ನವದೆಹಲಿ : ಕ್ರಿಕೆಟ್ ಅಭಿಮಾನಿಗಳು ಐಸಿಸಿ ವಿಶ್ವಕಪ್ 2023ಗಾಗಿ ಕಾತರದಿಂದ ಕಾಯುತ್ತಿದ್ದು, ಸಧ್ಯ ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ. ಈ ಟೂರ್ನಿ ಜಿಂಬಾಬ್ವೆಯಲ್ಲಿ ನಡೆಯಲಿದ್ದು, ಜೂನ್ 18 ರಿಂದ ಜುಲೈ 9 ರವರೆಗೆ ಈ ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಲಿವೆ. ಪ್ರತಿ ಗುಂಪಿಗೆ 5 ತಂಡಗಳನ್ನುನಿಗದಿಪಡಿಸಲಾಗಿದೆ. ಜಿಂಬಾಬ್ವೆ, ವೆಸ್ಟ್ ಇಂಡೀಸ್, ನೆದರ್ಲ್ಯಾಂಡ್ಸ್, ನೇಪಾಳ, ಯುನೈಟೆಡ್ ಸ್ಟೇಟ್ಸ್ ತಂಡಗಳು ಗ್ರೂಪ್-ಎ. ಶ್ರೀಲಂಕಾ, ಐರ್ಲೆಂಡ್, ಸ್ಕಾಟ್ಲೆಂಡ್, ಓಮನ್, ಯುಎಇ ತಂಡಗಳು ಬಿ ಗುಂಪಿನಲ್ಲಿದೆ.
ಕ್ರಿಕೆಟ್ ಅಭಿಮಾನಿಗಳು ಐಸಿಸಿ ವಿಶ್ವಕಪ್ 2023ಗಾಗಿ ಕಾತರದಿಂದ ಕಾಯುತ್ತಿದ್ದು, ಈ ನಿಟ್ಟಿನಲ್ಲಿ ಐಸಿಸಿ ಕ್ವಾಲಿಫೈಯರ್ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ.
ಈ ಟೂರ್ನಿ ಜಿಂಬಾಬ್ವೆಯಲ್ಲಿ ನಡೆಯಲಿದ್ದು, ಜೂನ್ 18 ರಿಂದ ಜುಲೈ 9 ರವರೆಗೆ ಈ ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಲಿವೆ. ಪ್ರತಿ ಗುಂಪಿಗೆ 5 ತಂಡಗಳನ್ನು ನಿಗದಿಪಡಿಸಲಾಗಿದೆ.
ಜಿಂಬಾಬ್ವೆ, ವೆಸ್ಟ್ ಇಂಡೀಸ್, ನೆದರ್ಲ್ಯಾಂಡ್ಸ್, ನೇಪಾಳ, ಯುನೈಟೆಡ್ ಸ್ಟೇಟ್ಸ್ ತಂಡಗಳು ಗ್ರೂಪ್-ಎ. ಶ್ರೀಲಂಕಾ, ಐರ್ಲೆಂಡ್, ಸ್ಕಾಟ್ಲೆಂಡ್, ಓಮನ್, ಯುಎಇ ತಂಡಗಳು ಬಿ ಗುಂಪಿನಲ್ಲಿದೆ.
ಮೊದಲ ಹಂತದಲ್ಲಿ, ಪ್ರತಿ ತಂಡವು ತಮ್ಮ ಗುಂಪಿನ ಇತರ ತಂಡಗಳ ವಿರುದ್ಧ ಒಂದು ಪಂದ್ಯವನ್ನು ಆಡುತ್ತದೆ. ಎರಡೂ ಗುಂಪಿನಲ್ಲಿ ಅಗ್ರ 3 ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಅರ್ಹತೆ ಪಡೆಯುತ್ತವೆ.
ಈ ಹಂತದಲ್ಲಿ ಪ್ರತಿ ತಂಡವು ಗುಂಪು ಹಂತದಲ್ಲಿ ಎದುರಿಸದ ತಂಡಗಳನ್ನ ಎದುರಿಸಲಿದೆ. ಸೂಪರ್ ಸಿಕ್ಸ್ ಹಂತವನ್ನ ತಲುಪಲು ವಿಫಲವಾದ ತಂಡಗಳ ವಿರುದ್ಧ ಗಳಿಸಿದ ಅಂಕಗಳನ್ನ ಹೊರತು ಪಡಿಸಿ, ಗುಂಪು ಹಂತದಲ್ಲಿ ಪ್ರತಿ ತಂಡವು ಗಳಿಸಿದ ಅಂಕಗಳು ಸೂಪರ್ ಸಿಕ್ಸ್ ಹಂತಕ್ಕೆ ಒಯ್ಯಲ್ಪಡುತ್ತವೆ.
ಈ ಹಂತದ ಕೊನೆಯಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಭಾರತದಲ್ಲಿ ನಡೆಯಲಿರುವ ICC ಪುರುಷರ ಕ್ರಿಕೆಟ್ ವಿಶ್ವಕಪ್ 2023ಗೆ ಅರ್ಹತೆ ಪಡೆಯುತ್ತವೆ.
ಏತನ್ಮಧ್ಯೆ, ಭಾರತದಲ್ಲಿ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ ಈಗಾಗಲೇ 8 ತಂಡಗಳು ಅರ್ಹತೆ ಪಡೆದಿವೆ. ಭಾರತ, ನ್ಯೂಜಿಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನೇರವಾಗಿ ವಿಶ್ವಕಪ್ಗೆ ಅರ್ಹತೆ ಪಡೆದಿವೆ. ಆದ್ರೆ, ಈ ಮೆಗಾ ಟೂರ್ನಿಯ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.
2050ರ ವೇಳೆಗೆ 800 ದಶಲಕ್ಷಕ್ಕೂ ಹೆಚ್ಚು ಜನರಿಗೆ ‘ಬೆನ್ನುನೋವು’ ಸಮಸ್ಯೆ ಕಾಡಲಿದೆ : ಶಾಕಿಂಗ್ ವರದಿ