ನವದೆಹಲಿ: ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಮಗ್ರ ತನಿಖೆಗಾಗಿ ಮತ್ತು ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಬೆಳಗ್ಗೆ ಸಂಸತ್ತಿನ ಮುಂಭಾಗದಲ್ಲಿ ಕರ್ನಾಟಕದ ಬಿಜೆಪಿ ಸಂಸದರಿಂದ ಪ್ರತಿಭಟನೆ ನಡೆಯಿತು.
ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅ ಹಾಗೂ ಹಾಲಿ ಹಾವೇರಿ ಸಂಸದ ಮುಡಾದ ಆಸ್ತಿಯನ್ನು ಕಾಂಗ್ರೆಸ್ ಲೂಟಿ ಮಾಡಿದೆ. ಅವರು ಕೋಟಿಗಟ್ಟಲೆ ಲಾಭ ಗಳಿಸಿದರು. ಇದೆಲ್ಲವನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಮಾಡಲಾಗಿದೆ. ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಬೇಕು. ಪ್ರತಿಭಟಿಸುವುದು ಮತ್ತು ಜನರ ಮುಂದೆ ಸತ್ಯಗಳನ್ನು ಹೊರತರುವುದು ನಮ್ಮ ಕರ್ತವ್ಯ ಅಂತ ಹೇಳಿದರು.
#WATCH | Delhi | The Congress has looted the properties of MUDA. They made crores in profit. All this was done in (Karnataka CM ) Siddaramaiah's name. He should resign on moral grounds. It is our duty to protest and bring out the facts before the people," says BJP MP & former… pic.twitter.com/oGCIcWQK6r
— ANI (@ANI) July 26, 2024