ಬೆಂಗಳೂರು : ಅಗ್ನಿಪಥ್ ಯೋಜನೆ ಖಂಡಿಸಿ ಇಂದು ನಗರದ ರೇಸ್‌ಕೋರ್ಸ್ ಬಳಿಯ ಕಾಂಗ್ರೆಸ್ ಕಚೇರಿ ಎದುರೇ ನಲಪಾಡ್ ನೇತೃತ್ವದಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಿ ಹೈಡ್ರಾಮ ಸೃಷ್ಟಿಸಿದ್ದಾರೆ.
ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ತಳ್ಳಾಟ ನೂಕಾಟ ನಡೆಸಿದ್ದಾರೆ. ಈ ವೇಳೆ ಶಾಸಕ ಬಿ.ವಿ ಶ್ರೀನಿವಾಸ್ ಅಂಗಿ ಹರಿದುಹೋಗಿದೆ. ರಸ್ತೆಯಲ್ಲಿ ಕಾಂಗ್ರೆಸ್ ನಾಯಕಿಯ ಹೊರಳಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ಯಾರಿ ಕೇಡ್ ಹತ್ತಿ ಬಿ.ವಿ ಶ್ರೀನಿವಾಸ್ ಪೊಲೀಸರಿಗೆ ಅವಾಜ್ ಹಾಕಿದ್ದಾರೆ. ರಾಜಭವನಕ್ಕೆ ಮುತ್ತಿಗೆ ಹಾಕಲು ಹೊರಟ ಕಾಂಗ್ರೆಸ್ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು. ಕೆಲ ಕಾರ್ಯಕರ್ತರನ್ನು ಬಸ್ಸಿನಲ್ಲಿ ಪೊಲೀಸರಿಂದ ಹೊತ್ತೊಯ್ಯಲಾಯಿತು.