ಬೆಂಗಳೂರು : ಇತ್ತೀಚಿಗೆ ಸಚಿವ ಕೆ ರಾಜಣ್ಣ ಅವರು ಮೂರು ಸಮುದಾಯದವರಿಗೆ ಮುರುಡಿಸಿಎಂ ಹುದ್ದೆ ಸ್ಥಾನ ನೀಡಬೇಕೆಂದು ನೀಡಿರುವ ಹೇಳಿಕೆ ರಾಜ ಕಾಂಗ್ರೆಸ್ ಪಾಳ್ಯದಲ್ಲಿ ಸಂಚಲನ ಮೂಡಿಸಿದ್ದು, ಇದೀಗ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಅವರು ಕೂಡ ಮಹಿಳೆಯರಿಗೂ ಕೂಡ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನವನ್ನು ನೀಡಬೇಕು ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಚಿವರಾದ ಕೆಎನ್ ರಾಜಣ್ಣ ಅವರು ಮೂರು ಡಿಸಿಎಂ ಹುದ್ದೆ ಸ್ಥಾನ ನೀಡಬೇಕೆಂದು ಅವರ ಅಭಿಪ್ರಾಯವನ್ನು ತಿಳಿಸಿದ್ದಾರೆ. ಈ ಕುರಿತಂತೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಈ ಹಿಂದೆ ಮೂವರಿಗೆ ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ಹಾಗಾಗಿ ಅವರು ಹೇಳಿರಬಹುದು. ಇದರಲ್ಲಿ ಮಹಿಳೆಯರಿಗೂ ಕೂಡ ಕಾರ್ಯಧ್ಯಕ್ಷ ಸ್ಥಾನ ಹಾಗೂ ಡಿಸಿಎಂ ಹುದ್ದೆಯನ್ನು ಕೊಡಲಿ ಪಕ್ಷಕ್ಕೆ ದುಡಿದ ಮಹಿಳೆಯರಿಗೆ ಅವಕಾಶ ಸಿಗಲಿ ಎಂದು ಹೇಳಿದರು.
ಮಹಿಳೆಯರ ರಾಜಕೀಯ ಭವಿಷ್ಯ ನಿರ್ಮಾಣ ಮಾಡುವ ವಿಧೇಯಕ ಇದಾಗಿದೆ. ಕೇಂದ್ರ ಸರ್ಕಾರ ಮಂಡನೆ ಮಾಡುತ್ತಿರುವುದನ್ನು ನಾವು ಸ್ವಾಗತ ಮಾಡ್ತೇನೆ.ಮಹಿಳಾ ಮೀಸಲಾತಿ ಬಗ್ಗೆ ದೇಶಾದ್ಯಂತ ಸಾಕಷ್ಟು ಜನ ಮುಖಂಡರು ಒತ್ತಡ ಹಾಕುತ್ತಿದ್ದರು. ರಾಜೀವ್ ಗಾಂಧಿ ಮಹಿಳಾ ಮೀಸಲಾತಿ ಪರವಾಗಿ ಇದ್ದವರು. ಈ ವಿಧೇಯಕವನ್ನು ಜಾರಿಗೆ ತಂದಿರುವುದರಿಂದ ಕಾಂಗ್ರೆಸ್ ನವರಿಗೆ ಬಹಳ ಸಂತೋಷವಾಗಿದೆ ಎಂದರು.