ಬೆಂಗಳೂರು: ಮೊದಲು ಬೋರ್ಡ್, ನಂತರ ಪ್ರಮಾಣ! ಭ್ರಷ್ಟಾಚಾರ ತಡೆಯುವ ಪ್ರಾಮಾಣಿಕತೆ ಇಲ್ಲದ ಸಿಎಂ ಪ್ರಮಾಣ ಮಾಡಿದರೆ ಫಲ ಉಂಟೇ? ಪ್ರಮಾಣದಲ್ಲಿ ಪ್ರಾಮಾಣಿಕತೆ ಇದ್ದರೆ 40% ಕಮಿಷನ್ ಹಗರಣವನ್ನ, ಸಂತೋಷ್ ಪಾಟೀಲ್ ಪ್ರಕರಣವನ್ನ, PSI ಸೇರಿದಂತೆ ಎಲ್ಲಾ ನೇಮಕಾತಿ ಅಕ್ರಮಗಳನ್ನ ( PSI Recruitment Scam ) ನ್ಯಾಯಾಂಗ ತನಿಖೆಗೆ ನೀಡಲಿ. ಇಲ್ಲವಾದಲ್ಲಿ ಇಂತಹ ಬೂಟಾಟಿಕೆಯ ನಾಟಕಗಳನ್ನು ಬಿಡಲಿ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಕಿಡಿಕಾರಿದೆ.

ಈ ಬಗ್ಗೆ ಟ್ವಿಟ್ ಮಾಡಿದ್ದು, ಸರ್ಕಾರಿ ಕಚೇರಿಗಳಲ್ಲಿ ಬೋರ್ಡ್ ಹಾಕುವುದಾಯ್ತು, ಈಗ ಪ್ರಮಾಣವಚನದ ನಾಟಕ! ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಮಾತಿಗೂ ಕೃತಿಗೂ ಸಂಬಂಧವಿದೆಯೇ? PSI ಅಕ್ರಮದ ಬಸವರಾಜ್ ದಡೇಸಾಗುರರನ್ನು ತನಿಖೆ ಮಾಡದೆ, 40% ಕಮಿಷನ್ ಆರೋಪವನ್ನು ನ್ಯಾಯಾಂಗ ತನಿಖೆಗೊಪ್ಪಿಸದೆ ಭ್ರಷ್ಟಾಚಾರ ಬೆಂಬಲಿಸುವುದಿಲ್ಲ ಎಂಬ ನಿಮ್ಮ ಪ್ರಮಾಣಕ್ಕೆ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದೆ.

ಕುಸಿದ ಕಾನೂನು ಸುವ್ಯವಸ್ಥೆ. ರಸ್ತೆ ಗುಂಡಿಗಳು. ಮಳೆ ಅವಾಂತರಕ್ಕೆ ಪರಿಹಾರವಿಲ್ಲ. ಕಸ ವಿಲೇವಾರಿ ಸಮಸ್ಯೆ. ವೃದ್ಧಿಸದ ಮೂಲ ಸೌಕರ್ಯ ವ್ಯವಸ್ಥೆ. ಕಳೆಗುಂದಿದ ಬ್ರಾಂಡ್ ಬೆಂಗಳೂರು. ಹಲವು ಉದ್ಯಮಗಳ ನಿರ್ಗಮನ #40percentsarkara ದಲ್ಲಿ ಇಷ್ಟೆಲ್ಲಾ ಆಗಿರುವಾಗ ಹೂಡಿಕೆದಾರರಿಗೆ ಯಾವ ಭರವಸೆ ಮೂಡಲು ಸಾಧ್ಯ? ಎಂದು ಕೇಳಿದೆ.

Share.
Exit mobile version