ಬೆಂಗಳೂರು : ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಚಿವ HD ರೇವಣ್ಣಗೆ ಅಲ್ಲಿನ ಜೈಲಾಧಿಕಾರಿಗಳು ರೇವಣ್ಣ ಅವರಿಗೆ ವಿಚಾರಣಾಧೀನ ಬಂಧಿ ನಂಬರ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಜೈಲಿನಲ್ಲಿ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರ ವಿಚಾರಣಾಧೀನ ಬಂಧಿ ನಂಬರ್ 4567 ಎಂದು ಹೇಳಲಾಗಿತ್ತಿದೆ. ಜೈಲಿಗೆ ಬರುವ ಎಲ್ಲಾ ಆರೋಪಿಗಳಿಗೆ ಎಂಟ್ರಿ ನಂಬರ್ ನೀಡಲಾಗುತ್ತದೆ.ಅದೇ ರೀತಿ ರೇವಣ್ಣಗೆ ವಿಚಾರಣಾ ಬಂದಿ ಸಂಖ್ಯೆಯನ್ನು ಇದೀಗ ಅಧಿಕಾರಿಗಳು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಡಿ ರೇವಣ್ಣ ಅವರು ಬೆಂಗಳೂರಿನ 17ನೇ ಎಸಿ ಎಂ ಎಂ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರು ಇಂದು ಅರ್ಜಿ ವಿಚಾರ ನಡೆಸಿದ ಕೋರ್ಟ್ ಆಮೆ 14 ರವರೆಗೆ ಅಂದರೆ 7 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಿತು ಈ ನೆಲೆಯಲ್ಲಿ ಇದೀಗ ಎಸ್ಐಟಿ ಅಧಿಕಾರಿಗಳು ಅವರನ್ನು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಕರೆತಂದಿದ್ದಾರೆ.

Share.
Exit mobile version