ಕೊಪ್ಪಳ : ಕೂಲಿ ಮಾಡಿದ ಬಾಕಿ ಎರಡು ನೂರು ರೂಪಾಯಿ ಹಣ ಕೊಡಲಿಲ್ಲವೆಂದು ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೊಪ್ಪಳ ತಾಲೂಕಿನ ನಾಗೇಶನಹಳ್ಳಿ ಗ್ರಾಮದಲ್ಲಿ ನಡೆದಿದೆ. ರೇಣುಕಮ್ಮ ಸಿಳ್ಳಿಕ್ಯಾತರ್(57) ಕೊಲೆಯಾದ ಮಹಿಳೆ ಎಂದು ತಿಳಿದುಬಂದಿದೆ.ಆರೋಪಿಯನ್ನು ಮಹೇಶ್ ಎಂದು ಹೇಳಲಾಗುತ್ತಿದೆ.

ಮೃತ ರೇಣುಕಮ್ಮಳ ಪತಿ ಹಳ್ಳಪ್ಪ, ಕಟ್ಟಡ ನಿರ್ಮಾಣದ ಮಿಸ್ತ್ರಿ ಕೆಲಸ ಮಾಡುತ್ತಾನೆ. ಈತ ಕೆಲ ದಿನಗಳ ಹಿಂದೆ ಗ್ರಾಮದ ಮಹೇಶ್​ ಗೊಲ್ಲರ ಸೇರಿದಂತೆ ಕೆಲ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿದ್ದ. ಅಲ್ಲಿ ಶಾಲೆಯೊಂದರಲ್ಲಿ ಇದ್ದ ಕೆಲಸವನ್ನು ನಾಲ್ಕು ದಿನಗಳ ಕಾಲ ಮಾಡಿ, ನಂತರ ಎಲ್ಲರೂ ಕೂಡ ಮರಳಿ ಗ್ರಾಮಕ್ಕೆ ಬಂದಿದ್ದರು. ಪ್ರತಿ ದಿನಕ್ಕೆ 650 ರೂಪಾಯಿಯಂತೆ ಕೂಲಿ ಮಾತನಾಡಲಾಗಿತ್ತು.

ನಾಲ್ಕು ದಿನಗಳ ಕಾಲ ಮಾಡಿ, ನಂತರ ಎಲ್ಲರೂ ಕೂಡ ಮರಳಿ ಗ್ರಾಮಕ್ಕೆ ಬಂದಿದ್ದರು. ಪ್ರತಿ ದಿನಕ್ಕೆ 650 ರೂಪಾಯಿಯಂತೆ ಕೂಲಿ ಮಾತನಾಡಲಾಗಿತ್ತು. ಹೀಗಾಗಿ ಕೂಲಿ ಕೆಲಸಕ್ಕೆ ಬಂದವರಿಗೆಲ್ಲ ಹಳ್ಳಪ್ಪ, ವಾರದ ಹಿಂದೆ ಪ್ರತಿಯೊಬ್ಬರಿಗೂ ತಲಾ ಎರಡು ಸಾವಿರದಾ ನಾಲ್ಕು ನೂರು ರೂಪಾಯಿ ನೀಡಿದ್ದ. ಇನ್ನು ಎರಡು ನೂರು ರೂಪಾಯಿ ಹಣವನ್ನು ನಾಲ್ಕೈದು ದಿನದಲ್ಲಿ ಕೊಡೋದಾಗಿ ಹೇಳಿದ್ದನಂತೆ. ಆದ್ರೆ, ಹಣ ಕೊಡದೇ ಇದ್ದಾಗ, ಹಳ್ಳಪ್ಪ ಮತ್ತು ಮಹೇಶ್​ನ ನಡುವೆ ಗಲಾಟೆ ಆರಂಭವಾಗಿತ್ತು.

ನಿನ್ನೆ ರಾತ್ರಿ ಮೇಹಶ್ ನ ಹೆತ್ತವರಿಗೆ, ಮಹೇಶ್ ಬಗ್ಗೆ ದೂರು ಹೇಳಲು ಮುಂದಾಗಿದ್ದಾರೆ. ಇದರಿಂದ ಮತ್ತೆ ಸಿಟ್ಟಾದ ಮಹೇಶ್, ತನ್ನ ಮನೆ ಮುಂದೆ ನಿಂತು ಮಾತನಾಡುತ್ತಿದ್ದ ರೇಣುಕಮ್ಮಳಿಗೆ ಮತ್ತೆ ಬಡಿಗೆಯಿಂದ ಹೊಡೆದು, ಗೇಟ್ ಗೆ ತಳ್ಳಿದ್ದಾನೆ. ಕೂಡಲೇ ರೇಣುಕಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸದ್ಯ ಆರೋಪಿ ಮಹೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ.

Share.
Exit mobile version