ನವದೆಹಲಿ : ಅಗ್ನಿವೀರ್ ಯೋಜನೆಯು ಇದು ಸರ್ಕಾರ ಯೋಜನೆಯಲ್ಲ ಇದು ಮೋದಿ ಯೋಜನೆಯಾಗಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಲೋಕಸಭೆ ಸದನದಲ್ಲಿ ಇಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಮಾತನಾಡಿದ ಅವರು, ಅಗ್ನಿವೀರ್ ಸರ್ಕಾರದ ಯೋಜನೆ ಎಲ್ಲಾ ಮೋದಿ ಯೋಜನೆ. ಅಗ್ನಿವೀರ ಯೋಜನೆಯಲ್ಲಿ ಉಪಯೋಗಿಸಿಕೊಂಡು ಕೈಬಿಡುತ್ತಾರೆ.ಅಗ್ನಿವೀರ್ ಯೋಧರನ್ನು ಹುತಾತ್ಮರಾಗಿ ಪರಿಗಣಿಸುವುದಿಲ್ಲ .ಅಗ್ನಿ ವೀರ ಯೋಧರಿಗೆ ಪಿಂಚಣಿ ವ್ಯವಸ್ಥೆ ಸಹ ಮಾಡಿಲ್ಲ. ಹುತಾತ್ಮರಾದ ಅಗ್ನಿವೀರ ಯೋಧರಿಗೆ ಪರಿಹಾರ ನೀಡಬೇಕು. ಅವರ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡಬೇಕು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದರು.

ನನ್ನನ್ನು ದೇವರು ಕಳಿಸಿದ್ದಾನೆಂದು ಮೋದಿ ಹೇಳಿಕೊಂಡಿದ್ದರು. ನೋಟ್ ಬ್ಯಾನ್ ಮಾಡಲು ಮೋದಿಗೆ ದೇವರೇ ಹೇಳಿರಬೇಕು ಎಂದು ಪ್ರಧಾನಮಂತ್ರಿ ಮೋದಿ ವಿರುದ್ಧ ರಾಹುಲ್ ಗಾಂಧಿ ವ್ಯಂಗ್ಯವಾಡಿದರು. ಅವೈಜ್ಞಾನಿಕ ಜಿಎಸ್​ಟಿ ನಿಯಮಗಳಿಂದ ಜನರಿಗೆ ಸಮಸ್ಯೆಯಾಗಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ.ಯುವಕರು ಉದ್ಯೋಗ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉದ್ಯಮಿಗಳ ಪರ ನರೇಂದ್ರ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

Share.
Exit mobile version