Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರತಿದಿನ ‘ಮೊಟ್ಟೆ’ ತಿಂದರೆ ಏನಾಗುತ್ತೆ ಗೊತ್ತಾ.?

05/07/2025 10:11 PM

ಭಾರತದ ಶಕ್ತಿ ಅನಾವರಣ ; ಚೀನಾ, ಅಮೆರಿಕ ಹಿಂದಿಕ್ಕಿ ಇತಿಹಾಸ ನಿರ್ಮಾಣ, ವಿಶೇಷ ಸ್ಥಾನಮಾನ

05/07/2025 10:07 PM

BREAKING : ಮೊದಲ ‘NC ಕ್ಲಾಸಿಕ್ 2025’ರಲ್ಲಿ 86.18 ಮೀಟರ್ ಎಸೆತದೊಂದಿಗೆ ‘ಚಿನ್ನ’ ಗೆದ್ದ ‘ನೀರಜ್ ಚೋಪ್ರಾ’

05/07/2025 9:12 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೂದುಗುಂಬಳಕಾಯಿಯಲ್ಲಿದೆ ಆರೋಗ್ಯಕ್ಕೆ ಬೇಕಾದ ಅಘಾದವಾದ ಶಕ್ತಿ
LIFE STYLE

ಬೂದುಗುಂಬಳಕಾಯಿಯಲ್ಲಿದೆ ಆರೋಗ್ಯಕ್ಕೆ ಬೇಕಾದ ಅಘಾದವಾದ ಶಕ್ತಿ

By kannadanewsnow0701/03/2024 11:07 AM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಬೂದುಗುಂಬಳಕಾಯಿಯಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾಗುವಂತಹ ಅನೇಕ ಖನಿಜಾಂಶಗಳು ಅಡಗಿವೆ. ಇದು ಶುಭ ಸಮಾರಂಭಕ್ಕೆ ಎಷ್ಟು ಮುಖ್ಯವೋ ಆರೋಗ್ಯ ವೃದ್ಧಿಗೂ ಅಷ್ಟೇ ಮುಖ್ಯವಾಗಿದೆ. ಬೂದುಗುಂಬಳಕಾಯಿಯ ಜ್ಯೂಸ್‌ ಸೇವನೆಯಿಂದಾಗುವ ಪ್ರಯೋಜನಗಳ ಬಗ್ಗೆ ಒಂದೊಂದಾಗಿ ತಿಳಿದುಕೊಳ್ಳೋಣ.

ಬೂದುಗುಂಬಳಕಾಯಿಯ ಜ್ಯೂಸ್‌ ಮಾಡುವ ವಿಧಾನ: ಇದು ತುಂಬಾ ಸರಳವಾಗಿದೆ. ಒಂದು ಲೋಟ ಜ್ಯೂಸ್‌ ಪ್ರಮಾಣಕ್ಕೆ ಒಂದು ಜಾಮೂನ್‌ ಬಟ್ಟಲಷ್ಟು ಕತ್ತರಿಸಿದ ಬೂದುಗುಂಬಳಕಾಯಿಯನ್ನು ತೆಗೆದುಕೊಳ್ಳಿ. ಕತ್ತರಿಸಿದ ಬೂದುಗುಂಬಳಕಾಯಿ ಪೀಸ್‌ಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ಅದಕ್ಕೆ ಮುಕ್ಕಾಲು ಲೋಟ ನೀರು ಹಾಕಿ ಚೆನ್ನಾಗಿ ಮಿಕ್ಸಿ ಮಾಡಿಕೊಳ್ಳಿ. ಇದನ್ನು ಸೋಸಿಕೊಂಡು ಹಾಗೆಯೇ ಕುಡಿಯಬಹುದು. ಅಥವಾ ಚಿಟಿಕೆ ಸೈಂದ್ರಲವಣ ಕಲಿಸಿಕೊಂಡು ಕುಡಿಯಬಹುದು. ಇನ್ನೂ ಬೇಕಿದ್ದರೆ ಒಂದೆರಡು ಹನಿ ನಿಂಬೆ ರಸ ಸೇರಿಸಿಕೊಳ್ಳಬಹುದು. ಆದಷ್ಟು ತಾಜಾ ಇದ್ದಾಗಲೇ ಈ ಜ್ಯೂಸ್‌ ಅನ್ನು ಸೇವಿಸಿ.

ಬೂದುಗುಂಬಳಕಾಯಿಯಲ್ಲಿ ಕೊಬ್ಬು ಪ್ರೋಟೀನ್‌, ವಿಟಮಿನ್‌ ಎ, ಬಿ1, ಬಿ2, ಕ್ಯಾಲ್ಸಿಯಂ, ಮೆಗ್ನೀಶಿಯಂ, ಪೊಟಾಶಿಯಂ, ಸೋಡಿಯಂ, ಫೈಬರ್‌, ಕಾರ್ಬೋಹೈಡ್ರೇಟ್‌, ಝಿಂಕ್‌ ಹೀಗೆ ಇನ್ನು ಅನೇಕ ಜೀವಸತ್ವಗಳು ಇದರಲ್ಲಿ ಇವೆ. ಕೇವಲ ಇದೊಂದರ ಜ್ಯೂಸ್‌ ನಿತ್ಯ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಒಟ್ಟಿಗೆ ಈ ಎಲ್ಲಾ ಜೀವಸತ್ವಗಳು ದೊರೆಯುತ್ತವೆ. ಹಾಗಾಗಿ ಇದನ್ನು ಜೀವಸತ್ವಗಳ ಕಣಜ ಎಂದು ಕರೆಯುತ್ತಾರೆ.

ಬೊಜ್ಜು ಕರಗಿಸುತ್ತದೆ: ಬೂದುಗುಂಬಳಕಾಯಿ ಜ್ಯೂಸ್‌ ತೂಕ ಇಳಿಸಿಕೊಳ್ಳಲು ತುಂಬಾ ಪರಿಣಾಮಕಾರಿ. ಇದರಲ್ಲಿರುವ ಪೋಷಕಾಂಶಗಳು ದೇಹದಲ್ಲಿನ ಬೊಜ್ಜನ್ನು ಕರಗಿಸುತ್ತದೆ. ದೀರ್ಘಕಾಲದವರೆಗೆ ಬೂದುಗುಂಬಳಕಾಯಿ ಜ್ಯೂಸ್‌ನ್ನು ನಿಯಮಿತವಾಗಿ ಸೇವಿಸಿದರೆ ಬೊಜ್ಜು ಕರಗಿ ದೇಹದ ತೂಕವನ್ನು ಹೆಚ್ಚಾಗದಂತೆ ನಿಯಂತ್ರಿಸುತ್ತದೆ.

ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು: ಬೂದುಗುಂಬಳಕಾಯಿ ಜ್ಯೂಸ್‌ ಮೆದುಳನ್ನು ಚುರುಕುಗೊಳಿಸುತ್ತದೆ. ಇದರಲ್ಲಿರುವ ಕಬ್ಬಿನಾಂಶವು ಮೆದುಳಿಗೆ ಸೂಕ್ತ ಪ್ರಮಾಣದ ಆಮ್ಲಜನಕವನ್ನು ಒದಗಿಸುತ್ತದೆ. ಇದು ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ವಿಶೇಷವಾಗಿ ಮಕ್ಕಳ ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ.

ಕ್ಯಾನ್ಸರ್‌ ಹಿಮ್ಮೆಟ್ಟಿಸುತ್ತದೆ: ಬೂದುಗುಂಬಳಕಾಯಿಯಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಇದ್ದು ಇದು ಕ್ಯಾನ್ಸರ್‌ ಕಣಗಳ ವಿರುದ್ಧ ಹೋರಾಡುತ್ತದೆ. ಪ್ರತಿ ದಿನ ಬೂದುಗುಂಬಳಕಾಯಿ ಜ್ಯೂಸ್‌ ಸೇವಿಸಿದರೆ ಕ್ಯಾನ್ಸರ್‌ನ ಅಪಾಯವನ್ನು ತಡೆಯಬಹುದು ಎಂದ ಆಹಾರ ತಜ್ಞರು ಹೇಳುತ್ತಾರೆ. ಈಗಾಗಲೇ ಕ್ಯಾನ್ಸರ್‌ನಿಂದ ಬಳಲುತ್ತಿರುವವರು ನಿಮ್ಮ ವೈದ್ಯರ ಸಲಹೆ ಮೇರೆಗೆ ಇದರ ಜ್ಯೂಸ್‌ ಸೇವನೆ ಮಾಡಿದ್ರೆ ಉತ್ತಮ.

ಮಲಬದ್ಧತೆ ನಿವಾರಣೆ ಮಾಡುತ್ತದೆ: ಇದರಲ್ಲಿ ಫೈಬರ್‌ ಅಂಶ ಹೇರಳವಾಗಿ ಇರುತ್ತದೆ. ಈ ಅಂಶ ಕರುಳನ್ನು ಶುಚಿಗೊಳಿಸಿ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇನ್ನು ಕರುಳಿನಲ್ಲಿ ಆಹಾರ ಗಟ್ಟಿಯಾಗುವುದನ್ನು ಸಹ ತಡೆಯುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ಸಂಪೂರ್ಣವಾಗಿ ನಿವಾರಣೆ ಯಾಗುತ್ತದೆ. ಇನ್ನು ನಿಯಮಿತವಾಗಿ ಇದರ ಜ್ಯೂಸ್‌ ಸೇವನೆಯಿಂದ ದೇಹದಲ್ಲಿ ಊಷ್ಣ ಪ್ರಮಾಣವನ್ನು ತಗ್ಗಿಸುತ್ತದೆ.

ಹೃದಯದ ಆರೋಗ್ಯ ಕಾಪಾಡುತ್ತದೆ: ಇದರಲ್ಲಿರುವ ಸಾಲಿಬರ್‌ ಫೈಬರ್‌ ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ದೇಹದಿಂದ ಹೊರಹಾಕುತ್ತದೆ. ರಕ್ತದಲ್ಲಿನ ಕೊಲೆಸ್ಟ್ರಾಲ್‌ ಪ್ರಮಾಣವನ್ನು ಸಮಪ್ರಮಾಣದಲ್ಲಿ ಇರಿಸುತ್ತದೆ. ಬೂದುಗುಂಬಳಕಾಯಿ ಸೇವೆನೆಯಿಂದ ಕೊಲೆಸ್ಟ್ರಾಲ್‌ನಿಂದ ಉತ್ಪತ್ತಿಯಾಗುವ ಟಾಕ್ಸಿನ್‌ಗಳನ್ನು ತೆಗೆದುಹಾಕಬಹುದು. ಇದು ರಕ್ತದೊತ್ತಡ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.

ಜೀರ್ಣಕ್ರಿಯೆ ಉತ್ತಗೊಳಿಸುತ್ತದೆ: ಬೂದುಗುಂಬಳಕಾಯಿ ಅನೇಕ ದಿವ್ಯ ಔಷಧೀಯ ಗುಣಗಳನ್ನು ಹೊಂದಿದೆ. ಹೊಟ್ಟೆಗೆ ಸಂಬಂಧಿಸಿದ ಎಲ್ಲ ರೀತಿಯ ಸಮಸ್ಯೆಗಳಿಗೆ ಇದರ ಜ್ಯೂಸ್‌ ರಾಮಬಾಣದಂತೆ ಕೆಲಸ ಮಾಡುತ್ತದೆ. ಆಸಿಡಿಟಿ, ಉರಿಯೂತ, ಅಲ್ಸರ್‌, ಪ್ರತ್ಯಾಮ್ಲ, ಆಮ್ಲಪಿತ್ತ, ಹುಳಿತೇಗು ಹೀಗೆ ಎಲ್ಲಾ ರೀತಿಯ ಹೆಟ್ಟೆ ಸಮಸ್ಯೆಗಳಿಗೆ ಶಮನಕಾರಿಯಾಗಿದೆ. ಇದರಲ್ಲಿರುವ ಡಯೇಟ್ರಿ ಫೈಬರ್‌ ಜೀರ್ಣಕ್ರಿಯೆಯನ್ನು ಸರಾಗವಾಗುವಂತೆ ಮಾಡುತ್ತದೆ. ನಿತ್ಯ ಇದರ ಜ್ಯೂಸ್‌ ಸೇವೆನ ಹೊಟ್ಟೆ ಮತ್ತು ಕರುಳಿನ ಆರೋಗ್ಯ ಸುಧಾರಿಸುವಲ್ಲಿ ಎರಡು ಮಾತಿಲ್ಲ.

ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.

 

Ash gourd ಬೂದುಗುಂಬಳಕಾಯಿಯಲ್ಲಿದೆ ಆರೋಗ್ಯಕ್ಕೆ ಬೇಕಾದ ಅಘಾದವಾದ ಶಕ್ತಿ
Share. Facebook Twitter LinkedIn WhatsApp Email

Related Posts

ಪ್ರತಿದಿನ ‘ಮೊಟ್ಟೆ’ ತಿಂದರೆ ಏನಾಗುತ್ತೆ ಗೊತ್ತಾ.?

05/07/2025 10:11 PM1 Min Read

ಮೊಸರಿನ ಜೊತೆ ಎಂದಿಗೂ ಈ ಆಹಾರಗಳನ್ನ ತಿನ್ನಬೇಡಿ, ತಿಂದ್ರೆ ಅಷ್ಟೇ.!

04/07/2025 10:13 PM2 Mins Read

ಮನೆಯಲ್ಲಿ ಇದ್ದಕ್ಕಿದ್ದಂತೆ ‘ಹಲ್ಲಿ’ಗಳು ಹೆಚ್ಚಾಗಿವ್ಯಾ.? ಇದರ ಸಂಕೇತವಾಗಿರ್ಬೋದು.!

04/07/2025 8:29 PM1 Min Read
Recent News

ಪ್ರತಿದಿನ ‘ಮೊಟ್ಟೆ’ ತಿಂದರೆ ಏನಾಗುತ್ತೆ ಗೊತ್ತಾ.?

05/07/2025 10:11 PM

ಭಾರತದ ಶಕ್ತಿ ಅನಾವರಣ ; ಚೀನಾ, ಅಮೆರಿಕ ಹಿಂದಿಕ್ಕಿ ಇತಿಹಾಸ ನಿರ್ಮಾಣ, ವಿಶೇಷ ಸ್ಥಾನಮಾನ

05/07/2025 10:07 PM

BREAKING : ಮೊದಲ ‘NC ಕ್ಲಾಸಿಕ್ 2025’ರಲ್ಲಿ 86.18 ಮೀಟರ್ ಎಸೆತದೊಂದಿಗೆ ‘ಚಿನ್ನ’ ಗೆದ್ದ ‘ನೀರಜ್ ಚೋಪ್ರಾ’

05/07/2025 9:12 PM

BREAKING: ಶಿವಮೊಗ್ಗದಲ್ಲಿ ನಾಗರ ವಿಗ್ರಹವನ್ನೇ ಚರಂಡಿಗೆ ಎಸೆದು ದುಷ್ಕೃತ್ಯ

05/07/2025 9:05 PM
State News
INDIA

BREAKING : ಮೊದಲ ‘NC ಕ್ಲಾಸಿಕ್ 2025’ರಲ್ಲಿ 86.18 ಮೀಟರ್ ಎಸೆತದೊಂದಿಗೆ ‘ಚಿನ್ನ’ ಗೆದ್ದ ‘ನೀರಜ್ ಚೋಪ್ರಾ’

By KannadaNewsNow05/07/2025 9:12 PM INDIA 1 Min Read

ಬೆಂಗಳೂರು : ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಇಂದು ನಡೆದ ನೀರಜ್ ಚೋಪ್ರಾ ಕ್ಲಾಸಿಕ್ 2025ರ ಮೊದಲ ಆವೃತ್ತಿಯಲ್ಲಿ ಚಿನ್ನ ಗೆಲ್ಲುವ…

BREAKING: ಶಿವಮೊಗ್ಗದಲ್ಲಿ ನಾಗರ ವಿಗ್ರಹವನ್ನೇ ಚರಂಡಿಗೆ ಎಸೆದು ದುಷ್ಕೃತ್ಯ

05/07/2025 9:05 PM

‘IAS, IPS ಹುದ್ದೆ’ ನಿರೀಕ್ಷೆಯಲ್ಲಿರುವವರಿಗೆ ಗುಡ್ ನ್ಯೂಸ್: ‘UPSC ಉಚಿತ ತರಬೇತಿ’ಗೆ ಅರ್ಜಿ ಆಹ್ವಾನ | IAS Officer

05/07/2025 8:58 PM

ವೃತ್ತಿಪರ ತರಬೇತಿ ಪಡೆಯಲು ಅರ್ಜಿ ಆಹ್ವಾನ

05/07/2025 8:52 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.