ಕೇರಳ: ಭಾರತದಲ್ಲಿ ಜನಿಸಿದ ಪ್ರತಿಯೊಬ್ಬರನ್ನು ಹಿಂದೂ ಎಂದು ಕರೆಯಬೇಕು ಮತ್ತು ನನ್ನನ್ನೂ ಹಿಂದೂ ಎಂದು ಕರೆಯಬೇಕು ಎಂದು ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಶನಿವಾರ ಹೇಳಿದ್ದಾರೆ.
ತಿರುವನಂತಪುರದಲ್ಲಿ ಉತ್ತರ ಅಮೆರಿಕದ ಕೇರಳ ಹಿಂದೂಗಳು ಆಯೋಜಿಸಿದ್ದ ಹಿಂದೂ ಸಮಾವೇಶದಲ್ಲಿ ಆರಿಫ್ ಖಾನ್, ʻನೀವು ನನ್ನನ್ನು ಕಡ್ಡಾಯವಾಗಿ ಹಿಂದೂ ಎಂದು ಕರೆಯಬೇಕುʼಈ ಹಿಂದೆ ಸೈಯದ್ ಅಹ್ಮದ್ ಖಾನ್ ಹೇಳಿದ್ದರು ಎಂದು ಅವರ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ.
ʻನನ್ನ ಗಂಭೀರ ದೂರು ಇರುವುದು ನಿಮ್ಮ ಮೇಲೆ (ಆರ್ಯ ಸಮಾಜದ ಸದಸ್ಯರು). ಏಕೆ ನೀವು ನನ್ನನ್ನು ಹಿಂದೂ ಎಂದು ಕರೆಯುತ್ತಿಲ್ಲ? ನಾನು ಹಿಂದೂ ಎನ್ನುವುದು ಧಾರ್ಮಿಕ ಪದವೆಂದು ಪರಿಗಣಿಸುವುದಿಲ್ಲ. ಹಿಂದೂ ಎಂಬುದು ಭೌಗೋಳಿಕ ಪದವಾಗಿದೆ. ಭಾರತದಲ್ಲಿ ಜನಿಸಿದ, ಭಾರತದಲ್ಲಿ ಬೆಳೆದ ಆಹಾರವನ್ನು ತಿನ್ನುವ ಅಥವಾ ಭಾರತೀಯ ನದಿಗಳ ನೀರನ್ನು ಕುಡಿಯುವವನು ತನ್ನನ್ನು ತಾನು ಹಿಂದೂ ಎಂದು ಕರೆಯಲು ಅರ್ಹನಾಗಿರುತ್ತಾನೆ. ಆದ್ದರಿಂದ “ನೀವು ನನ್ನನ್ನು ಹಿಂದೂ ಎಂದು ಕರೆಯಬೇಕು” ಎಂದಿದ್ದಾರೆ.
BIG NEWS : ʻಜೀನ್ಸ್ ಪ್ಯಾಂಟ್ʼ ಧರಿಸಿ ವಿಚಾರಣೆಗೆ ಬಂದಿದ್ದ ವಕೀಲನನ್ನು ಹೊರ ಕಳುಹಿಸಿದ ನ್ಯಾಯಾಧೀಶರು!
BIG NEWS : ʻಜೀನ್ಸ್ ಪ್ಯಾಂಟ್ʼ ಧರಿಸಿ ವಿಚಾರಣೆಗೆ ಬಂದಿದ್ದ ವಕೀಲನನ್ನು ಹೊರ ಕಳುಹಿಸಿದ ನ್ಯಾಯಾಧೀಶರು!