ಕೆಎನ್‌ಎನ್‌ಸಿನಿಮಾಡೆಸ್ಕ್‌: ಪ್ಯಾನ್ ಇಂಡಿಯಾ ಸಿನಿಮಾ ಬನಾರಸ್ ದಿನದಿಂದ ದಿನಕ್ಕೆ ಹೆಚ್ಚು ಸದ್ದು ಮಾಡ್ತಿದೆ. ಜಯತೀರ್ಥ ಅವರ ನಿರ್ದೇಶನದಲ್ಲಿ ಈ ರೊಮ್ಯಾಂಟಿಕ್ ಎಂಟರ್ ಟೈನರ್ ಸಿನಿಮಾ ಮೂಡಿಬರ್ತಿದೆ. ಸೆಟ್ಟೇರಿದ ದಿನದಿಂದ್ಲೂ ಒಂದಲ್ಲಾ ಒಂದು ಕಾರಣದಿಂದ ಈ ಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ. ಈಗಂತೂ ಬನಾರಸ್ ಚಿತ್ರದ ನಾಯಕ ಝೈದ್ ಖಾನ್ ಬಗ್ಗೆಯೇ ಎಲ್ಲೆಡೆ ಮಾತುಗಳು ಕೇಳಿ ಬರ್ತಿವೆ.

Banaras [Kannada]  Zaid Khan  Jayathirtha  B. Ajaneesh Loknath  Armaan Malik
Banaras [Kannada] Zaid Khan Jayathirtha B. Ajaneesh Loknath Armaan Malik

ಹೌದು, ಮೊದಲಿನಿಂದ್ಲೂ ಸಿನಿಮಾ ನಾಯಕನಾಗ್ಬೇಕು ಅನ್ನೋದು ಝೈದ್ ಖಾನ್ ಅವರ ಆಸೆಯಾಗಿತ್ತು. ಇದೀಗ ಬನಾರಸ್ ಅನ್ನುವ ಪ್ಯಾನ್ ಇಂಡಿಯಾ ಸಿನಿಮಾ ಮೂಲಕವೇ ಅವರ ಕನಸು ನನಸಾಗ್ತಿದೆ. ಸ್ಥಿತಿವಂತರ ಮನೆತನದ ಮಗನಾಗಿ ಬೆಳೆದ್ರೂ ಕೂಡ ಝೈದ್ ಖಾನ್ ಯಾವುದೇ ಹೆಚ್ಚುಗಾರಿರೆ ಇಲ್ಲದೆ ತಮ್ಮ ಪ್ರತಿಭೆ ಹಾಗೂ ಪರಿಶ್ರಮದಿಂದ ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರರಂಗದೊಂದಿಗೆ ಬಹಳಷ್ಟು ವರ್ಷಗಳಿಂದ ಒಡನಾಟವಿದ್ದಿದ್ರಿಂದ ನಾಯಕನಾಗಲು ಏನೆಲ್ಲಾ ತಯಾರಿಗಳನ್ನು ಮಾಡಿಕೊಳ್ಬೇಕು ಅನ್ನೋದ್ರ ಬಗ್ಗೆ ಬೇರೆ ಕಲಾವಿದರಿದ ಸಲಹೆ ಪಡೆದುಕೊಂಡಿದ್ರು. ನಟನೆ, ಡ್ಯಾನ್ಸ್, ಫೈಟ್ ಎಲ್ಲದ್ರಲ್ಲೂ ಟ್ರೈನಿಂಗ್ ಪಡೆದುಕೊಂಡಿದ್ರು. ಸಿನಿಮಾಗಾಗಿ ಇಷ್ಟೆಲ್ಲಾ ಡೆಡಿಕೇಶನ್ ಇದ್ದಿದ್ರಿಂದ್ಲೇ ಸಿನಿಮಾ ಬಿಡುಗಡೆಗೂ ಮೊದಲೇ ಝೈದ್ ಖಾನ್ ತಮ್ಮ ನಟನೆಯಿಂದ ದೇಶಾದ್ಯಂತ ಟಾಕ್ ಕ್ರಿಯೇಟ್ ಮಾಡಿದ್ದಾರೆ.

Banaras [Kannada] Zaid Khan Jayathirtha B. Ajaneesh Loknath Armaan Malik

ಇತ್ತೀಚೆಗೆ ಹೊರಬಂದ ಬನಾರಸ್ ಚಿತ್ರದ ಮಾಯಗಂಗೆ.. ಸಾಂಗ್ ಸಖತ್ತಾಗಿ ಕ್ಲಿಕ್ ಆಗಿದೆ. ಝೈದ್ ಖಾನ್ ಹಾಗೂ ನಾಯಕಿ ಸೋನಲ್ ಮೊಂತೇರೊ ಕಾಂಬಿನೇಶನ್ ನ ಈ ಸಾಂಗ್ ಟ್ರೆಂಡ್ ಸೆಟ್ ಮಾಡಿದೆ. ಅದ್ರಲ್ಲೂ ನಟ ಝೈದ್ ಖಾನ್  ಪಾತ್ರದಲ್ಲಿ ತಲ್ಲೀನರಾಗಿ ನಟಿಸಿರುವ ರೀತಿ ಎಲ್ಲರ ಗಮನ ಸೆಳೆದಿದೆ. ಹೀಗಾಗಿ ಮೊದಲ ಚಿತ್ರದಲ್ಲೇ ಝೈದ್ ಖಾನ್ ಉತ್ತಮ ನಾಯಕನಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳೂ ಕಾಣಿಸ್ತಿವೆ.

ದೇವರಾಜ್, ಅಚ್ಯುತ್ ಕುಮಾರ್ ಸುಜಯ್ ಶಾಸ್ತ್ರಿ ಇನ್ನೂ ಹಲವಾರು ಕಲಾವಿದರು ಈ ಚಿತ್ರದ ತಾರಾಗಣದಲ್ಲಿದ್ದಾರೆ. ಬಿ.ಅಜನೀಶ್ ಲೋಕನಾಥ್ ಈ ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಬನಾರಸ್ ಚಿತ್ರಕ್ಕೆ ತಿಲಕ್ ರಾಜ್ ಬಲ್ಲಾಳ್ ಬಂಡವಾಳ ಹೂಡಿದ್ದಾರೆ. ಒಟ್ಟಾರೆ ಬನಾರಸ್ ಸಿನಿಮಾ ಮೂಲಕ ಪ್ರತಿಭಾವಂತ ಯುವ ನಟ ಝೈದ್ ಖಾನ್ ಕನ್ನಡ ಚಿತ್ರರಂಗಕ್ಕೆ ಭರವಸೆಯ ನಟನಾಗಿ ಎಂಟ್ರಿ ಕೊಡ್ತಿದ್ದಾರೆ.

Share.
Exit mobile version