BREAKING NEWS : ಯಲಹಂಕ ಏರ್ಪೋರ್ಟ್ ಪ್ಲೈಓವರ್ ಮೇಲೆ ಅಪಘಾತ ಪ್ರಕರಣ : ಚಿಕಿತ್ಸೆ ಫಲಿಸದೇ ಯುವತಿ ಸಾವು

ಬೆಂಗಳೂರು  : ಯಲಹಂಕ  ಏರ್‌ಪೋರ್ಟ್‌ ಪ್ಲೈಓವರ್‌ ಮೇಲೆ ನಡೆದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಹಾಗೂ ಯುವತಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ 18 ವರ್ಷದ ಯುವತಿ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ಯುವಕನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೇಗವಾಗಿ ಬಂದು ಡಿವೈಡರ್‌ಗೆ ಬೈಕ್‌ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.  … Continue reading BREAKING NEWS : ಯಲಹಂಕ ಏರ್ಪೋರ್ಟ್ ಪ್ಲೈಓವರ್ ಮೇಲೆ ಅಪಘಾತ ಪ್ರಕರಣ : ಚಿಕಿತ್ಸೆ ಫಲಿಸದೇ ಯುವತಿ ಸಾವು