ಕೊಡಗು : ಕಳೆದ 6 ತಿಂಗಳ ಹಿಂದೆ ಮುಂಬೈನಲ್ಲಿ ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನು ಕೊಂದು ಫ್ರಿಡ್ಜ್ ನಲ್ಲಿ ಇಟ್ಟು ನಂತರ ಚೀಲದಲ್ಲಿ ಮೃತ ದೇಹವನ್ನು ಸಾಗಿಸಿ ಕಾಡಲ್ಲಿ ಬೀಸಾಡಿದ್ದ ಘೋರ ಘಟನೆ ನಡೆದಿತ್ತು.ನಂತರ ಅಂತಹ ಪ್ರಕರಣಗಳು ದೇಶದಲ್ಲಿ ಜರುಗಿದ್ದವು. ಇದೀಗ ಕೊಡಗಿನಲ್ಲಿ ಟ್ರಾಲಿ ಬ್ಯಾಗ್ ನಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮಹಿಳೆಯ ಶವವು ಕೊಡಗಿನ ವಿರಾಜಪೇಟೆ ಸಮೀಪದ ಅರಣ್ಯ ಪ್ರದೇಶದಲ್ಲಿ ಟ್ರಾಲಿ ಬ್ಯಾಗ್ (ಪ್ರವಾಸಕ್ಕೆ ತೆಗೆದುಕೊಂಡು ಹೋಗುವ ಬ್ಯಾಗ್) ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಮೃತ ಮಹಿಳೆಯೂ ಸುಮಾರು 25 ರಿಂದ 35 ವರ್ಷದವಳಾಗಿರಬೇಕು ಎಂದು ಪೊಲೀಸರು ಅಂಜದಾಜಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಸುಮಾರು 15 ದಿನಗಳ ಹಿಂದೆ ಕೊಲೆ ಆದಂತಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಡಿಕೇರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಇದು ಕೊಡಗು-ಕೇರಳ ಗಡಿಭಾಗದ ಅರಣ್ಯ ಪ್ರದೇಶವಾಗಿದ್ದು, ಕೇರಳದ ಮಹಿಳೆ ಇರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಎಸ್ಪಿ ಕೆ.ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.