ನವದೆಹಲಿ: ಹಸಿವಿನಿಂದ ಬಳಲುತ್ತಿದ್ದ 28 ನಾಯಿಗಳು ತಮ್ಮ ಸತ್ತ ಮಾಲೀಕರ ಕಾಲನ್ನು ತಿನ್ನುವ ಮೂಲಕ ಬದುಕುಳಿದಿರುವ ಘಟನೆ ಬ್ಯಾಂಕಾಕ್ನ ಖ್ಲಾಂಗ್ ಸ್ಯಾಮ್ ವಾ ಜಿಲ್ಲೆಯ ಮನೆಯೊಂದರಲ್ಲಿ ನಡೆದಿದೆ. ನಾಯಿಗಳನ್ನು ಸ್ಥಳದಿಂದ ರಕ್ಷಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
62 ವರ್ಷದ ಅಟ್ಟಪೋಲ್ ಚರೋನ್ಪಿಥಾಕ್ ಶನಿವಾರ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರ ಕಾರು ಹಲವಾರು ದಿನಗಳಿಂದ ಪಾರ್ಕಿಂಗ್ ಪ್ರದೇಶದಲ್ಲಿದೆ ಎಂದು ನೆರೆಹೊರೆಯವರು ನೋಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ಎಸ್ಸಿಎಂಪಿ ವರದಿ ಮಾಡಿದೆ.
ನಾಯಿಗಳು ಚಿಹುವಾವಾ ಮತ್ತು ಶಿಹ್ ತ್ಸು ತಳಿಗಳಿಗೆ ಸೇರಿವೆ. ಅಟ್ಟಾಪೋಲ್ ನ ಎಡಗಾಲನ್ನು ಸೇವಿಸುವ ಮೂಲಕ ಅವುಗಳು ಬದುಕಿದ್ದಾವೆ ಎನ್ನಲಾಗಿದೆ . ಈ ಹಿಂದೆ, ಅಟ್ಟಪೋಲ್ ಹಲವಾರು ನಾಯಿಗಳನ್ನು ಇಟ್ಟುಕೊಂಡು ಅವುಗಳನ್ನು ಪಂಜರಗಳಲ್ಲಿ ಸಾಗಿಸಿದ್ದಾರೆ ಎಂದು ಪ್ರಾಣಿ ಕಲ್ಯಾಣ ಸಂಸ್ಥೆಗಳಿಗೆ ತಿಳಿದಿತ್ತು.