಶಾಲೆಗಳ 55,55,952 ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಎನ್ನಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ 22ರಂದು ಬೆಂಗಳೂರಿನಲ್ಲಿ ಯೋಜನೆಗೆ ಚಾಲನೆ ನೀಡಲಿದ್ದು, ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳ ಆಯ್ದ ಶಾಲೆಗಳಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಮಾರ್ಚ್ 31ರೊಳಗೆ ರಾಜ್ಯಾದ್ಯಂತ ಇದನ್ನು ವಿಸ್ತರಣೆ ಮಾಡಲಾಗುವುದು ಎನ್ನಲಾಗಿದೆ.
‘ಅಕ್ಕಿ ಬೆಲೆ’ ನಿಯಂತ್ರಣಕ್ಕೆ ಕೇಂದ್ರದಿಂದ ಹೊಸ ಪ್ರಯತ್ನ: ದಾಸ್ತಾನು ಸಂಗ್ರಹದ ಮಾಹಿತಿ ನೀಡುವಂತೆ ಸೂಚನೆ
ಈ ನಡುವೆ ಈ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ. ಶಾಲಾ ಶಿಕ್ಷಣ ಇಲಾಖೆಯ ಸುತ್ತೋಲೆಯಲ್ಲಿ ಉಲ್ಲೇಖ ಮಾಡಿರುವಂತೆ 2023-24ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಬಿಸಿಹಾಲಿನೊಂದಿಗೆ ಬೆರೆಸಿ ಕುಡಿಯಲು ಶ್ರೀ ಸತ್ಯ ಸಾಯಿ ಅನ್ನಪೂರ್ಣ ಸಂಸ್ಥೆಯವರು ಉಚಿತವಾಗಿ ನೀಡುತ್ತಿರುವ ಪೂರಕ ಪೌಷ್ಠಿಕ ಆಹಾರ ಸಾಯಿ ಶೂರ್ ರಾಗಿ ಹೆಲ್ತ್ ಮಿಕ್ಸ್‌ನ್ನು ವಿತರಿಸುವ ರಾಜ್ಯಮಟ್ಟದ ಉದ್ಘಾಟನಾ ಕಾರ್ಯಕ್ರಮವನ್ನು ಜಿಲ್ಲಾ ಮತ್ತು ತಾಲ್ಲೋಕು ಕೇಂದ್ರಗಳ ಶಾಲೆಗಳಲ್ಲಿ ಸಾಂಕೇತಿಕವಾಗಿ ಏರ್ಪಡಿಸಿ ಅನುಷ್ಠಾನಗೊಳಿಸುವ ಬಗ್ಗೆ ತಿಳಿಸಿದ್ದು, ಅದರಂತೆ, 2023ನೇ ವರ್ಷವನ್ನು ಅಂತರ್ ರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಿರುವುದು ಹೆಮ್ಮೆಯ ವಿಷಯವಾಗಿದೆ. ಇದರ ಮಹತ್ವ ಪೂರ್ಣ ಆಚರಣೆಯ ಹಿನ್ನಲೆಯಲ್ಲಿ, ಮೇಲ್ಕಂಡ ವಿಷಯ ಹಾಗೂ ಉಲ್ಲೇಖಿತ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿರುವಂತೆ, ಶಾಲಾ ಮಕ್ಕಳಲ್ಲಿರುವ ಅಪೌಷ್ಠಿಕತೆ ನಿವಾರಿಸಲು, ಅನಿಮಿಯವನ್ನು ತಡೆಗಟ್ಟಲು, ಉತ್ತಮ ಆರೋಗ್ಯಕರ ಬೆಳವಣಿಗೆಯೊಂದಿಗೆ ಶಾಲೆಯ ನಿರಂತರ ಕಲಿಕೆಯನ್ನು ಪ್ರೋತ್ಸಾಹಿಸಲು ಸಿರಿಧಾನ್ಯಗಳ ಆಹಾರದ ಬಳಕೆಯ ಉಪಯುಕ್ತತೆ ಮತ್ತು ಸಿರಿಧಾನ್ಯಗಳಲ್ಲಿ ದೊರೆಯುವ ಬಹುಪೌಷ್ಠಿಕಾಂಶಗಳ ಕುರಿತು ಅರಿವು-ಜಾಗೃತಿಯನ್ನು ಶಾಲಾ ಮಕ್ಕಳಲ್ಲಿ ಮೂಡಿಸಲು, ಬೆಳಗಿನ ಪ್ರಾರ್ಥನಾ ಸಮಯದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕ್ಷೀರ ಭಾಗ್ಯ ಯೋಜನೆಯಡಿ ಬಿಸಿಹಾಲು ತಯಾರಿಸಿ ವಿತರಿಸುವ ಸಂದರ್ಭದಲ್ಲಿ ಬಿಸಿಹಾಲಿನೊಂದಿಗೆ ಬೆರೆಸಿ ಶಾಲಾ ಮಕ್ಕಳು ಕುಡಿಯಲು ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ (ರಿ), ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ತಾ/ಜಿಲ್ಲೆ, ಈ ಸಂಸ್ಥೆಯವರು ಬಹು ಪೌಷ್ಠಿಕಾಂಶವುಳ್ಳ ಸಾಯಿ ಶೂ ರಾಗಿ ಹೆಲ್ತ್ ಮಿಕ್ಸ್ ಮಿಶ್ರಣವನ್ನು ಉಚಿತವಾಗಿ ನೀಡಲು ಮುಂದೆ ಬಂದಿರುತ್ತಾರೆ.
ಬೆಂಗಳೂರು : ಏರ್ ಇಂಡಿಯಾ ಸಿಬ್ಬಂದಿಗೆ ‘ಉಗ್ರನೆಂದು’ ಬೆದರಿಕೆ ಹಾಕಿದ ಪ್ರಯಾಣಿಕ : ಆರೋಪಿ ಪೋಲೀಸರ ವಶ
ಸದರಿ ಸಂಸ್ಥೆಯವರು ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಶಾಲಾ ಮಕ್ಕಳಿಗೆ ವಿತರಿಸುತ್ತಿದ್ದು, ಪ್ರಸ್ತುತ ನಮ್ಮ ರಾಜ್ಯದ ಎಲ್ಲಾ 31 ಕಂದಾಯ ಮತ್ತು 03 ಶೈಕ್ಷಣಿಕ ಜಿಲ್ಲೆಗಳು ಸೇರಿದಂತೆ ಒಟ್ಟು 53619 ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 1 ರಿಂದ 10ನೇ ತರಗತಿಗಳ ಒಟ್ಟು 5555992 ವಿದ್ಯಾರ್ಥಿಗಳಿಗೆ ಪ್ರತಿ ದಿನ ಒಬ್ಬ ವಿದ್ಯಾರ್ಥಿಗೆ 5 ಗ್ರಾಂ.ನಷ್ಟು ವಾರದಲ್ಲಿ 3 ದಿನಗಳಂದು ಉಚಿತವಾಗಿ ವಿತರಿಸಲು ಯೋಜನೆ ರೂಪಿಸಿದ್ದು, ಇದರ ಅನುಷ್ಠಾನಕ್ಕಾಗಿ ಪ್ರಾರಂಭಿಕವಾಗಿ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೋಕು ಕೇಂದ್ರಗಳಲ್ಲಿ ಆಯ್ದ ಶಾಲೆಗಳಲ್ಲಿ ಸದರಿ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಂಕೇತಿಕಾಗಿ ಹಮ್ಮಿಕೊಳ್ಳುವಂತೆ ಸೂಚಿಸಿದೆ.
ಸದರಿ ಮಕ್ಕಳ ಅಭಿವೃದ್ಧಿ ಉದ್ದೇಶಿತ ನೂತನ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಸನ್ಮಾನ ಮುಖ್ಯಮಂತ್ರಿಗಳು ದಿನಾಂಕ, 22.02.2024ರಂದು ಬೆಂಗಳೂರು ನಗರದ ಕೇಂದ್ರ ಸ್ಥಳದಲ್ಲಿ ಸಾಂಕೇತಿಕವಾಗಿ ಉದ್ಘಾಟಿಸಿ ರಾಜ್ಯ ಮಟ್ಟದಲ್ಲಿ ಚಾಲನೆ ನೀಡುವವರಿದ್ದು, ಸದರಿ ದಿನಾಂಕದಂದೇ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳ ಆಯ್ದ ಶಾಲೆಯೊಂದರಲ್ಲಿ, ಸ್ಥಳೀಯ ಜನಪ್ರತಿನಿಧಿಗಳ ಭಾಗಿತ್ವ ಮತ್ತು ಸಹಕಾರದೊಂದಿಗೆ ಉದ್ಘಾಟನಾ ಕಾರ್ಯಕ್ರಮವನ್ನು ಸರಳವಾಗಿ ಹಮ್ಮಿಕೊಂಡು ಯಶಸ್ವಿಯಾಗಿ ನೆರವೇರಿಸುವಂತೆ ಸಂಬಂಧಿಸಿದ ಜಿಲ್ಲೆಯ ಹಾಗೂ ತಾಲ್ಲೂಕುಗಳ ಇಲಾಖಾ ಅಧಿಕಾರಿಗಳಿಗೆ ಈ ಮೂಲಕ ಸೂಚನೆ ನೀಡಲಾಗಿದೆ. \
ರಾಮನಗರ : 40 ವಕೀಲರ ವಿರುದ್ಧ FIR ದಾಖಲು ಕೇಸ್ : ಪಿಎಸ್ಐ ಸಸ್ಪೆಂಡ್ ಹಿನ್ನೆಲೆ ಪ್ರತಿಭಟನೆ ವಾಪಾಸ್
ಸಾಯಿ ಕ್ಯೂರ್ ರಾಗಿ ಹೆಲ್ಸ್ ಮಿಕ್ಸ್ ಪೌಡರ್ ಪೂರಕ ಪೌಷ್ಠಿಕ ಆಹಾರವನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸುತ್ತಿರುವ ಸಂಸ್ಥೆಯ ಬಗ್ಗೆ :
ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ (ರಿ), ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ, ಈ ಸಂಸ್ಥೆಯು ಒಂದು ಪ್ರಸಿದ್ದ ಶೈಕ್ಷಣಿಕ ಸೇವಾ ಸಂಸ್ಥೆಯಾಗಿದ್ದು, ಸಾಯಿ ಕ್ಯೂರ್ ಹೆಲ್ತ್ ಮಿಕ್ಸ್ ಪೌಡರ್ ಪೂರಕ ಪೌಷ್ಠಿಕ ಆಹಾರ ಮಿಶ್ರಣವನ್ನು ತಯಾರಿಸುವ ಸುಸಜ್ಜಿತ ಉತ್ಪಾದಕ ಘಟಕವನ್ನು ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ತಾಲ್ಲೂಕು / ಜಿಲ್ಲೆ ಇಲ್ಲಿ ಹೊಂದಿರುತ್ತಾರೆ. ದಿನವೊಂದಕ್ಕೆ 25 ಮೆಟ್ರಿಕ್ ಟನ್ ಪ್ರಮಾಣದಷ್ಟು ಮಿಶ್ರಣವನ್ನು ತಯಾರಿಸಿ ಪೂರೈಸುವ ಸಾಮರ್ಥ್ಯವನ್ನು ಸದರಿ ಉತ್ಪಾದಕ ಘಟಕವು ಹೊಂದಿರುತ್ತದೆ. ಇದರಂತೆ, ಪ್ರತಿ ಒಂದು ತಿಂಗಳಿಗೆ ಅಗತ್ಯವಿರುವ ರಾಜ್ಯದ ಶಾಲೆಗಳ ಒಟ್ಟು 5555992 ವಿದ್ಯಾರ್ಥಿಗಳಿಗೆ ಬೇಡಿಕೆಗೆ ಅನುಗುಣವಾಗಿ ಒಟ್ಟು ಪ್ರಮಾಣ 333.36 ಮೆಟ್ರಿಕ್ ಟನ್ ಉತ್ಪಾದಿಸಿ ಒಟ್ಟು 18 ದಿನಗಳ ಅವಧಿಯಲ್ಲಿ ರಾಜ್ಯದ ಎಲ್ಲಾ ಶಾಲೆಗಳಿಗೆ ಪೂರೈಸುವ ಸಾಮರ್ಥ್ಯವನ್ನು ಸದರಿ ಸಂಸ್ಥೆಯು ಹೊಂದಿರುತ್ತದೆ. ಪ್ರತಿ 1 ಕೆ.ಜಿ. ಸಾಯಿ ಶೂರ್ ರಾಗಿ ಹೆಲ್ತ್ ಮಿಕ್ಸ್ ಪೌಡರ್ ಪಾಕೆಟ್‌ನ ಮೌಲ್ಯ ರೂ. 90.00 ಆಗಿರುತ್ತದೆ. ಇದರಂತೆ, 1 ತಿಂಗಳ ರಾಜ್ಯದ ಬೇಡಿಕೆ ಪೂರೈಸಲು 333.36 ಮೆಟ್ರಿಕ್ ಟನ್ ಉತ್ಪಾದನೆಗೆ ಸಂಸ್ಥೆಗೆ ಪ್ರತಿ ತಿಂಗಳಿಗೆ ರೂ.300.02 ಲಕ್ಷಗಳು ಕಚ್ಚಾ ವಸ್ತುಗಳನ್ನು ಖರೀದಿಸಿ ಪುಡಿಯನ್ನು ಉತ್ಪಾದಿಸಲು ವೆಚ್ಚವಾಗುತ್ತದೆ. ಇಷ್ಟನ್ನೂ ಸದರಿ ಸಂಸ್ಥೆಯವರು ಉಚಿತವಾಗಿ ಭರಿಸಲಿದ್ದಾರೆ.
ರಾಜ್ಯ ಮಟ್ಟದ ಉದ್ಘಾಟನಾ ಕಾರ್ಯಕ್ರಮಕ್ಕೆ ಹಾಗೂ ಮಾರ್ಚ 2024ರ ಅಂತ್ಯದವರೆಗೆ ಒಟ್ಟು 12 ದಿನಗಳ ಅವಧಿಗೆ ರಾಜ್ಯದ ಬೇಡಿಕೆಗೆ ಅನುಗುಣವಾಗಿ ಸಾಯಿ ಶೂರ್ ರಾಗಿ ಹೆಲ್ತ್ ಮಿಕ್ಸ್ ಪೌಡರ್‌ನ್ನು ಉತ್ಪಾದಿಸಿ ಸರಬರಾಜುಗೊಳಿಸಲು ಅಂದಾಜು 6 ಮೆಟ್ರಿಕ್ ಟನ್ ಪ್ರಮಾಣದಷ್ಟು ಸಂಸ್ಥೆಯ ಮುದ್ದೇನಹಳ್ಳಿ ಉತ್ಪಾದಕ ಘಟಕದಲ್ಲಿ ಸಿದ್ಧಪಡಿಸಿಕೊಂಡು, ಎಲ್ಲಾ 34 ಜಿಲ್ಲೆಗಳಿಗೆ ಪೂರೈಸಲು ರಾಜ್ಯದಲ್ಲಿರುವ ಕೆ.ಎಂ.ಎಫ್. ಸಂಸ್ಥೆಯವರ 15 ಜಿಲ್ಲಾ ಕೇಂದ್ರ ಹಾಲು ಉತ್ಪಾದಕ ಘಟಕಗಳ ಸಂಗ್ರಹಣಾ ಗೋದಾಮುಗಳಿಗೆ, ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಸಂಸ್ಥೆಯು ತನ್ನ ಉಚಿತ ಸಾಗಾಣಿಕೆಯ ವ್ಯವಸ್ಥೆಯಲ್ಲಿಯೇ ಚಿಕ್ಕಬಳ್ಳಾಪುರ ತಾ/ಜಿಲ್ಲೆಯ ಮುದ್ದೇನಹಳ್ಳಿಯಿಂದ ಪ್ರಸ್ತುತ ಪೂರೈಸಿರುತ್ತಾರೆ. ಹೀಗೆ ತಲುಪಿಸಿದ 15 ಜಿಲ್ಲಾ ಕೆ.ಎಂ.ಎಫ್. ಹಾಲು ಉತ್ಪಾದಕ ಘಟಕಗಳಿಂದ, ಕೆ.ಎಂ.ಎಫ್, ಸಾಗಾಣಿಕಾ ವ್ಯವಸ್ಥೆಯ ಮೂಲಕ, ಜಿಲ್ಲಾ ಕೆ.ಎಂ.ಎಫ್. ಹಾಲು ಒಕ್ಕೂಟದವರ ಸಹಕಾರದಿಂದ, ಉಚಿತವಾಗಿ ಸಂಬಂಧಿಸಿದ ಜಿಲ್ಲೆಗಳ ವ್ಯಾಪ್ತಿಯ ಎಲ್ಲಾ ತಾಲ್ಲೋಕುಗಳ ಎಲ್ಲಾ ಶಾಲೆಗಳ ಅಡುಗೆ ಕೇಂದ್ರಗಳಿಗೆ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಉಗ್ರಾಣ ಕೇಂದ್ರಗಳಿಗೆ ಸಾಗಾಣಿಕೆ ಮಾಡಿ, ಉದ್ಘಾಟನೆಗೊಂಡ ದಿನಾಂಕದಿಂದ ಮಾರ್ಚ-2024ರ ಅಂತ್ಯದವರೆಗೆ ಶಾಲಾ ಮಕ್ಕಳಿಗೆ ವಿತರಿಸುವ ವ್ಯವಸ್ಥೆಯನ್ನು ಕೈಗೊಂಡಿರುತ್ತದೆ.
2. ಸಾಯಿ ಕ್ಯೂರ್ ರಾಗಿ ಹೆಲ್ತ್ ಮಿಕ್ಸ್ ವಿತರಣೆಯ ನೂತನ ಕಾರ್ಯಕ್ರಮದ ಉದ್ದೇಶ:
2.1 ರಾಜ್ಯದ ಶಾಲಾ ಮಕ್ಕಳಲ್ಲಿರುವ ಅಪೌಷ್ಠಿಕತೆ ಮತ್ತು ಅನಿಮಿಯಾ (ರಕ್ತ ಹೀನತೆ)ವನ್ನು ನಿವಾರಿಸುವುದು. 2.2 ಶಾಲಾ ಮಕ್ಕಳಲ್ಲಿ ನಿರಂತರ ಕಲಿಕೆಯನ್ನು ಕಲಿಕಾ ಚಟುವಟಿಕೆಯಲ್ಲಿ ಆಸಕ್ತಿಯಿಂದ ಲವಲವಿಕೆಯಿಂದ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವುದು.
2.3 ಶಾಲಾ ಮಕ್ಕಳಲ್ಲಿ ರಾಜ್ಯದಲ್ಲಿ ದೊರೆಯುವ ಸಿರಿಧಾನ್ಯ ಬೆಳೆಗಳ ಬಗ್ಗೆ ಪರಿಚಯ, ಸಿರಿಧಾನ್ಯ ಆಹಾರದ ಪೌಷ್ಠಿಕಾಂಶಗಳ, ಆರೋಗ್ಯಕರ ಪ್ರಯೋಜನಗಳ ಬಗ್ಗೆ ಅರಿವು-ಜಾಗೃತಿ ಮೂಡಿಸುವುದು.
2.4 ಶಾಲಾ ಮಕ್ಕಳ ಸಮತೋಲಿತ ಆರೋಗ್ಯಕರ ಬೆಳವಣಿಗೆ, ರೋಗ ನಿರೋಧಕತೆ ಮತ್ತು ಉತ್ತಮ ಆರೋಗ್ಯವನ್ನು ವೃದ್ಧಿಸಿ ಸಂರಕ್ಷಿಸುವುದು.
3. ಸಾಯಿ ಕ್ಯೂರ್ ರಾಗಿ ಹೆಲ್ತ್ ಮಿಕ್ಸ್ ವಿತರಣೆ ಕಾರ್ಯಕ್ರಮದ ಅನುಷ್ಠಾನದ ಬಗ್ಗೆ :
3.1 ಸಾಯಿ ಕ್ಯೂರ್ ರಾಗಿ ಹೆಲ್ತ್ ಮಿಕ್ಸ್‌ನ್ನು ಶಾಲಾ ಮಕ್ಕಳಿಗೆ ವಿತರಿಸುವ ಬಗ್ಗೆ :
ಶಾಲಾ ದಿನಗಳಂದು ಪ್ರತಿ ವಾರದಲ್ಲಿ ಕ್ಷೀರ ಭಾಗ್ಯ ಯೋಜನೆಯಡಿ ಬೆಳಗಿನ ಶಾಲಾ ಪ್ರಾರ್ಥನಾ ಸಮಯದಲ್ಲಿ 1-10ನೇ ತರಗತಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಬಿಸಿಹಾಲು (ಸಕ್ಕರೆಯುಕ್ತ) ಪ್ರತಿ ದಿನಕ್ಕೆ ಪ್ರತಿ ವಿದ್ಯಾರ್ಥಿಗೆ 150 ಮಿ.ಲೀ. ಪ್ರಮಾಣಕ್ಕೆ, ಉಚಿತವಾಗಿ ನೀಡುತ್ತಿರುವ ಸಾಯಿ ಶೂರ್ ರಾಗಿ ಹೆಲ್ತ್ ಮಿಕ್ಸ್ ಪೌಡರ್‌ನಿಂದ ಪ್ರತಿ ವಿದ್ಯಾರ್ಥಿಗೆ 5 ಗ್ರಾಂ. ಪ್ರಮಾಣದಲ್ಲಿ ಮಿಶ್ರಣವನ್ನು ಸಿದ್ಧಪಡಿಸಿ ಬಿಸಿಹಾಲಿನಲ್ಲಿ ಬೆರೆಸಿ ಕದಡಿ | ಕಲಾಯಿಸಿ ಕುದಿಸಿ ಸಾಯಿ ಕ್ಯೂರ್ ರಾಗಿ ಹೆಲ್ತ್ ಮಿಕ್ಸ್ ಬೆರೆಸಿದ ಬಿಸಿಹಾಲನ್ನು ಸಿದ್ದಪಡಿಸಿ ಶಾಲಾ ಮಕ್ಕಳಿಗೆ ಕುಡಿಯಲು ವಿತರಿಸುವುದು.