ದೆಹಲಿ: ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪತ್ರ ಬರೆದು, ಚುನಾವಣೆಯಲ್ಲಿ ಗೆದ್ದು ಬರುವಂತೆ ಶುಭ ಕೋರಿದ್ದಾರೆ. ನೀವು ಸಂಸದರಾಗಿ ನನ್ನ ತಂಡ ಸೇರುತ್ತಿರುವುದು ದೊಡ್ಡ ಆಸ್ತಿ ಎಂದು ತಿಳಿಸಿದ್ದಾರೆ.

ಸುದೀರ್ಘ ಪತ್ರ ಬರೆದಿರುವ ಅವರು, ನೀವು ಮುಖ್ಯಮಂತ್ರಿ ಯಾಗಿ, ನೀರಾವರಿ ಸಚಿವರಾಗಿ ಗೃಹ ಸಚಿವರಾಗಿ, ಕಾನೂನು ಸಚಿವರಾಗಿ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದೀರಿ, ನೀವು ಶಿಗ್ಗಾವಿಯಲ್ಲಿ ಸುಮಾರು 30 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಮಾಡಿದ್ದೀರಿ, ಕ್ಷೇತ್ರದಲ್ಲಿ ಸಿಮೆಂಟ್ ರಸ್ತೆಗಳು, ಶಿಕ್ಷಣ ಸಂಸ್ಥೆಗಳನ್ನು ನಿರ್ಮಾಣ ಮಾಡಿದ್ದೀರಿ, ಕೊವಿಡ್ ಸಂದರ್ಭದಲ್ಲಿ ನಿಮ್ಮ ಸ್ವಂತ ಮನೆಯನ್ನು ಕೊವಿಡ್ ಕೇಂದ್ರವನ್ನಾಗಿ ಮಾಡಿ ಆಸ್ಪತ್ರೆಗಳ ಮೇಲಿನ ಭಾರ ಕಡಿಮೆ ಮಾಡಿದ್ದೀರಿ. ನೇಕಾರರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಿ, ಆಧುನಿಕ ತಂತ್ರಜ್ಞಾನ ಬಳಸಿ ಅವರ ಜೀವನ ಮಟ್ಟ ಸುಧಾರಣೆ ಮಾಡಿದ್ದೀರಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಮಾಡಿದ್ದೀರ, ನೀವು ಒಬ್ಬ ಕಾರ್ಯಕರ್ತರಾಗಿ ಪಡೆದ ಅನುಭವ ಜನ ಸೇವಕರಾಗಿ ಮಾಡಿದ ಸೇವೆ ಹಾವೇರಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಿಳಿಸಿದ್ದಾರೆ.

ಜನರ ಆಶೀರ್ವಾದದಿಂದ ನೀವು ಸಂಸದರಾಗಿ ನಮ್ಮ ತಂಡದ ಸದಸ್ಯರಾಗಿ ಬರುವುದು ನನಗೆ ದೊಡ್ಡ ಆಸ್ತಿ ಸಿಕ್ಕಂತೆ. ನಮ್ಮ ತಂಡ ಹಾವೇರಿ ಕ್ಷೇತ್ರ ಹಾಗೂ ದೇಶದ ಅಭಿವೃದ್ಧಿಗೆ ಶ್ರಮವಹಿಸಲಿದೆ. ನಾನು ಈ ಪತ್ರದ ಮೂಲಕ ಕ್ಷೇತ್ರದ ಜನತೆಗೆ ಹೇಳುವುದೇನೆಂದರೆ, ಇದು ಸಾಮನ್ಯ ಚುನಾವಣೆಯಲ್ಲಿ ಇದು ದೇಶದ ಪ್ರತಿಯೊಂದು ಕುಟುಂಬದ ವಿಶೇಷವಾಗಿ ಹಿರಿಯ ನಾಗರಿಕರು ಕಳೆದು ಐದಾರು ದಶಕದಲ್ಲಿ ಅನುಭವಿಸಿದ ತೊಂದರೆಗಳು ಕಳೆದ ಒಂದು ದಶಕದಲ್ಲಿ ಸಾಕಷ್ಟು ಬೆಳವಣಿಗೆಗಳನ್ನು ಕಂಡಿದ್ದಾರೆ. ಅನೇಕ ಜನರ ಜೀವನ ಮಟ್ಟ ಸುಧಾರಣೆಯಾಗಿದೆ. ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಇನ್ನೂ ಸಾಕಷ್ಟು ಸಮಸ್ಯೆಗಳಿವೆ. ಈ ಚುನಾವಣೆ ಜನರ ಜೀವನಮಟ್ಟವನ್ನು ಇನ್ನಷ್ಟು ಸುಧಾರಣೆಗೊಳಿಸಲು ಪ್ರೇರಣೆಯಾಗಲಿದೆ.

ಈ ಚುನಾವಣೆಯಲ್ಲಿ ಬಿಜೆಪಿ ಪಡೆಯುವ ಪ್ರತಿಯೊಂದು ಮತವೂ 2047 ಕ್ಕೆ ಅಭಿವೃದ್ಧಿ ಹೊಂದಿದ ಭಾರತ ಮಾಡಲು ಮಹತ್ವದ್ದಾಗಿವೆ. ಮೊದಲ ಎರಡು ಹಂತದ ಮತದಾನದಲ್ಲಿ ಮತದಾರರು ತಮ್ಮ ಮತಗಳ ಮೂಲಕ ದೇಶದ ಅಭಿವೃದ್ಧಿ ಪರ ಇರುವ ಸಂದೇಶ ನೀಡಿದ್ದಾರೆ. ಮತದಾರರಿಗೆ ಕಾಂತ ಹಾಗೂ ಇಂಡಿ ಒಕ್ಕೂಟದ ಸಮಾಜ ಒಡೆಯುವ ಮನಸ್ಥಿತಿ, ಎಸ್ಸಿ ಎಸ್ಟಿ ಹಾಗೂ ಒಬಿಸಿ ಸಮುದಾಯಗಳ ಮೀಸಲಾತಿಯನ್ನು ತಮ್ಮ ಓಟ್ ಬ್ಯಾಂಕ್ ಸಮುದಾಯಕ್ಕೆ ಧರ್ಮಾಧಾರಿತ ಮೀಸಲಾತಿ ಸಂವಿಧಾನ ವಿರೋಧಿಯಾದರೂ ಅವರಿಗೆ ಕೊಡಲು ತೀರ್ಮಾನಿಸಿದ್ದಾರೆ.

ಅಲ್ಲದೇ ಅವರು ನಿಮ್ಮ ಪಿತ್ರಾರ್ಜಿತ ಆಸ್ತಿಯನ್ನು ತಮ್ಮ ಓಟ್ ಬ್ಯಾಂಕ್ ಸಮುದಾಯಕ್ಕೆ ಹಂಚಿಕೆ ಮಾಡುವ ಅಪಾಯಕಾರಿ ತೀರ್ಮಾನ ಮಾಡಿದ್ದಾರೆ. ಇದನ್ನು ನಾವೆಲ್ಲರೂ ಒಟ್ಟಾಗಿ ತಡೆಯಬೇಕಿದೆ ಎಂದು ತಿಳಿಸಿದ್ದಾರೆ.

ಈಗ ಬೇಸಿಗೆ ಇರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಆದರೆ, ದೇಶದ ಭವಿಷ್ಯದ ದೃಷ್ಟಿಯಿಂದ ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಆದಷ್ಟು ಬೆಳಗಿನ ಸಮಯ ಮತಗಟ್ಟೆಗೆ ತೆರಳಿ ಮತದಾನ ಮಾಡುವಂತೆ ಮತದಾರರಿಗೆ ಮನವಿ ಮಾಡಿದ್ದಾರೆ.

ಈ ಚುನಾವಣೆ ಸಂದರ್ಭದಲ್ಲಿ ನಮ್ಮ‌ಕಾರ್ಯಕರ್ತರು ಮತದಾರರನ್ನು ಪ್ರೇರೆಪಿಸಿ ಹೆಚ್ಚಿನ ಮತದಾನವಾಗುವಂತೆ ನೋಡಿಕೊಳ್ಳಬೇಕು. ಈ ಮೂಲಕ ಬೂತ್ ಗೆಲ್ಲುವ‌ ಮೂಲಕ ಲೋಕಸಭಾ ಕ್ಷೇತ್ರ ಗೆಲ್ಲುವಂತೆ ನೋಡಿಕೊಳ್ಳಬೇಕು. ಇದೇ ವೇಳೆ ಕಾರ್ಯಕರ್ತರು ನಿಮ್ಮ ಆರೋಗ್ಯದ ಕಡೆಗೆ ಗಮನ ಕೊಡಿ ಎಂದು ಪತ್ರದ ಮೂಲಕ ಪ್ರಧಾನಿ ಮನವಿ ಮಾಡಿದ್ದಾರೆ.

ನನ್ನ ಪ್ರತಿ ಕ್ಷಣವೂ ದೇಶದ ಜನರ ಶ್ರೇಯೋಭಿವೃದ್ದಿಗೆ ಮೀಸಲಿದೆ ಎಂದು ಹಾವೇರಿ ಕ್ಷೇತ್ರದ ಅಭ್ಯರ್ಥಿಯಾಗಿ ಈ ಸಂದೇಶವನ್ನು ಎಲ್ಲ ಮತದಾರರಿಗೆ ತಲುಪಿಸಿ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

“ಚುನಾವಣೆಗೂ ಮುನ್ನವೇಕೆ?” : ಕೇಜ್ರಿವಾಲ್ ಬಂಧನದ ಕುರಿತು ‘ED’ಗೆ ಸುಪ್ರೀಂಕೋರ್ಟ್ ಪ್ರಶ್ನೆ

“ಚುನಾವಣೆಗೂ ಮುನ್ನವೇಕೆ?” : ಕೇಜ್ರಿವಾಲ್ ಬಂಧನದ ಕುರಿತು ‘ED’ಗೆ ಸುಪ್ರೀಂಕೋರ್ಟ್ ಪ್ರಶ್ನೆ

Share.
Exit mobile version