ನವದೆಹಲಿ: ಟ್ವಿಟ್ಟರ್ ಎಕ್ಸ್ ಆಗಿ ಬದಲಾವಣೆ ಮಾಡಲಾಗಿತ್ತು. ಈ ಬಳಿಕ ಎಕ್ಸ್ ಅನ್ನು ಪಾವತಿ ವ್ಯವಸ್ಥೆ ಜಾರಿಗೊಳಿಸೋದಾಗಿ ಎಲೋನ್ ಮಸ್ಕ್ ಘೋಷಣೆ ಮಾಡಿದ್ದರು. ಆ ಬೆನ್ನಲ್ಲೇ ಜನಪ್ರಿಯ ಸಾಮಾಜಿಕ ಮಾಧ್ಯಮ ಎಕ್ಸ್ ಡೌನ್ ಆಗಿದೆ. ಬಳಕೆದಾರರು ಈಗ ಪರದಾಡುತ್ತಿರೋದಾಗಿ ತಿಳಿದು ಬಂದಿದೆ.
ಹೌದು ಈ ಹಿಂದೆ ಟ್ವಿಟರ್ ಎಂದು ಕರೆಯಲ್ಪಡುತ್ತಿದ್ದ ಪ್ಲಾಟ್ ಫಾರ್ಮ್ X ಕೆಲಸ ಮಾಡುವುದನ್ನು ನಿಲ್ಲಿಸಿದೆ. ಎಲೋನ್ ಮಸ್ಕ್ ಅವರು ಸೈಟ್ಗೆ ಪ್ರವೇಶಕ್ಕಾಗಿ ಎಲ್ಲರಿಗೂ ಪಾವತಿಸಲು ಒತ್ತಾಯಿಸಲು ಯೋಜಿಸುತ್ತಿದ್ದಾರೆ ಎಂದು ಹೇಳಿದ ಕೆಲವೇ ಗಂಟೆಗಳ ನಂತರ X ಸೈಟ್ ಡೌನ್ ಆಗಿದೆ.
ಎಕ್ಸ್ ಕೆಲವು ಬಳಕೆದಾರರಿಗೆ ಕೈಕೊಟ್ಟ ಕಾರಣ, ಸರ್ವರ್ ಡೌನ್ ಆಗಿ, ಬಳಕೆದಾರರು ಪರದಾಡುವಂತೆ ಆಗಿದೆ. ಟ್ರ್ಯಾಕಿಂಗ್ ವೆಬ್ಸೈಟ್ ಡೌನ್ ಡಿಟೆಕ್ಟರ್ ಮಂಗಳವಾರ ಮಧ್ಯಾಹ್ನ ವಿಶ್ವದಾದ್ಯಂತ ಡೌನ್ ಆಗಿ, ಬಳಕೆದಾರರಿಗೆ ಸಮಸ್ಯೆ ಉಂಟಾಗಿರೋದಾಗಿ ತಿಳಿಸಿದೆ.
ವರದಿಗಳ ಪ್ರಕಾರ ವಿಶ್ವಾದ್ಯಂತ ಅನೇಕ ಕಡೆಯಲ್ಲಿ ಕೆಲ ಕಾಲ ಜನಪ್ರಿಯ ಸಾಮಾಜಿಕ ಫ್ಲಾಟ್ ಫಾರ್ಮ್ ಎಕ್ಸ್ ವರ್ಕ್ ಆಗದೇ ಸಮಸ್ಯೆ ಉಂಟಾಗಿದೆ ಎಂಬುದಾಗಿ ಹೇಳಲಾಗುತ್ತಿದೆ.
ಇದಕ್ಕೂ ಮುನ್ನಾ ಎಕ್ಸ್ ಬಳಕೆಯನ್ನು ಪಾವತಿ ಬಳಕೆ ವ್ಯವಸ್ಥೆಯಾಗಿ ಮಾರ್ಪಡಿಸೋದಾಗಿ ಎಲಾನ್ ಮಸ್ಕ್ ಘೋಷಣೆ ಮಾಡಿದ್ದರು. ಇನ್ಮುಂದೆ ಎಕ್ಸ್ ಬಳಕೆದಾರರು ಪಾವತಿಸಿ, ಬಳಕೆ ಮಾಡುವಂತ ವ್ಯವಸ್ಥೆ ಕೆಲವೇ ದಿನಗಳಲ್ಲಿ ಜಾರಿಗೊಳಿಸೋದಾಗಿಯೂ ಹೇಳಿದ್ದರು. ಈ ಘೋಷಣೆಯ ಬೆನ್ನಲ್ಲೇ ವಿಶ್ವದಾದ್ಯಂತ ಎಕ್ಸ್ ಸರ್ವರ್ ಡೌನ್ ಆಗಿರೋದಾಗಿ ಅನೇಕರು ವರದಿಯ ಮಾಡಿದ್ದಾರೆ. ಈ ಸಮಸ್ಯೆಯಿಂದಾಗಿ ಬಳಕೆದಾರರು ಎಕ್ಸ್ ಬಳಕೆ ಮಾಡಲು ಸಾಧ್ಯವಾಗದೇ ಸಮಸ್ಯೆ ಎದುರಿಸುತ್ತಿರೋದಾಗಿ ವರದಿಯನ್ನು ಮಾಡಿದ್ದಾರೆ.