BREAKING: ಕೆಲಸಕ್ಕೆ ಹೋಗಬೇಡ ಎಂದಿದ್ದಕ್ಕೆ ಪತ್ನಿ ಆತ್ಮಹತ್ಯೆಗೆ ಯತ್ನ

ಚಾಮರಾಜನಗರ: ಕೆಲಸಕ್ಕೆ ಹೋಗಬೇಡ ಎಂಬುದಾಗಿ ಹೇಳಿದಂತ ಪತಿಯ ಮಾತಿನಿಂದ ಮನನೊಂದು ಪತ್ನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದಂತ ಘಟನೆ ಕುಂತೂರಿನಲ್ಲಿ ನಡೆದಿದೆ. ಚಾಮರಾಜನಗರದ ಕುಂತೂರಿನಲ್ಲಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಬೇಡ ಎಂಬುದಾಗಿ ಪತ್ನಿ ಸುಧಾಗೆ ಪತಿ ತಿಳಿಸಿದ್ದಾರೆ. ಇದೇ ವಿಚಾರವಾಗಿ ಗಂಡ ಹೆಂಡತಿ ಮಧ್ಯೆ ಜಗಳವಾಗಿದೆ. ಜಗಳ ತಾರಕಕ್ಕೇರಿದಂತ ಸಂದರ್ಭದಲ್ಲಿ ಪತ್ನಿ ಸುಧಾ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. BIG NEWS : ಡೀಸೆಲ್ … Continue reading BREAKING: ಕೆಲಸಕ್ಕೆ ಹೋಗಬೇಡ ಎಂದಿದ್ದಕ್ಕೆ ಪತ್ನಿ ಆತ್ಮಹತ್ಯೆಗೆ ಯತ್ನ