ಸುಭಾಷಿತ :

Monday, February 24 , 2020 10:12 PM

‘ಕಂಪ್ಯೂಟರ್’ಬಳಕೆದಾರರೇ ಶಾಕಿಂಗ್ ನ್ಯೂಸ್ : ‘ವಿಂಡೋಸ್ 7’ಗೆ ಜನವರಿಯಲ್ಲಿ ಗುಡ್ ಬೈ


Tuesday, November 26th, 2019 1:00 pm

ಸ್ಪೆಷಲ್ ಡೆಸ್ಕ್ : 2009ರಲ್ಲಿ ಮೈಕ್ರೋಸಾಫ್ಟ್ ಕಂಪನಿ ವಿಂಡೋಸ್ 7 ಬಿಡುಗಡೆಗೊಳಿಸಿತ್ತು. ಇಂತಹ ವಿಂಡೋಸ್ 7, ಕಂಪ್ಯೂಟರ್ ಬಳಕೆದಾರರ ಮೆಚ್ಚಿನ ಓಎಸ್ ಕೂಡ ಆಗಿತ್ತು. ಆದ್ರೇ ಇಂತಹ ವಿಂಡೋಸ್ 7 ಓಎಸ್ ಅನ್ನು ಇದೀಗ ಮೈಕ್ರೋಸಾಫ್ಟ್ ಕಂಪನಿ 2020ರ ಜನವರಿ 14ರಿಂದ ಸ್ಥಗಿತಗೊಳಿಸಲಿದೆ. ಈ ಮೂಲಕ ಕಂಪ್ಯೂಟರ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ನೀಡಿದೆ.

ಭಾರತದ ಶೇ.41ರಷ್ಟು ಜನರು ಬಳಸುತ್ತಿರುವ ಬಹು ಬೇಡಿಕೆಯ ಓಎಸ್ ಅಂದ್ರೇ, ಅದು ವಿಂಡೋಸ್ 7. ಆದ್ರೇ ಇಂತಹ ವಿಂಡೋಸ್ 7ಗೆ ಇದೀಗ ಸೈಬರ್ ಸೆಕ್ಯೂರಿಟಿ ಸಮಸ್ಯೆ ಎದುರಾಗಿದೆ. ಇದೇ ಕಾರಣದಿಂದಾಗಿ ಕಂಪ್ಯೂಟರ್ ಬಳಕೆದಾರರ ಹಿತದೃಷ್ಠಿಯಿಂದ ವಿಂಡೋಸ್ 7 ಅಪರೇಟಿಂಗ್ ಸಿಸ್ಟಮ್ ಮೇಲಿನ ತನ್ನ ಸಂಪೂರ್ಣ ಸಪೋರ್ಟ್ ಅನ್ನು ಮೈಕ್ರೋಸಾಫ್ಟ್ ಸ್ಧಗಿತಗೊಳಿಸಲಿದೆ.

ಈ ಹಿನ್ನಲಯಲ್ಲಿ ವಿಂಡೋಸ್ 7 ಆಪರೇಟಿಂಗ್ ಸಿಸ್ಟಮ್ ಬಳಕೆದಾರರು ಉಚಿತವಾಗಿ ವಿಂಡೋಸ್ 10ಗೆ ಬದಲಾಯಿಸಿಕೊಳ್ಳಬಹುದಾಗಿದೆ. ಪೈರಸಿ ವಿಂಡೋಸ್ 7 ಬಳಕೆದಾರರಿಗೆ 2020ರ ಜನವರಿ 14ರ ನಂತ್ರ ವಿಂಡೋಸ್ 7 ಆಪರೇಟಿಂಗ್ ಸಿಸ್ಟಮ್ ಬಳಕೆ ಕಷ್ಟವಾಗಬಹುದು. ಜೊತೆಗೆ ನಿಮ್ಮ ಕಂಪ್ಯೂಟರ್ ನಲ್ಲಿರುವ ಫೈಲ್, ಪೋಟೋ ಸೇರಿದಂತೆ ಇತರೆ ದಾಖಲೆಗಳನ್ನು ಹಾರ್ಡ್ ಡಿಸ್ಕ್ ನಲ್ಲಿ ಸೇವ್ ಮಾಡಿಕೊಳ್ಳುವುದು ಒಳಿತು. ಇಲ್ಲವಾದಲ್ಲಿ ನಿಮ್ಮ ವಿಂಡೋಸ್ 7 ಓಎಸ್ ಯಾವಾಗ ಬೇಕಾದರೂ ಕೈ ಕೊಡಬಹುದು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions