ಬೆಂಗಳೂರು : 2023-24 ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ/ಪ್ರೌಢಶಾಲಾ ಸಹಶಿಕ್ಷಕರು ಮತ್ತು ಮುಖ್ಯಶಿಕ್ಷಕರು/ ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ನಡೆಸಲಾಗುತ್ತಿರುವ ಲಿಖಿತ ಪರೀಕ್ಷೆಯ ವೇಳಾಪಟ್ಟಿಯಲ್ಲಿನ ಸಮಯ ಬದಲಾವಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ಸರ್ಕಾರಿ ಪ್ರಾಥಮಿಕ/ಪ್ರೌಢಶಾಲಾ ಸಹಶಿಕ್ಷಕರು ಮತ್ತು ಮುಖ್ಯಶಿಕ್ಷಕರು/ ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಮಂಡಲಿಯ ಕೆ.ಎಸ್.ಕ್ಯು.ಎ.ಎ.ಸಿ ವತಿಯಿಂದ 16.05.2024 ರಂದು ಲಿಖಿತ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಈ ಸಂಬಂಧ ಉಲ್ಲೇಖ (1) ಮತ್ತು (2) ರಲ್ಲಿ ವೇಳಾಪಟ್ಟಿಯನ್ನು ನೀಡಲಾಗಿರುತ್ತದೆ.

ಸದರಿ ಪರೀಕ್ಷೆಗೆ ಸಂಬಂಧಿಸಿದಂತೆ ಉಲ್ಲೇಖ (1) ರ ಮಾನ್ಯ ಆಯುಕ್ತರು, ಶಾ.ಶಿ.ಇ ರವರ ಕಛೇರಿ ಅಧಿಕೃತ ಜ್ಞಾಪನದಲ್ಲಿ ಬೆಳಗಿನ ಅಧಿವೇಶನದ ಸಮಯವನ್ನು ಬೆಳಗ್ಗೆ 10.30 ರಿಂದ 12.30 ರವರೆಗೆ ಎಂದು ನಮೂದಿಸಲಾಗಿದ್ದು, ಉಲ್ಲೇಖ (2) ರ ಈ ಕಛೇರಿ ಸುತ್ತೋಲೆಯಲ್ಲಿ ಬೆಳಗ್ಗೆ 10.00 ರಿಂದ 12.30 ರವರೆಗೆ ನಿಗದಿಪಡಿಸಲಾಗಿದೆ. ಅಲ್ಲದೆ ಪ್ರಶ್ನೆಪತ್ರಿಕೆಗೆ ಉತ್ತರಿಸುವ ಅವಧಿ 2.30 ಗಂಟೆಗಳಾಗಿದ್ದು, ಅಭ್ಯರ್ಥಿಗಳ ಪ್ರವೇಶ ಪತ್ರದಲ್ಲಿ ಬೆಳಗಿನ ಅಧಿವೇಶನದ ಸಮಯವನ್ನು ಬೆಳಗ್ಗೆ 10.30 ರಿಂದ 12.30 ರವರೆಗೆ ಎಂದು ಮುದ್ರಿತವಾಗಿರುತ್ತದೆ. ಇದರಿಂದ ಅಭ್ಯರ್ಥಿಗಳಲ್ಲಿ ಗೊಂದಲವುಂಟಾಗಿದ್ದು, ನಿರ್ದೇಶಕರು (ಪ್ರಾಥಮಿಕ), ಶಾ.ಶಿ.ಇ ರವರ ಮಾಹಿತಿಯ ಮೇರೆಗೆ ಉಲ್ಲೇಖ (2) ರ ಈ ಕಛೇರಿ ಸುತ್ತೋಲೆಯಲ್ಲಿನ ಬೆಳಗಿನ ಅಧಿದೇಶನದ ಸಮಯವನ್ನು 10.00 ರಿಂದ 12.30 ರ ಬದಲಾಗಿ 10.30 ರಿಂದ 1.00 ಗಂಟೆವರೆಗೆ ಎಂದು ಓದಿಕೊಳ್ಳಲು ಈ ಮೂಲಕ ತಿಳಿಸಿದೆ.

 

Share.
Exit mobile version