ಪ್ರವಾಸಿಗರ ಗಮನಕ್ಕೆ: ನಾಳೆಯಿಂದ ವಿಶ್ವವಿಖ್ಯಾತ ‘ನಂದಿ ಗಿರಿಧಾಮ’ 1 ತಿಂಗಳು ಬಂದ್ | Nandi Hills

ಚಿಕ್ಕಬಳ್ಳಾಪುರ: ಜಿಲ್ಲೆಯ ವಿಶ್ವವಿಖ್ಯಾತ ನಂದಿ ಗಿರಿಧಾಮವನ್ನು ನವೀಕರಣ ಕಾಮಗಾರಿಯ ಹಿನ್ನಲೆಯಲ್ಲಿ ನಾಳೆಯಿಂದ ಒಂದು ತಿಂಗಳುಗಳ ಕಾಲ ಬಂದ್ ಮಾಡಲಾಗುತ್ತಿದೆ. ಈ ಸಂಬಂಧ ಆದೇಶ ಹೊರಡಿಸಿರುವಂತ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿಎನ್ ರವೀಂದ್ರ ಅವರು, ನಂದಿ ಗಿರಿಧಾಮದಲ್ಲಿ ರಸ್ತೆ ಡಾಂಬಾರೀಕರಣ ಕಾಮಗಾರಿ ಸೇರಿದಂತೆ ಇತರೆ ನವೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಮಾರ್ಚ್.24ರ ನಾಳೆಯಿಂದ ಏಪ್ರಿಲ್ 25ರವರೆಗೆ ಒಂದು ತಿಂಗಳವರೆಗೆ ಬಂದ್ ಮಾಡಲಾಗುತ್ತಿದೆ ಎಂದಿದ್ದಾರೆ. ಪ್ರವಾಸಿಗರ ಹಿತದೃಷ್ಠಿಯಿಂದ ವೀಕೆಂಡ್ ಶುಕ್ರವಾರ ಸಂಜೆ 6.30ರಿಂದ ಸೋಮವಾರ ಬೆಳಿಗ್ಗೆ 8 ಗಂಟೆಯಿಂದ ಮಾತ್ರವೇ … Continue reading ಪ್ರವಾಸಿಗರ ಗಮನಕ್ಕೆ: ನಾಳೆಯಿಂದ ವಿಶ್ವವಿಖ್ಯಾತ ‘ನಂದಿ ಗಿರಿಧಾಮ’ 1 ತಿಂಗಳು ಬಂದ್ | Nandi Hills