ನವದೆಹಲಿ : ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ಮೋದಿಯವರು ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎನ್‌ಸಿಸಿ ಕೆಡೆಟ್‌ಗಳು, ಎನ್‌ಎಸ್‌ಎಸ್ ಸ್ವಯಂಸೇವಕರು ಮತ್ತು ಪ್ರದರ್ಶಕರೊಂದಿಗೆ ಸಂವಾದ ನಡೆಸಿದರು.
ಈ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿದಅವರು, ಯುವಕರು ಅಭಿವೃದ್ಧಿ ಹೊಂದಿದ ಭಾರತದ ಶ್ರೇಷ್ಠ ಫಲಾನುಭವಿಗಳಾಗಲಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.
ಯುವ ಸಂವಾದ ನನಗೆ ಎರಡು ಅಂಶಗಳಿಂದ ಪ್ರಾಮುಖ್ಯತೆಯನ್ನು ಹೊಂದಿದೆ. ಮೊದಲನೆಯದು ಯುವಕರಲ್ಲಿ ಶಕ್ತಿ, ಉತ್ಸಾಹ ಮತ್ತು ನವೀನತೆ ಇದೆ. ನಿಮ್ಮ ಮೂಲಕ ಸಕಾರಾತ್ಮಕತೆಯು ಹಗಲು ರಾತ್ರಿ ಕಷ್ಟಪಟ್ಟು ಕೆಲಸ ಮಾಡಲು ನನ್ನನ್ನು ಪ್ರೇರೇಪಿಸುತ್ತದೆ. ಎರಡನೆಯದು ‘ಈ ಆಜಾದಿ ಕಾ ಅಮೃತ್ ಕಾಲ್’ ನಲ್ಲಿ ನೀವೆಲ್ಲರೂ ದೇಶದ ಆಕಾಂಕ್ಷೆಗಳು ಮತ್ತು ಕನಸುಗಳನ್ನು ಪ್ರತಿನಿಧಿಸುತ್ತೀರಾ ಎಂದೇಳಿದ್ದಾರೆ.
Great interacting with NCC cadets, NSS volunteers and performers, who are a part of this year's Republic Day programme. https://t.co/I0qbuabBi9
— Narendra Modi (@narendramodi) January 25, 2023
ನೀವು ಅಭಿವೃದ್ಧಿ ಹೊಂದಿದ ಭಾರತದ ಶ್ರೇಷ್ಠ ಫಲಾನುಭವಿಗಳಾಗಲಿದ್ದೀರಿ, ಇದನ್ನು ನಿರ್ಮಿಸುವ ದೊಡ್ಡ ಜವಾಬ್ದಾರಿ ನಿಮ್ಮ ಹೆಗಲ ಮೇಲಿದೆ ಎಂದು ಮೋದಿಯವರು ಹೇಳಿದ್ದಾರೆ.
ಭಾರತದ ಯುವಕರು ಕಾಣದ ಸಾಧ್ಯತೆಗಳನ್ನು ಹುಡಕಬೇಕು. ಅಸ್ಪೃಶ್ಯ ಪ್ರದೇಶಗಳನ್ನು ಅನ್ವೇಷಿಸಬೇಕು. ಊಹಿಸಲಾಗದ ಪರಿಹಾರಗಳನ್ನು ಹುಡುಕಬೇಕು ಎಂದು ಯುವಕರಿಗೆ ಸಲಹೆ ನೀಡಿದ್ದಾರೆ.
WATCH VIDEO:ಹೀಗೆ ಸಮೋಸ ತಯಾರಾಗುತ್ತಾ? ಕಾಲಲ್ಲಿ ಆಲೂಗಡ್ಡೆ ತುಳಿಯುವುದನ್ನ ನೋಡಿದ್ರೆ, ಜನ್ಮದಲ್ಲಿ ತಿನ್ನಲ್ಲ
BIGG NEWS: ಬೆಂಗಳೂರಿನಲ್ಲಿ ಖೋಟಾನೋಟು ಮುದ್ರಿಸಿ ಮಾರಾಟ ಮಾಡುತ್ತಿದ್ದ ನಾಲ್ವರು ಅರೆಸ್ಟ್
BREAKING NEWS : ಆಕ್ಷೇಪಾರ್ಹ ಟ್ವೀಟ್ ; ಖ್ಯಾತ ನಿರ್ದೇಶಕ ‘ರಾಮ್ ಗೋಪಾಲ್ ವರ್ಮಾ’ ವಿರುದ್ಧ ಪೊಲೀಸರಿಗೆ ದೂರು