ಬೆಂಗಳೂರು : ರಸ್ತೆ ದಾಟುವಾಗ ಯುವತಿಗೆ ಕಾರ್​ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ಘಟನೆ ನಡೆದಿದೆ. ಘಟನೆ ಇದೇ ತಿಂಗಳ 17 ರಂದು ನಡೆದಿದೆ.
ಅವಘಡದ ಹಿನ್ನಲೆ : ಸೆಪ್ಟಂಬರ್‌ 17 ರಂದು ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ಅಶ್ವಿನಿ ಎನ್ನುವ ಯುವತಿ ಗೆಳತಿ ಜೊತೆಗೆ ಕಾರನ್ನು ಕೂಡ ನೋಡದೇ ರಸ್ತೆಯನ್ನು ದಾಟಲು ಮುಂದಾಗಿದ್ದಾರೆ, ಈ ವೇಳೆ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ಘಟನೆಯ ವಿಡಿಯೋ ಸ್ಥಳೀಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಯುವತಿ ಹಾಗೂ ಕಾರಿನ ನಡುವೆ ಹೇಗೆ ಅವಘಡ ಸಂಭವಿಸಿದ ಎನ್ನುವುದನ್ನು ನೋಡಬಹುದಾಗಿದೆ. ಕಾರ್​ ಡಿಕ್ಕಿಯಾಗಿದ ಪರಿಣಾಮ ಅಶ್ವಿನಿ ರಸ್ತೆಯಲ್ಲಿ ಹಾಕಲಾಗಿದ್ದ ಡಿವೈಡರ್‌ ಮೇಲೆ ಬೀಳುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಇನ್ನೂ ಘಟನೆ ಸಂಬಂಧ ಅಶ್ವಿನಿಯನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು. ಘಟನೆ ಕುರಿತು ಆರ್.ಟಿ.ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share.
Exit mobile version