ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಆವೃತ್ತಿಯನ್ನು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುವುದಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.
ಡಬ್ಲ್ಯುಪಿಎಲ್ 2023 ರ ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ದೊಡ್ಡ ಬಾಲಿವುಡ್ ತಾರೆಗಳು ಪ್ರದರ್ಶನ ನೀಡಲು ಸಿದ್ಧರಾಗಿರುವಾಗ, ಡಬ್ಲ್ಯುಪಿಎಲ್ ಪಂದ್ಯಗಳಿಗಾಗಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರನ್ನು ಆಕರ್ಷಿಸಲು ಬಿಸಿಸಿಐ ಅದ್ಭುತ ಉಪಕ್ರಮವನ್ನು ತೆಗೆದುಕೊಂಡಿದೆ. BookMyShow ನಲ್ಲಿ ಪಂದ್ಯಗಳ ಟಿಕೆಟ್ ಬುಕಿಂಗ್ ಅನ್ನು ಪ್ರಾರಂಭಿಸಲಾಗಿದೆ ಮತ್ತು ದೊಡ್ಡ ಸುದ್ದಿ ಏನೆಂದರೆ, ಕ್ರೀಡಾಂಗಣದಲ್ಲಿ ಮಹಿಳೆಯರಿಗೆ ಪ್ರವೇಶವನ್ನು ಉಚಿತವಾಗಿ ನೀಡಿದೆ]. WPL ನ ಉದ್ಘಾಟನಾ ಆವೃತ್ತಿಯು ಮಾರ್ಚ್ 4 ರಂದು DY ಪಾಟೀಲ್ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವಿನ ಆರಂಭಿಕ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ.