ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಸುಖವಾಗಿರಲು, ನೆಮ್ಮದಿಯಾಗಿರಲು ಯಾರಿಗೆ ಇಷ್ಟವಿಲ್ಲ ಹೇಳಿ. ಆದರೆ ನಮ್ಮ ಸುತ್ತಮುತ್ತ ನಡೆಯುವ ಘಟನೆಗಳು ನಮಗೆ ಬೇಜಾರು ನೋವನ್ನುಂಟು ಮಾಡುತ್ತವೆ. ಇವಗಳ ಹೊರೆತಾಗಿಯೂ ನಾವು ಆನಂದವಾಗಿರಲು ಪ್ರಯತ್ನಿಸಬೇಕು. ಎಲ್ಲವನ್ನೂ ಮರೆತು ನಗುವುದು ತುಸು ಕಷ್ಟವೇ ಸರಿ. ಅಂತಹ ಸಂದರ್ಭದಲ್ಲಿ ನಮ್ಮ ಮನಸ್ಸಿನ ಸ್ಥಿತಿ ಬದಲಾಯಿಸಿಕೊಳ್ಳುವುದ ಅನಿವಾರ್ಯ. ಆದರೆ ನಮ್ಮ ನಡೆ ನಮ್ಮ ಸುತ್ತಮುತ್ತಲಿನ ಜನರಿಗೆ ಸಂಕೋಚ ಮುಜುಗರವನ್ನುಂಟು ಮಾಡಬಾರದು. ನಾವು ಸುಖವಾಗಿದ್ದು ನಮ್ಮವರನ್ನೂ ಸುಖವಾಗಿರಿಸಲು ಪ್ರಯತ್ನಿಸಬೇಕು.
ಸದಾ ಒಳ್ಳೆಯ ವಿಚಾರ ಮಾಡಿ. ನೆಗೆಟಿವ್ ಚಿಂತನೆ ಬೇಡ. ಎಲ್ಲವನ್ನು ಧನಾತ್ಮಕ ದೃಷ್ಟಿಯಿಂದ ನೋಡಲು ಪ್ರಯತ್ನಿಸಿ. ಎಲ್ಲಾ ವಿಷಯಕ್ಕೂ ಮೊಸರಿನಲ್ಲಿ ಕಲ್ಲು ಹುಡುಕಬೇಡಿ.
ಹೀಗೆ ಸದಾ ಖುಷಿಯಾಗಿರುವುದು ನಮ್ಮ ಕೈಯಲ್ಲಿದ್ದೆ. ಮತ್ತೊಬ್ಬರಿಂದ ಸುಖ ಅಥವಾ ಖುಷಿಯನ್ನು ನಿರೀಕ್ಷೆ ಮಾಡಬೇಡಿ. ಒಂದು ವೇಳೆ ನೀವಿಟ್ಟುಕೊಂಡ ನಿರೀಕ್ಷೆ ಹುಸಿಯಾದಾಗ ಸಹಜವಾಗಿ ಮನಸ್ಸಿಗೆ ಬೇಜಾರಾಗುತ್ತದೆ. ಹಾಗಾಗಿ ಖುಷಿಯನ್ನು ಸ್ವತಃ ನಿಮ್ಮಲ್ಲಿಯೇ, ನಿಮ್ಮಿಂದಲೇ ಕಂಡುಕೊಳ್ಳಿ.
ನಡೆದು ಹೋದ ಕೆಟ್ಟ ವಿಚಾರ ಘಟನೆಗಳನ್ನು ಆಗಾಗ ಮೆಲಕು ಹಾಕಲೇ ಬೇಡಿ, ಅವುಗಳಿಂದ ಆದಷ್ಟು ದೂರವಿರಿ. ಎಷ್ಟು ನೀವು ನಿಮ್ಮ ಮನಸ್ಸನ್ನು ಚಿಂತೆಯಿಂದ ದೂರವಿರಿಸುತ್ತೀರೋ ಅಷ್ಟು ನೀವು ನೆಮ್ಮದಿಯಾಗಿರುತ್ತೀರಿ.
ಕಷ್ಟ ಅಂತ ಬಂದರೆ ಎದೆಗುಂದಬೇಡಿ. ಧೈರ್ಯವಾಗಿ ಎದುರಿಸಿ. ಎಲ್ಲವನ್ನೂ ಮುಗುಳುನಗುತ್ತಾ ಸ್ವೀಕರಿಸಿ.
ಹಳೆಯದನ್ನೇ ಯೋಚಿಸುತ್ತಾ ಖಿನ್ನತೆಗೆ ಒಳಗಾಗಬೇಡಿ. ಖಿನ್ನತೆ ದೇಹದ ಹಾಗು ಮಾನಸಿಕ ಆರೋಗ್ಯಕ್ಕೆ ಭಾರೀ ನಷ್ಟ ಉಂಟು ಮಾಡುತ್ತದೆ.ಖಿನ್ನತೆಗೆ ಯಾವುದೇ ಮದ್ದಿಲ್ಲ. ಇದರಿಂದ ಆಚೆ ಬರಬೇಕೆಂದು ನೀವು ನಿರ್ಧರಿಸಿದರೆ ಅದಕ್ಕಿಂತ ದೊಡ್ಡ ಮಾತ್ರೆ ಇಲ್ಲ. ಖಿನ್ನತೆಯಿಂದ ಹೊರಬರಲು ಯೋಗ ಪ್ರಾಣಾಯಮ ಸೂಕ್ತ ಪರಿಹಾರ ನೀಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬೇಕಾಗಿರುವು ನಿಮ್ಮ ಉತ್ತಮ ಆಲೋಚನೆ ಹಾಗು ಧೃಡ ಮನಸ್ಸು.
ಇವೆಲ್ಲಕ್ಕಿಂತ ಹೆಚ್ಚಾಗಿ ಸದಾ ಕ್ರೀಯಾಶೀಲವಾಗಿರಿ. ಬೆಳಗಿನ ಹೊತ್ತು ಹೆಚ್ಚು ಮಲಗಬೇಡಿ. ಬೆಳಗ್ಗೆ ಬೇಗ ಎದ್ದು ವಾಕಿಂಗ್, ಯೋಗ, ಪ್ರಾಣಾಯಾಮ ಮಾಡುವ ಅಭ್ಯಾಸ ರೂಢಿಯಲ್ಲಿಟ್ಟುಕೊಳ್ಳಿ.
ಸ್ವತಃ ನೀವೇ ನಿಮಗೆ ಇಷ್ಟವಾದ ಅಡುಗೆ ಮಾಡಿಕೊಂಡು ಊಟ ಮಾಡಿ. ಮನೆಮಂದಿಗೆಲ್ಲಾ ಬಗೆ ಬಗೆಯ ಅಡುಗೆ ಮಾಡಿ ಬಡಿಸಿ.
ಯಾವುದಾದರೂ ಒಂದು ಹವ್ಯಾಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಈಜಾಡಿ, ನಿಮಗೆ ಇಷ್ಟವಾದ ಆಟವಾಡಿ, ಪೇಟಿಂಗ್ ಮಾಡಿ, ಸ್ಕೆಚ್ ಬಿಡಿಸಿ, ಮ್ಯೂಸಿನಲ್ಲಿ ಇಂಟ್ರಸ್ಟ್ ಇದ್ದರೆ ಯಾವುದಾದರೂ ಒಂದು ವಾಧ್ಯ ಬಾರಿಸಲು ಕಲೆಯಿರಿ. ಯೂಟ್ಯೂಬ್‌ನಲ್ಲಿ ನಿಮಗೆ ಟುಟೋರಿಯಲ್‌ಗಳಿವೆ. ಸಂಜೆ ಸಮೂಹ ಡ್ಯಾನ್ಸ್ ಅಥವಾ ಏರೋಬಿಕ್ಸ್ ಕ್ಲಾಸ್‌ಗೆ ಹೋಗಿ. ಇವೆಲ್ಲಾ ಉತ್ತಮ ಅಭ್ಯಾಸಗಳು ನಿಮ್ಮ ಮನಸ್ಸನ್ನು ಹಗುರವಾಗಿಸುತ್ತದೆ. ಹಾಗು ದೇಹಕ್ಕೂ ಒಳ್ಳೆಯ ವ್ಯಾಯಾಮವಾಗುತ್ತದೆ.
ಯಾವ ವಿಷಯವನ್ನೂ ಅತಿಯಾಗಿ ತೆಗೆದುಕೊಳ್ಳದೇ ಎಲ್ಲವನ್ನೂ ಕೂಲಾಗಿ ತೆಗೆದುಕೊಳ್ಳಿ. ಮೆದುಳಿಗೆ ಅನವಷ್ಯಕವಾಗಿ ಹೆಚ್ಚು ಕೆಲಸ ಕೊಡಬೇಡಿ. ಸಮಯಕ್ಕೆ ತಕ್ಕ ಹಾಗೆ ದೇಹಕ್ಕೆ ಹಗು ಮೆದುಳಿಗೆ ಕೆಲಸ ಕೊಡಿ. ಸಣ್ಣ ಸಣ್ಣ ವಿಷಯಕ್ಕೆ ಕಿರಿಕಿರಿ ಕೋಪ ಬೇಡ. ಧ್ಯಾನ ಮಾಡಿದರೆ ಈ ಎಲ್ಲಾ ಸಮಸ್ಯೆ ನಿವಾರಣೆಯಾಗುತ್ತದೆ.
ಲೈಫ್ ಈಸ್ ಬ್ಯೂಟಿಫುಲ್ ಅನ್ನೋದನ್ನ ಮಾತ್ರ ಮರೆಯಬೇಡಿ. ಚಿಕ್ಕ ಚಿಕ್ಕ ವಿಷಯದಲ್ಲಿ ಖುಷಿ ಪಡಿ. ಕೈತೋಟ ಬೆಳಸಿ. ನಾಯಿ ಬೆಕ್ಕು, ಪಕ್ಷಿಗಳಂತಹ ಪೆಟ್‌ಗಳನ್ನು ಸಾಕಿ, ಹೀಗೆ ಸಣ್ಣ ಸಣ್ಣ ಕೆಲಸ ನಿಮಗೆ ಹೆಚ್ಚು ಖುಷಿ ಕೊಡುತ್ತವೆ. ಇವುಗಳನ್ನೇ ಆನಂದಿಸಿ. ನಮ್ಮ ಖುಷಿ ನಮ್ಮ ಕೈಯಲ್ಲಿದೆ ಎಂಬುದು ಮಾತ್ರ ಸತ್ಯ