ಸುಭಾಷಿತ :

Monday, February 17 , 2020 5:10 AM

ಚಳಿಗಾಲದಲ್ಲಿ ಹೆಚ್ಚು ಬಿಸಿಯಾದ ನೀರಿನ ಸ್ನಾನ ಬೇಡ


Tuesday, January 14th, 2020 2:56 pm

 

ಸ್ಪೆಷಲ್ ಡೆಸ್ಕ್ : ಚಳಿಗಾಲದಲ್ಲಿ ಎಲ್ಲವೂ ಹೆಚ್ಚು ಹೆಚ್ಚು ಬಿಸಿಯಾಗಿದ್ದರೇನೇ ಉತ್ತಮ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಅದೇ ರೀತಿ ಸ್ನಾನ ಮಾಡಲು ನೀರು ಸಹ ಬಿಸಿಯಾಗಿರಬೇಕು ಅಲ್ವಾ? ಆದರೆ ಹೆಚ್ಚು ಬಿಸಿಯಾದ ನೀರು ಸ್ನಾನ ಮಾಡಿದರೆ ಅದರಿಂದ ಹೆಚ್ಚು ಸಮಸ್ಯೆ ಉಂಟಾಗುತ್ತದೆ. ಇದರಿಂದ ದೇಹದಲ್ಲಿರುವ ಎಣ್ಣೆಯ ಅಂಶ ನಷ್ಟವಾಗುತ್ತದೆ. ದೇಹ ಶುಷ್ಕವಾಗುತ್ತದೆ.

ಹಾಗಿದ್ರೆ ಬನ್ನಿ ಚಳಿಗಾಲದಲ್ಲಿ ಇಂತಹ ನೀರು ಸ್ನಾನಕ್ಕೆ ಯೋಗ್ಯ ನೋಡೋಣಾ…

ಸ್ನಾನ ಮಾಡಲು ತುಂಬಾ ಬಿಸಿಯಾದ ನೀರು ಬೇಡ, ಯಾವಾಗಲೂ ಉಗುರು ಬಿಸಿ ನೀರಿನಲ್ಲಿ ಸ್ನಾನ ಮಾಡಿ.
ಬಿಸಿ ನೀರಿನಲ್ಲಿ ಸ್ನಾನ ಮಾಡುವುದಾದರೆ ಒಂದು ವಿಷಯದ ಬಗ್ಗೆ ಗಮನ ಇರಲಿ, ಆ ನೀರು ಅತಿ ಹೆಚ್ಚು ಬಿಸಿ ಬೇಡ. ಇದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. .
ಸ್ನಾನ ಮಾಡಲು ಎಣ್ಣೆಯಂಶ ಹೊಂದಿರುವ ನೀರನ್ನು ಬಳಕೆ ಮಾಡಿ.
ಸ್ನಾನ ಮಾಡುವ ಮುನ್ನ ನ್ಯಾಚುರಲ್‌ ಆಯಿಲ್‌ ಬಳಕೆ ಮಾಡಿ. ಸ್ನಾನಕ್ಕೂ ಮುನ್ನ ಪೂರ್ತಿ ದೇಹಕ್ಕೆ ಎಣ್ಣೆಯಿಂದ ಮಸಾಜ್‌ ಮಾಡಿ. ನಂತರ ಸ್ನಾನ ಮಾಡಿ.
ಒಣಗಿದ ಬ್ರಶ್‌ನ್ನು ಸ್ನಾನ ಮಾಡಲು ಬಳಕೆ ಮಾಡಬೇಡಿ. ಇದರಿಂದ ತ್ವಚೆಯ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ.
ಸ್ನಾನದ ನೀರಿಗೆ ಸ್ವಲ್ಪ ಹಾಲು ಬೆರೆಸಿ ಸ್ನಾನ ಮಾಡಿ, ಇದರಿಂದ ಮಾಯಿಶ್ಚರೈಸರ್ ಹಾಗೆ ಉಳಿದುಕೊಳ್ಳುತ್ತದೆ.
ಚಳಿಗಾಲದಲ್ಲಿ ತಲೆಗೆ ಬಿಸಿ ನೀರು ಹಾಕಲೇಬೇಡಿ. ಇದರಿಂದ ಕೂದಲು ಬೇಗನೆ ಡ್ರೈ ಆಗಿ, ತಲೇ ಹೊಟ್ಟು, ಕೂದಲು ಉದುರುವಿಕೆ ಕಾಣಿಸಿಕೊಳ್ಳುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions