ಗದಗ: ಜಿಲ್ಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ ಹುಟ್ಟುಹಬ್ಬದ ಶುಭ ಕೋರಿ ಬ್ಯಾನರ್ ಕಟ್ಟುವಾಗಿ ವಿದ್ಯುತ್ ಸ್ಪರ್ಶಿಸಿ ಮೂವರು ಅಭಿಮಾನಿಗಳು ಸಾವನ್ನಪ್ಪಿದ್ದರು. ಅವರಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿದಂತೆ ತಲಾ 2 ಲಕ್ಷ ಪರಿಹಾರದ ಚೆಕ್ ಅನ್ನು ಇಂದು ವಿತರಣೆ ಮಾಡಲಾಗಿದೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ನಟ ಯಶ್ ಗೆ ಹುಟ್ಟುಹಬ್ಬದ ಶುಭ ಕೋರಿ ಬ್ಯಾನರ್ ಕಟ್ಟುವಾಗಿ ವಿದ್ಯುತ್ ಸ್ಪರ್ಶಿಸಿ ಮುರಳಿ, ನವೀನ್, ಹನುಮಂತು ಸಾವನ್ನಪ್ಪಿದ್ದರು. ಇಂತಹ ಮೃತರಿಗೆ ಸಿಎಂ ಸಿದ್ಧರಾಮಯ್ಯ ತಲಾ 2 ಲಕ್ಷ ಪರಿಹಾರವನ್ನು ನೀಡುವುದಾಗಿ ಘೋಷಣೆ ಮಾಡಿದ್ದರು.

ರಾಜ್ಯ ಸರ್ಕಾರ ಘೋಷಣೆ ಮಾಡಿದಂತೆ ಇಂದು ಗದಗ ಜಿಲ್ಲಾಧಿಕಾರಿ ವೈಶಾಲಿ ಅವರು ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮಕ್ಕೆ ತೆರಳಿ ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ಪರಿಹಾರದ ಚೆಕ್ ಅನ್ನು ವಿತರಣೆ ಮಾಡಿದರು.

ಘಟನೇ ಹಿನ್ನೆಲೆ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸುಣಧೂರು ಗ್ರಾಮದ ನೀಲಗಿರಿ ತೋಪಿನಲ್ಲಿ ತಡರಾತ್ರಿ ನಟ ಯಶ್ ಅವರ ಹುಟ್ಟು ಹಬ್ಬದ ಅಂಗವಾಗಿ ಸುಮಾರು 25 ಅಡಿ ಕಟೌಟ್ ಅನ್ನು ಕಟ್ಟುವಾಗ ವಿದ್ಯುತ್ ಶಾಕ್ ತಗುಲಿ ಮೂರು ಯುವಕರು ಸಾವನ್ನಪ್ಪಿದ್ದಾರೆ.

ಮೃತರನ್ನು ಹನುಮಂತ್ ಹರಿಜನ್ (21) ಮುರಳಿ ನಡುವಿನಮನಿ (20) ನವೀನ್ (19) ಮೃತ ದುರ್ದೈವಿಗಳಾಗಿದ್ದಾರೆ. ಘಟನೆ ಸಂಭವಿಸಿದ ತಕ್ಷಣ ದುರಂತದಲ್ಲಿ ಮೂವರು ಯುವಕರಿಗೆ ಗಂಭೀರ ಗಾಯವಾಗಿದೆ. ಮಂಜುನಾಥ್ ದೀಪಕ್ ಹರಿಜನ್ ಹಾಗೂ ಪ್ರಕಾಶ್ ಎಂಬ ಯುವಕರಿಗೆ ಗಂಭೀರವಾದಂತಹ ಗಾಯಗಳಾಗಿವೆ.ತಡರಾತ್ರಿ ಬರ್ತಡೆ ಬ್ಯಾನರ್ ಕಟ್ಟುವಾಗ ನಡೆದ ದುರಂತವಾಗಿದೆ ಎಂದು ತಿಳಿದುಬಂದಿದೆ.

ತಡ ರಾತ್ರಿಯ ಸುಮಾರು 25 ಅಡಿಗು ಹೆಚ್ಚು ಎತ್ತರವಾಗಿರುವಂತಹ ಯಶ್ ಬ್ಯಾನರ್ ಅವರನ್ನು ಕಟ್ಟುವ ವೇಳೆ ವಿದ್ಯುತ್ ಶಾಕ್ ತಗೋಳಿ ಸ್ಥಳದಲ್ಲಿ ಮೂವರು ಯುವಕರು ಸಾವನಪ್ಪಿದ್ದಾರೆ. ಮೂವರು ಯುವಕರು ಕೂಲಿನಲ್ಲಿ ಮಾಡಿ ಕೊಂಡು ಜೀವನ ಸಾಗಿಸುತ್ತಿದ್ದು ಯಶ್ ಅವರ ಮೇಲೆ ಅಪಾರವಾದ ಅಂತಹ ಅಭಿಮಾನ ಹೊಂದಿದ್ದರು. ಮೃತ ಯುವಕರ ಮೇಲೆ ಮನೆ ನಿರ್ವಹಣೆ ನಡೆಯುತ್ತಿತ್ತು ಎಂದು ಗ್ರಾಮಸ್ಥರು ಹೇಳುತ್ತಿದ್ದು, ಸಾವನ್ನಪ್ಪಿರುವ ಯುವಕರ ಕುಟುಂಬದವರ ಆಕರಂದನ ಮುಗಿಲು ಮುಟ್ಟಿದೆ.ಇದೀಗ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

BIG UPDATE: ‘ತಡರಾತ್ರಿ ಪಾರ್ಟಿ’ ಕೇಸ್: ಪೊಲೀಸರ ಮುಂದೆ ವಿಚಾರಣೆ ಹಾಜರಾದ ‘ಸ್ಯಾಂಡಲ್ ವುಡ್ ಸೆಲೆಬ್ರೆಟೀಸ್’

BREAKING: ದೇಶದ ಅತಿ ಉದ್ದದ ‘ಸಮುದ್ರ ಸೇತುವೆ’ ಉದ್ಘಾಟಿಸಿದ ‘ಪ್ರಧಾನಿ ಮೋದಿ’ | Atal Setu inauguration

Share.
Exit mobile version