ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಜೋಳ ಇದನ್ನು ಮೆಕ್ಕೆ ಜೋಳ, ಎಂತಲೂ ಕರೆಯುತ್ತಾರೆ. ಸಿಟಿಗಳಲ್ಲಿ ಇದು ಪಾಪ್‌ಕಾರನ್ ಹಾಗು ಸ್ವೀಟ್ ಕಾರ್ನ್ ಎಂದು ಫೇಮಸ್. ಇಡೀ ಜಗತ್ತಿನಾದ್ಯಂತ ಇದನ್ನು ಬೇರೆ ಬೇರೆ ರೂಪದಲ್ಲಿ ಬಳಸುತ್ತಾರೆ. ಮಾಲ್ ಶಾಪಿಂಗ್ ಕಾಂಪ್ಲೆಕ್ಷ್‌ಗಳಲ್ಲಿ ಇದು ಹೆಚ್ಚಾಗಿ ಲಭ್ಯವಾಗುತ್ತದೆ. ಹೀಗೆ ಟೈಂಪಾಸ್‌ಗೆಂದು ತಿನ್ನುವ ಈ ಜೋಳದಿಂದ ದೇಹಕ್ಕೆ ಅನೇಕ ಪ್ರಯೋಜಗಳಿವೆ. ಅವುಗಳ ಬಗ್ಗೆ ಒಂದಿಷ್ಟು ಮಾಹಿತಿ ನಿಮಗಾಗಿ,
ಜೋಳ ಸವಿಯಲು ತುಂಬಾ ರುಚಿ. ಅಷ್ಟೇ ಉತ್ತಮ ಪೋಷಕಾಂಶಗಳು ಇದರಲ್ಲಿ ಇವೆ. ಜೋಳದಲ್ಲಿ ನಾರಿನಾಂಶ ಹೇರಳವಾಗಿದೆ.ಪ್ರೋಟೀನ್, ಕಾರ್ಬೋಹೈಡ್ರೇಟ್, ಆರೋಗ್ಯಕ್ಕೆ ಬೇಕಾದ ಸೂಕ್ಷ್ಮ ಪೋಷಕಾಂಶಗಳು, ಪೊಟಾಶಿಯಂ, ಮೆಗ್ನೀಸಿಯಂ, ಫೋಲೇಟ್ ವಿಟಮಿನ್ ಎ ಮತ್ತು ಸಿ ಈ ಎಲ್ಲ ಅಂಶಗಳು ಇದರಲ್ಲಿ ಹೇರಳವಾಗಿದೆ.
ನಿಯಮಿತವಾಗಿ ಜೋಳ ಸೇವಿಸಿದರೆ ಮೂಲವ್ಯಾಧಿ, ರಕ್ತ ಹೀನತೆ, ರಕ್ತದಲ್ಲಿ ಸಕ್ಕರೆ ಪ್ರಮಾಣ ಹಾಗು ಕೊಲೆಸ್ಟ್ರಾಲ್ ಪ್ರಾಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೇ ಇದರಲ್ಲಿ ಲುಟೀನ್, ಫೈಟಿಕ್ ಫೆರುಲಿಕ್ ಆಮ್ಲ, ಆಂಟಿ ಆಕ್ಸಿಡೆಂಟ್‌ಗಳು ಹೆಚ್ಚು ಸಮೃದ್ಧವಾಗಿದೆ. ಇದರಲ್ಲಿರುವ ಫೈಬರ್ ಅಂಶ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಜೋಳದ ಮತ್ತೊಂದು ವಿಶೇಷತೆ ಎಂದರೆ ಉದನ್ನು ಹೆಚ್ಚು ಸಂಸ್ಕರಿಸಿಯೇ ಮಾರುಕಟ್ಟೆಯಲ್ಲಿ ಬಿಡಲಾಗುತ್ತದೆ. ಹೀಗೆ ಸಂಸ್ಕರಣಾ ತಂತ್ರಗಳಿಗೆ ಇವುಗಳನ್ನು ಓಳಪಡಿಸಿದರೆ ಅದು ತನ್ನ ಪೌಷ್ಟಿಕ ಮೌಲ್ಯವನ್ನು ಸಹ ಬದಲಾಯಿಸಿಕೊಳ್ಳುತ್ತದೆ.
ಜೋಳ ಸೇವನೆ ಕಣ್ಣಿನ ಆರೋಗ್ಯಕ್ಕೆ ಉತ್ತಮ. ಇದರಲ್ಲಿ ವಿಟಮಿನ್ ಎ ಮತ್ತು ಆಂಟಿ ಆಕ್ಸಿಟಿಡೆಂಟ್‌ಗಳು ಕಣ್ಣಿನ ಎಲ್ಲ ರೀತಿಯ ಆರೋಗ್ಯವನ್ನು ಕಾಪಾಡುತ್ತದೆ.
ಪಾಪ್‌ಕಾರ್ನ್ ಅಥವಾ ಸ್ವೀಟ್ ಕಾರ್ನ್‌ನಲ್ಲಿ ಹೆಚ್ಚು ಫೈಬರ್ ಅಂಶ ಹೊಂದಿದೆ. ಇದರ ನಾರಿನಾಂಶ ಜೀರ್ಣಕ್ರಿಯೆಯನ್ನು ಸುಲಭಗೊಳಿಸಿತ್ತದೆ. ಸ್ನಾಯುಗಳಿಗೆ ಶಕ್ತಿ ನೀಡುವ ಕೆಲಸ ಇದು ಮಾಡುತ್ತದೆ. ಇದರ ಸೇವನೆಯಿಂದ ರೋಗನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ.
ಇದರಲ್ಲಿರುವ ಮೆಗ್ನೀಶಿಯಂ ಹಾಗು ಪೊಟಾಶಿಯಂ ರಕ್ತದೊತ್ತಡ ಹಾಗು ಹೃದಯ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ. ಪಾರ್ಶ್ವವಾಯು ಅಪಾಯವನ್ನು ತಡೆಯಬಹುದು. ಜೋಳದಲ್ಲಿನ ಅಂಥೋಸಯಾನಿನ್ ಅಂಶವು ದೇಹದಲ್ಲಿನ ಇನ್ಸುಲಿನ್ ಮತ್ತು ಗ್ಲುಕೋಸ್ ಮಟ್ಟವನ್ನು ಸಪ್ರಮಾಣದಲ್ಲಿರಿವುಂತೆ ನೋಡಿಕೊಳ್ಳುತ್ತದೆ. ಇದರ ಸೇವನೆಯಿಂದ ದೇಹಕ್ಕೆ ಹೆಚ್ಚಿನ ಸಕ್ಕರೆ ಅಂಶ ಸೇರದಂತೆ ತಡಹಿಡಿಯುತ್ತದೆ.
ಜೋಳ ಸೇವನೆ ಚರ್ಮದ ಕಾಂತಿ ಮತ್ತು ಚರ್ಮದ ಆರೋಗ್ಯಕ್ಕೆ ಹೇಳಿ ಮಾಡಿಸಿದ ಆಹಾರವಾಗಿದೆ.ಇದು ಹೈಪರ್ ಪಿಗ್ಮಂಟೇಶನ್ ಹಾಗು ಸೂಕ್ಷ್ಮ ರೇಖೆಗಳನ್ನು ತಡೆಯುತ್ತವೆ. ಮೊಡವೆಗಳನ್ನು ಹಾಗು ಚರ್ಮದ ಸುಕ್ಕನ್ನು ನಿವಾರಿಸುವಲ್ಲಿ ಇದು ತುಂಬಾ ಪ್ರಯೋಜನಕಾರಿಯಾಗಿದೆ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.