ಬೆಂಗಳೂರು: ರಾಜ್ಯಮಟ್ಟದಲ್ಲಿ ಎಲ್ಲಾ ಸರ್ಕಾರಿ ನೌಕರರಿಗೆ ತಿಂಗಳ ಕೊನೆಯ ದಿನ [ಒಂದೇ ದಿನ ]ವೇತನ ಪಾವತಿಸುವ ಬಗ್ಗೆ ಸರ್ಕಾರದಿಂದ ಆದೇಶ ಮೊದಲು ಪ್ರಾಯೋಗಿಕವಾಗಿ ಖಜಾನೆ ಇಲಾಖೆಗೆ ಅನ್ವಯವಾಗುವಂತೆ ಆದೇಶವನ್ನು ಹೊರಡಿಸಲಾಗಿದೆ.
ನಿಯಂತ್ರಣಾಧಿಕಾರಿಗಳ (CO) ಹಂತದಲ್ಲಿ ಅಧಿಕಾರಿ, ಸಿಬ್ಬಂದಿಗಳ ವೇತನ ಹಾಗೂ ವೇತನ ಸಂಬಂಧಿತ ಕೈಮುಗಳನ್ನು ಸೆಳೆದು ವಿತರಿಸುವ ಕುರಿತು.. ಆದೇಶವನ್ನು ಹೊರಡಿಸಿದೆ. ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ.
ನಿಯಂತ್ರಣಾಧಿಕಾರಿಗಳ (CO) ಹಂತದಲ್ಲಿ ಅಧಿಕಾರಿ | ಸಿಬ್ಬಂದಿಗಳ ವೇತನ ಹಾಗೂ ವೇತನ ಸಂಬಂಧಿತ ಕ್ಷೇಮುಗಳನ್ನು ಸೆಳೆದು ವಿತರಿಸುವ ಕುರಿತು.
ಉಲ್ಲೇಖ: 1.ಸರ್ಕಾರದ ಸುತ್ತೋಲೆ ಸಂಖ್ಯೆ: ಆಇ 31ಟಿಎಆರ್2024, ದಿನಾಂಕ: 06-09-2024(1). 2. ಸರ್ಕಾರದ ಸುತ್ತೋಲೆ ಸಂಖ್ಯೆ: ಆಇ 31ಟಿಎಆರ್2024. ದಿನಾಂಕ: 06-09-2024(2).ಉಲ್ಲೇಖಿತ ಸರ್ಕಾರದ ಸುತ್ತೋಲೆ ಮತ್ತು ಪತ್ರದಲ್ಲಿ ರಾಜ್ಯದ ಎಲ್ಲಾ ನಿಯಂತ್ರಣಾಧಿಕಾರಿಗಳು ತಮ್ಮ ಹಂತದಲ್ಲಿ ಅಧಿಕಾರಿ | ಸಿಬ್ಬಂದಿಗಳ ವೇತನ ಹಾಗೂ ವೇತನ ಸಂಬಂಧಿತ ಕ್ಷೇಮುಗಳನ್ನು ಸೆಳೆದು ವಿತರಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ತಿಳಿಸಲಾಗಿದ್ದು, ಸದರಿ ಸರ್ಕಾರದ ಸುತ್ತೋಲೆಯ ಪ್ರತಿಯನ್ನು ಮಾಹಿತಿಗಾಗಿ ಹಾಗೂ ಸೂಕ್ತ ಕ್ರಮಕ್ಕಾಗಿ ಇದರೊಂದಿಗೆ ಲಗತ್ತಿಸಿ ಕಳುಹಿಸಿದೆ. ನಿಯಂತ್ರಾಣಾಧಿಕಾರಿಗಳ (CO) ಹಂತದಲ್ಲಿ ಅಧಿಕಾರಿ/ ಸಿಬ್ಬಂದಿಗಳ ವೇತನ ಹಾಗೂ ವೇತನ ಸಂಬಂಧಿತ ಕೈಮುಗಳನ್ನು ಸೆಳೆದು ವಿತರಿಸುವ ಕುರಿತು ಓದಲಾದ: ಖಜಾನೆ ಆಯುಕ್ತರ ಕಡತ ಸಂ.K2-TNMCOACR(TR)/4/2020ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇದ 80 (ಬಿ) ರಲ್ಲಿನ ಸೂಚನೆಗಳಂತೆ, ಮಾರ್ಚಿ ತಿಂಗಳನ್ನು ಹೊರತುಪಡಿಸಿ, ಉಳಿದ ತಿಂಗಳುಗಳ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು ಆಯಾ ತಿಂಗಳ ಕೊನೆಯ ಕೆಲಸದ ದಿನಾಂಕದಂದು, ಮಾರ್ಚಿ ತಿಂಗಳ ವೇತನ ಮತ್ತು ಭತ್ಯೆಗಳನ್ನು ಮುಂದಿನ ಏಪ್ರಿಲ್ ತಿಂಗಳಿನಲ್ಲಿ ಕೆಲಸದ ದಿನಾಂಕದಂದು ವಿತರಿಸಬೇಕಾಗಿರುತ್ತದೆ. ಕೆಲವೊಂದು ಡಿಡಿಓರವರು, ಕೆಲವೊಂದು ಕಾರಣಗಳಿಂದಾಗಿ, ನಿಗದಿತ ದಿನಾಂಕದಂದು ವೇತನ ಮತ್ತು ಭತ್ಯೆಗಳನ್ನು ಸೆಳೆದು ವಿತರಿಸುವಲ್ಲಿ ವಿಳಂಬವಾಗುತ್ತಿದ್ದು, ಇದರಿಂದ ಸರ್ಕಾರಿ ನೌಕರರು ನಿಗದಿತ ದಿನಾಂಕದಂದು ವೇತನ ಮತ್ತು ಭತ್ಯೆಗಳನ್ನು ಪಡೆಯಲು ಸಾಧ್ಯವಾಗದಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ನಿಗದಿತ ದಿನಾಂಕದಂದು ವೇತನ ಮತ್ತು ಭತ್ಯೆಗಳನ್ನು ಸೆಳೆಯದೇ ಇರುವುದರಿಂದ ಅನುದಾನದ ನಿರ್ವಹಣೆಯಲ್ಲಿಯು ವ್ಯತ್ಯಯವಾಗುತ್ತಿದೆ.
ಹೆಚ್ಚಿನ ಬಜೆಟ್ ನಿಯಂತ್ರಣ ಮತ್ತು ಲೆಕ್ಕಸಮನ್ವಯದ ದೃಷ್ಠಿಯಿಂದ ಹಾಗೂ ಬಿಲ್ಲುಗಳ ಪ್ರಮಾಣವನ್ನು ಕಡಿಮೆ ಮಾಡುವ ದೃಷ್ಠಿಯಿಂದ, ಪ್ರಸ್ತುತ ಡಿಡಿಓರವರು ಅವರ ವ್ಯಾಪ್ತಿಯಲ್ಲಿನ, ಸರ್ಕಾರಿ ಅಧಿಕಾರಿ/ ನೌಕರರ ವೇತನ ಮತ್ತು ಭತ್ಯೆಗಳನ್ನು ಸೆಳೆದು ವಿತರಿಸುವ ವ್ಯವಸ್ಥೆಯ ಬದಲು, ಸಂಬಂದಿಸಿದ ನಿಯಂತ್ರಾಣಾಧಿಕಾರಿಗಳು (CO) ತಮ್ಮ ವ್ಯಾಪ್ತಿಯಲ್ಲಿನ ಡಿಡಿಓರವರ ಹಾಗೂ ಅವರ ವ್ಯಾಪ್ತಿಯಲ್ಲಿನ ಅಧಿಕಾರಿ/ಸಿಬ್ಬಂದಿಗಳ ವೇತನ ಮತ್ತು ಭತ್ಯಗಳನ್ನು ಸೆಳೆದು ವಿತರಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರವು ಉದ್ದೇಶಿಸಿದೆ. ಪ್ರಾರಂಭದಲ್ಲಿ ಈ ವ್ಯವಸ್ಥೆಯನ್ನು ಖಜಾನೆ ಇಲಾಖೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದು ನಂತರ ಈ ವ್ಯವಸ್ಥೆಯನ್ನು ಇತರೆ ಎಲ್ಲಾ ಇಲಾಖೆಗಳಿಗೆ ವಿಸ್ತರಿಸಲು ಯೋಜಿಸುವ ಸಲುವಾಗಿ ಕೆಳಕಂಡಂತೆ ಆದೇಶಿಸಿದ.ಸರ್ಕಾರದ ಆದೇಶ ಸಂಖ್ಯೆ ಆಇ 31 ಟಿಎಆರ್ 2024 ಬೆಂಗಳೂರು
DO 06-09-2024ಸರ್ಕಾರಿ ಅಧಿಕಾರಿ/ನೌಕರರ ವೇತನ ಮತ್ತು ಭತ್ಯೆಗಳನ್ನು ಡಿಡಿಓರವರು ಸೆಳದು ವಿತರಿಸುವ ವ್ಯವಸ್ಥೆಯ ಬದಲು, ಸಂಬಂಧಿಸಿದ ನಿಯಂತ್ರಾಣಾಧಿಕಾರಿಗಳು (CO) ತಮ್ಮ ವ್ಯಾಪ್ತಿಯಲ್ಲಿನ ಡಿಡಿಓರವರ ಹಾಗೂ ಅವರ ವ್ಯಾಪ್ತಿಯಲ್ಲಿನ ಅಧಿಕಾರಿ/ಸಿಬ್ಬಂದಿಗಳ ವೇತನ ಮತ್ತು ಭತ್ಯೆಗಳನ್ನು ಸಂಚಿತವಾಗಿ, ಸಳದು ವಿತರಿಸುವ ವ್ಯವಸ್ಥೆಯನ್ನು ಖಜಾನೆ ಇಲಾಖೆಯಲ್ಲಿ, ಸಪ್ಟೆಂಬರ್ ತಿಂಗಳ ವೇತನದಿಂದ ಪ್ರಾಯೋಗಿಕವಾಗಿ,ಜಾರಿಗೆ ತರಲು ಸರ್ಕಾರವು ಆದೇಶಿಸಿದ. ನೌಕರರಿಗೆ ಒಂದೇ ಬಾರಿಗೆ ಮತ್ತು ಸಮಯಕ್ಕೆ ಸರಿಯಾಗಿ ಸಂಬಳ ಪಾವತಿಗಳಾಗುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಇತರೇ ಯಾವುದೇ ಕಾರ್ಯ ವಿಧಾನಗಳನ್ನು ಅನುಸರಿಸಲು ತಿಳಿಸಿದೆ.