Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯ ಸರ್ಕಾರಿ ನೌಕರರಿಗೆ `ಆರೋಗ್ಯ ಸಂಜೀವಿನಿ ಯೋಜನೆ’ : `ಘೋಷಣೆ/ಪ್ರಮಾಣ ಪತ್ರ’ದ ಬಗ್ಗೆ ಇಲ್ಲಿದೆ ಮಾಹಿತಿ

18/05/2025 7:12 AM

ರೈಲು ಪ್ರಯಾಣಿಕರೇ ಗಮನಿಸಿ : ಹಾಸನ ಜಿಲ್ಲೆಯ ಮೂಲಕ ಸಂಚರಿಸುವ ಈ ರೈಲುಗಳ ಸಂಚಾರ ರದ್ದು.!

18/05/2025 7:11 AM

ಸುಳ್ಯ: ಕೊರಗಜ್ಜ ಹರಕೆ ನೇಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭಾಗಿ

18/05/2025 7:04 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕರ್ನಾಟಕದಲ್ಲಿ ಗುಂಡಿ ಮುಕ್ತ ರಸ್ತೆಗಳ ನಿರ್ವಹಣೆ ಗುರಿ – ಎಕೋಫಿಕ್ಸ್ ಎಂಬ ರೆಡಿಮಿಕ್ಸ್ ಪದಾರ್ಥ ಬಳಕೆ
KARNATAKA

ಕರ್ನಾಟಕದಲ್ಲಿ ಗುಂಡಿ ಮುಕ್ತ ರಸ್ತೆಗಳ ನಿರ್ವಹಣೆ ಗುರಿ – ಎಕೋಫಿಕ್ಸ್ ಎಂಬ ರೆಡಿಮಿಕ್ಸ್ ಪದಾರ್ಥ ಬಳಕೆ

By kannadanewsnow0718/04/2025 5:57 AM

ಬೆಂಗಳೂರು: ಸರ್ಕಾರವು ಕರ್ನಾಟಕ ರಾಜ್ಯವನ್ನು ಗುಂಡಿ ಮುಕ್ತ ರಸ್ತೆಗಳನ್ನಾಗಿಸುವ ಉದ್ದೇಶವನ್ನು ಹೊಂದಿದೆ. ಕಬ್ಬಿಣದ ಉತ್ಪಾದನೆಯಲ್ಲಿ ಬರುವ Slag ಅನ್ನು ಉಪಯೋಗಿಸಿ, ತೇವಾಂಶವಿರುವ ರಸ್ತೆಗಳಲ್ಲಿಯು ಸಹ, ಹೆಚ್ಚಿನ ಕಾರ್ಮಿಕರ ಅವಶ್ಯಕತೆಯಿಲ್ಲದೆ ಕಡಿಮೆ ಸಮಯದಲ್ಲಿ ಗುಂಡಿ ಮುಚ್ಚಲು ಸಾಧ್ಯವಾಗುವಂತೆ ಎಕೋಫಿಕ್ಸ್ ಎಂಬ ರೆಡಿಮಿಕ್ಸ್ ಪದಾರ್ಥವನ್ನು ಬಳಸಿಕೊಂಡು ರಸ್ತೆಯ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗುವುದು. ಇದರಿಂದಾಗಿ ಅತಿಯಾಗಿ ಮಳೆಯಾಗುವ ಜಿಲ್ಲೆಗಳಲ್ಲಿ ಆಗಿಂದಾಗ್ಗೆ ಉಂಟಾಗುವ ರಸ್ತೆ ಗುಂಡಿಗಳನ್ನು ತೇವಾಂಶ ಇದ್ದಾಗಲೂ ಕೂಡ ಕಡಿಮೆ ಸಮಯದಲ್ಲಿ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬಹುದಾಗಿರುತ್ತದೆ.

ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆಯು, ಕಬ್ಬಿಣದ ಉತ್ಪಾದನೆಯಲ್ಲಿ ಬರುವ Slag ಅನ್ನು ಉಪಯೋಗಿಸಿ, ತೇವಾಂಶವಿರುವ ರಸ್ತೆಗಳಲ್ಲಿಯು ಸಹ, ಹೆಚ್ಚಿನ ಕಾರ್ಮಿಕರ ಅವಶ್ಯಕತೆಯಿಲ್ಲದೆ ಕಡಿಮೆ ಸಮಯದಲ್ಲಿ ಗುಂಡಿ ಮುಚ್ಚಲು ಸಾಧ್ಯವಾಗುವಂತೆ ಎಕೋಫಿಕ್ಸ್ ಎಂಬ ರೆಡಿಮಿಕ್ಸ್ ಪದಾರ್ಥವನ್ನು ತಯಾರಿಸಿದ್ದು, ಕರ್ನಾಟಕ ಸರ್ಕಾರವು ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ ಹಾಗೂ ರಾಮುಕ ಗ್ಲೋಬಲ್ ಸರ್ವಿಸಸ್ ಅವರೊಂದಿಗೆ ಟ್ರೈ ಪಾರ್ಟಿ ಕರಾರು ಒಪ್ಪಂದ ಮಾಡಿಕೊಳ್ಳಲಾಗಿರುತ್ತದೆ.

ಈ ಸಂಬಂಧವಾಗಿ ಇಂದು, 2025ನೇ ಏಪ್ರಿಲ್ 17 ರಂದು ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಹಾಗೂ ಮಾನ್ಯ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ರವರ ಉಪಸ್ಥಿಯಲ್ಲಿ ಟ್ರೈ ಪಾರ್ಟಿ -“Ecofix: Ready to Use Pot hole repair mix, for instant repair of distressed roads in state of Karnataka” CSIR – CRRI (Council of Scientific & Industrial Research Central Road Research Institute), ಲೋಕೋಪಯೋಗಿ ಹಾಗೂ ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ರಮುಕಾ ಗ್ಲೋಬಲ್ ಸರ್ವೀಸಸ್ ರವರೊಂದಿಗೆ ಮೆಮೊಯಾರ್ಂಡಮ್ ಆಫ್ ಆಂಡರ್‍ಸ್ಟಾಂಡಿಂಗ್ (Memorandum of understanding- MOU) ಕ್ಕೆ ಸಹಿ ಮಾಡಬೇಕಾಗಿತ್ತು. ಆದರೆ, ತುರ್ತು ಕಾರಣಗಳಿಂದಾಗಿ ಸಚಿವರುಗಳ ಅನುಪಸ್ಥಿತಿಯಲ್ಲಿ ಹಾಗೂ ಅವರ ನಿರ್ದೇಶನದಂತೆ ಡಾ.ಶಾಲಿನಿ ರಜನೀಶ್, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ ರವರ ಅಧ್ಯಕ್ಷತೆಯಲ್ಲಿ ಒಡಂಬಡಿಕೆಗೆ ಸಹಿ ಮಾಡಲಾಗಿರುತ್ತದೆ.

ಕರ್ನಾಟಕ ಸರ್ಕಾರವು, ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ ಹಾಗೂ ರಾಮುಕ ಗ್ಲೋಬಲ್ ಸರ್ವಿಸಸ್ ರವರ ಸಹಯೋಗದೊಂದಿಗೆ ರಾಜ್ಯ ಹೆದ್ದಾರಿ 265 ರ ರಸ್ತೆಯಲ್ಲಿ ಪ್ರಾಯೋಗಿಕವಾಗಿ 2024ನೇ ಡಿಸೆಂಬರ್ 10 ರಂದು ಗುಂಡಿ ಮುಚ್ಚುವ ಕಾರ್ಯ ಸಹ ಮಾಡಲಾಗಿರುತ್ತದೆ.

ನಗರ ಪ್ರದೇಶಗಳಲ್ಲಿ ಅತಿಯಾಗಿ ಸಂಚಾರ ದಟ್ಟಣೆ ಇರುವುದರಿಂದ ಗುಂಡಿಗಳನ್ನು ಮುಚ್ಚಲು ಸಮಯ ಅವಕಾಶ ಕಡಿಮೆಯಿರುತ್ತದೆ. ಅಂತಹ ಸಮಯದಲ್ಲಿ ಸಂಚಾರ ದಟ್ಟಣೆ ಕಡಿಮೆಯಿದ್ದಾಗ ಅಂದರೆ ರಾತ್ರಿ ಸಮಯ ಕೂಡ ಎಕೋಫಿಕ್ಸ್ ಉಪಯೋಗಿಸಿ ಸಮತಟ್ಟು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬಹುದಾಗಿರುತ್ತದೆ.

ಎಕೋಫಿಕ್ಸ್ 30ಕೆ.ಜಿ ಹಾಗೂ 50ಕೆ.ಜಿ ಚೀಲಗಳಲ್ಲಿ ಲಭ್ಯವಿದ್ದು, ಅದನ್ನು ಕಾಮಗಾರಿ ಸ್ಥಳಕ್ಕೆ ಸರಾಗವಾಗಿ ಸಾಗಿಸಬಹುದಾಗಿರುತ್ತದೆ. ಏಕರೂಪ ದರಪಟ್ಟಿಯಲ್ಲಿ ಕೋಲ್ಡ್ ಮಿಕ್ಸ್ ಪದ್ಧತಿಯಲ್ಲಿ ಗುಂಡಿ ಮುಚ್ಚಲು ತಗಲುವ ಮೊತ್ತ ರೂ. 17/- ಪ್ರತಿ ಕೆ.ಜಿ.ಗೆ ನಿಗಧಿಪಡಿಸಲಾಗಿರುತ್ತದೆ. ಎಕೋಫಿಕ್ಸ್ ಪದ್ಧತಿಯಲ್ಲಿ ಸರಬರಾಜು ಮಾಡಿ ಗುಂಡಿ ಮುಚ್ಚಲು ರೂ.15.70/- ಪ್ರತಿ ಕೆ.ಜಿ. ರಂತೆ ಮಾಡಲು ಮೆ:ರಾಮುಕ ಗ್ಲೋಬಲ್ ಸರ್ವಿಸಸ್ ರವರು ಒಪ್ಪಿಕೊಂಡಿರುತ್ತಾರೆ. ಇದರಿಂದಾಗಿ ಗುಂಡಿ ಮುಚ್ಚುವ ವೆಚ್ಚದಲ್ಲಿ ಸುಮಾರು ಶೇ.10 ರಷ್ಟು ಮೊತ್ತ ಸರ್ಕಾರಕ್ಕೆ ಉಳಿತಾಯವಾಗಲಿದೆ.

ಜೆ.ಎಸ್.ಡಬ್ಲ್ಯೂ, ಬಳ್ಳಾರಿ ರವರ ಸಹಯೋಗದೊಂದಿಗೆ ರಾಮುಕ ಗ್ಲೋಬಲ್ ಸರ್ವೀಸಸ್ ರವರು Ecofix Ready to Use Pot hole repair mix ಉತ್ಪಾದನೆ ಮಾಡಿ ಕಡಿಮೆ ದರದಲ್ಲಿ ಕರ್ನಾಟಕ ರಾಜ್ಯ ವ್ಯಾಪ್ತಿಯಲ್ಲಿ ಸರಬರಾಜು ಮಾಡಲು ಒಪ್ಪಿರುತ್ತಾರೆ.

ಲೋಕೋಪಯೋಗಿ ಇಲಾಖೆಯ ಇಲಾಖೆಯ ಎಲ್ಲಾ ಅಭಿಯಂತರರುಗಳಿಗೆ ಹಂತ ಹಂತವಾಗಿ ಎಕೋಫಿಕ್ಸ್ ಉಪಯೋಗಿಸುವುದರ ಬಗ್ಗೆ ತರಬೇತಿ ನೀಡಲಾಗುವುದು. ಇದರಿಂದಾಗಿ ಅತಿ ತುರ್ತಾಗಿ ಗುಂಡಿ ಮುಚ್ಚಿ, ಸಾರ್ವಜನಿಕರಿಗೆ ಹೆಚ್ಚಿನ ಅನೂಕೂಲವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Aim to maintain pothole-free roads in Karnataka - Use of a redimix material called Ecofix ಕರ್ನಾಟಕದಲ್ಲಿ ಗುಂಡಿ ಮುಕ್ತ ರಸ್ತೆಗಳ ನಿರ್ವಹಣೆ ಗುರಿ - ಎಕೋಫಿಕ್ಸ್ ಎಂಬ ರೆಡಿಮಿಕ್ಸ್ ಪದಾರ್ಥ ಬಳಕೆ
Share. Facebook Twitter LinkedIn WhatsApp Email

Related Posts

BIG NEWS : ರಾಜ್ಯ ಸರ್ಕಾರಿ ನೌಕರರಿಗೆ `ಆರೋಗ್ಯ ಸಂಜೀವಿನಿ ಯೋಜನೆ’ : `ಘೋಷಣೆ/ಪ್ರಮಾಣ ಪತ್ರ’ದ ಬಗ್ಗೆ ಇಲ್ಲಿದೆ ಮಾಹಿತಿ

18/05/2025 7:12 AM1 Min Read

ರೈಲು ಪ್ರಯಾಣಿಕರೇ ಗಮನಿಸಿ : ಹಾಸನ ಜಿಲ್ಲೆಯ ಮೂಲಕ ಸಂಚರಿಸುವ ಈ ರೈಲುಗಳ ಸಂಚಾರ ರದ್ದು.!

18/05/2025 7:11 AM1 Min Read

ಸುಳ್ಯ: ಕೊರಗಜ್ಜ ಹರಕೆ ನೇಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭಾಗಿ

18/05/2025 7:04 AM1 Min Read
Recent News

BIG NEWS : ರಾಜ್ಯ ಸರ್ಕಾರಿ ನೌಕರರಿಗೆ `ಆರೋಗ್ಯ ಸಂಜೀವಿನಿ ಯೋಜನೆ’ : `ಘೋಷಣೆ/ಪ್ರಮಾಣ ಪತ್ರ’ದ ಬಗ್ಗೆ ಇಲ್ಲಿದೆ ಮಾಹಿತಿ

18/05/2025 7:12 AM

ರೈಲು ಪ್ರಯಾಣಿಕರೇ ಗಮನಿಸಿ : ಹಾಸನ ಜಿಲ್ಲೆಯ ಮೂಲಕ ಸಂಚರಿಸುವ ಈ ರೈಲುಗಳ ಸಂಚಾರ ರದ್ದು.!

18/05/2025 7:11 AM

ಸುಳ್ಯ: ಕೊರಗಜ್ಜ ಹರಕೆ ನೇಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭಾಗಿ

18/05/2025 7:04 AM

BREAKING : ಇಂಡೋನೇಷ್ಯಾದಲ್ಲಿ 4.6 ತೀವ್ರತೆಯ ಭೂಕಂಪ | Earthquake

18/05/2025 6:53 AM
State News
KARNATAKA

BIG NEWS : ರಾಜ್ಯ ಸರ್ಕಾರಿ ನೌಕರರಿಗೆ `ಆರೋಗ್ಯ ಸಂಜೀವಿನಿ ಯೋಜನೆ’ : `ಘೋಷಣೆ/ಪ್ರಮಾಣ ಪತ್ರ’ದ ಬಗ್ಗೆ ಇಲ್ಲಿದೆ ಮಾಹಿತಿ

By kannadanewsnow5718/05/2025 7:12 AM KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರದಿಂದ ಕರ್ನಾಟಕ ಸಂಜೀವನಿ ಯೋಜನೆಗೆ ಕುಟುಂಬಸ್ಥರ ನೋಂದಣಿ ಮಾಡುವ ಕುರಿತಂತೆ ಮಾಹಿತಿ ನೀಡಿದೆ. ಕರ್ನಾಟಕ ಆರೋಗ್ಯ ಸಂಜೀವಿನಿ…

ರೈಲು ಪ್ರಯಾಣಿಕರೇ ಗಮನಿಸಿ : ಹಾಸನ ಜಿಲ್ಲೆಯ ಮೂಲಕ ಸಂಚರಿಸುವ ಈ ರೈಲುಗಳ ಸಂಚಾರ ರದ್ದು.!

18/05/2025 7:11 AM

ಸುಳ್ಯ: ಕೊರಗಜ್ಜ ಹರಕೆ ನೇಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭಾಗಿ

18/05/2025 7:04 AM

BIG NEWS : 2027ರ ಡಿಸೆಂಬರ್ ಅಂತ್ಯಕ್ಕೆ ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಪೂರ್ಣ : ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿಕೆ

18/05/2025 6:47 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.