
ʼಮುದ್ರಾ ಯೋಜನೆʼಯಡಿ ಯಾರು? ಹೇಗೆ? ಎಷ್ಟು ಸಾಲ ಪಡೆಯ್ಬೋದು ಗೊತ್ತಾ? ಇಲ್ಲಿದೆ ಮಾಹಿತಿ..!
ಡಿಜಿಟಲ್ ಡೆಸ್ಕ್: ಪ್ರತಿಯೊಬ್ರಿಗೂ ತಮ್ಮದೇ ಆದಾ ಸ್ವಂತ ಬ್ಯುಸಿನೆಸ್ ಪ್ರಾರಂಭಿಸ್ಬೇಕು ಅನ್ನೋ ಆಸೆಯಿರುತ್ತೆ. ಯಾಕಂದ್ರೆ, ಅದರಲ್ಲಿ ಹೂಡಿಕೆ ಮಾಡೋದಲ್ದೇ ಬರುವ ಲಾಭವನ್ನೂ ಅವ್ರೇ ಪಡೆಯಬಹುದು. ಆದ್ರೆ, ಬ್ಯುಸಿನೆಸ್ ಶುರು ಮಾಡೋದಕ್ಕೆ ಮುಖ್ಯವಾಗಿ ಬೇಕಿರೋದು ಹಣ. ಇದನ್ನ ಹೊಂದಿಸೋದೇ ಸಮಸ್ಯೆಯಾಗುತ್ತೆ. ಇನ್ನು ಬಹಳಷ್ಟು ಜನರು ಈ ಹಣದ ಸಮಸ್ಯೆಯಿಂದ ತಮ್ಮ ಕೆಲಸವನ್ನ ಪ್ರಾರಂಭಿಸೋದೆ ಇಲ್ಲ. ಆದ್ರೆ, ಅಂತಹ ಜನರಿಗೆ ಅಂತಾನೇ ಸರ್ಕಾರ ಮುದ್ರಾ ಯೋಜನೆಯನ್ನ ಪ್ರಾರಂಭಿಸಿದೆ. ಇದರ ಅಡಿಯಲ್ಲಿ ಯಾರು ಬೇಕಾದ್ರೂ ತಮ್ಮ ಸ್ವಂತ ಬ್ಯುಸಿನೆಸ್ ಶುರು ಮಾಡ್ಬೋದು. ಹಾಗಾದ್ರೆ, ಆ ಯೋಜನೆಯಡಿ ಹೇಗೆ ಸಾಲ ಪಡೆಯಬೋದು ಅನ್ನೊದನ್ನ ತಿಳಿಯೋಣಾ ಬನ್ನಿ.
ಪ್ರಧಾನ ಮಂತ್ರಿ ಮುದ್ರಾ ಯೋಜನೆ..!
ಸಣ್ಣ ಉದ್ದಿಮೆದಾರರಿಗೆ ಮತ್ತು ಉದ್ಯಮಗಳಿಗೆ ಆರ್ಥಿಕ ನೆರವು ನೀಡಲು ಸರ್ಕಾರ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯನ್ನ 2015ರ ಏಪ್ರಿಲ್ʼನಲ್ಲಿ ಆರಂಭಿಸಲಾಯಿತು. ಈ ಯೋಜನೆಯಡಿ ಜನರಿಗೆ ಸಣ್ಣ ಪುಟ್ಟ ಉದ್ಯಮ ಶುರು ಮಾಡಲು ಸಾಲ ಕೊಡುವ ಮೂಲಕ ಉತ್ತೇಜನೆ ನೀಡುತ್ತೆ.
ಈ ಪಿಎಂಎಂಡಿಯಡಿ ಎಷ್ಟು ಸಾಲ ಪಡೆಯಬಹುದು..?
ಈ ಯೋಜನೆಯಡಿ ಗರಿಷ್ಠ 10 ಲಕ್ಷ ರೂ.ವರೆಗೆ ಸಾಲ ಪಡೆಯಬಹುದು. ನೀವು ಸ್ವಂತ ಉದ್ಯಮವನ್ನ ಪ್ರಾರಂಭಿಸಲು ಬಯಸಿದರೆ ಅಥವಾ ನಿಮ್ಮ ಅಸ್ತಿತ್ವದಲ್ಲಿರುವ ಉದ್ಯಮವನ್ನ ವಿಸ್ತರಿಸಲು ಬಯಸಿದರೆ, ನೀವು 10 ಲಕ್ಷ ರೂಪಾಯಿಗಳವರೆಗೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
ಉತ್ತರಾಖಂಡ್ ಹಿಮನದಿ ದುರಂತ: ನಾಪತ್ತೆಯಾದ 136 ಮಂದಿಯೂ ಮೃತಪಟ್ಟಿದ್ದಾರೆ- ಅಧಿಕಾರಗಳಿಂದ ಸ್ಪಷ್ಟನೆ..!
PMMY ಸಾಲದ ವಿಧ..!
ತರುಣ್ ಸಾಲ: ತರುಣ್ ಸಾಲದಲ್ಲಿ 5 ಲಕ್ಷದಿಂದ 10 ಲಕ್ಷದವರೆಗೆ ಸಾಲ ನೀಡಲಾಗುತ್ತದೆ.
ಶಿಶು ಸಾಲಗಳು: ಶಿಶು ಸಾಲಗಳ ಅಡಿಯಲ್ಲಿ 50,000 ರೂ.ವರೆಗಿನ ಸಾಲಗಳನ್ನ ನೀಡಲಾಗುತ್ತದೆ.
ಕಿಶೋರಿಗೆ ಸಾಲ: ಇದರಅಡಿಯಲ್ಲಿ 50 ಸಾವಿರದಿಂದ 5 ಲಕ್ಷದವರೆಗೆ ಸಾಲ ನೀಡಲಾಗುತ್ತದೆ.
ಪಿಎಂಎಂಡಿಯಲ್ಲಿ ಸಾಲದ ಮೇಲೆ ಎಷ್ಟು ಬಡ್ಡಿಯನ್ನ ಪಾವತಿಸಲಾಗುತ್ತದೆ.
ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ನಿಶ್ಚಿತ ಬಡ್ಡಿ ದರ ಇಲ್ಲ. ಮುದ್ರಾ ಸಾಲಕ್ಕೆ ವಿವಿಧ ಬ್ಯಾಂಕ್ʼಗಳು ವಿವಿಧ ಬಡ್ಡಿ ದರವಿಧಿಸುತ್ತದೆ. ಬಡ್ಡಿ ದರವು ಸಾಲಗಾರನ ವ್ಯವಹಾರದ ಸ್ವರೂಪ ಮತ್ತು ಅದರಲ್ಲಿ ಒಳಗೊಂಡಿರುವ ಅಪಾಯವನ್ನ ಅವಲಂಬಿಸಿರುತ್ತೆ.
ಸಾಮಾನ್ಯವಾಗಿ ಮುದ್ರಾ ಸಾಲದ ಮೇಲಿನ ಕನಿಷ್ಠ ಬಡ್ಡಿ ದರ ವರ್ಷಕ್ಕೆ ಶೇ.10ರಿಂದ 12ರಷ್ಟು ಇರುತ್ತದೆ. ಮುದ್ರಾ ಯೋಜನೆಯಡಿ ಖಾತರಿ ಇಲ್ಲದೆ ಸಾಲ ನೀಡಲಾಗುತ್ತಿದೆ. ಇದನ್ನ ಹೊರತುಪಡಿಸಿ, ಸಾಲಕ್ಕೆ ಯಾವುದೇ ಸಂಸ್ಕರಣಾ ಶುಲ್ಕವನ್ನೂ ವಿಧಿಸಲಾಗುವುದಿಲ್ಲ. ಮುದ್ರಾ ಯೋಜನೆಯಡಿ ಮರುಪಾವತಿ ಅವಧಿಯನ್ನ 5 ವರ್ಷಗಳವರೆಗೆ ವಿಸ್ತರಿಸಬಹುದು. ಸಾಲಗಾರನಿಗೆ ಕರೆನ್ಸಿ ಕಾರ್ಡ್ ಸಿಗುತ್ತೆ. ಅದರ ಸಹಾಯದಿಂದ ವ್ಯಾಪಾರದ ಅಗತ್ಯವನ್ನ ಖರ್ಚು ಮಾಡಬಹುದು.
ಮುದ್ರಾ ಸಾಲ ಯಾರು ತೆಗೆದುಕೊಳ್ಳಬಹುದು..?
ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಬಯಸುವ ಅಥವಾ ಅಸ್ತಿತ್ವದಲ್ಲಿರುವ ಉದ್ಯಮವನ್ನ ಬೆಳೆಸಲು ಬಯಸುವ ಯಾರು ಬೇಕಶದ್ರು ಪಿಎಂಎಂಡಿಯಲ್ಲಿ ಸಾಲ ಪಡೆಯಬಹುದು.
ಆಗಸದಲ್ಲೇ ಹೊತ್ತಿ ಉರಿದ ಏರ್ ಲೈನ್ಸ್ ಎಂಜಿನ್- ವಿಮಾನಲ್ಲಿ ಇದ್ದವರು ಬದುಕಿದ್ದು ಹೇಗೆ ಗೊತ್ತಾ? ಮೈ ಜುಮ್ಮೆನ್ನಿಸುವ ಈ ವಿಡಿಯೋ ನೋಡಿ
ಪಿಎಂಎಂಡಿಯಲ್ಲಿ ಹೇಗೆ ಸಾಲ ಪಡೆಯಬಹುದು..!
PMMY ಅಡಿಯಲ್ಲಿ ಸಾಲ ಪಡೆಯಲು, ನೀವು ಸರ್ಕಾರಿ ಬ್ಯಾಂಕ್ ಅಥವಾ ಬ್ಯಾಂಕ್ ಶಾಖೆಗೆ ಅರ್ಜಿ ಸಲ್ಲಿಸಬೇಕು. ಸ್ವಂತ ಉದ್ಯಮವನ್ನು ಆರಂಭಿಸಲು ನೀವು ಬಯಸಿದರೆ, ಮನೆ ಅಥವಾ ಬಾಡಿಗೆ ದಾಖಲೆಗಳು, ಕೆಲಸಕ್ಕೆ ಸಂಬಂಧಿಸಿದ ಮಾಹಿತಿ, ಆಧಾರ್ ಮತ್ತು ಪ್ಯಾನ್ ಕಾರ್ಡ್ ಸೇರಿದಂತೆ ಮನೆಯ ಮಾಲೀಕತ್ವ ಅಥವಾ ಇತರ ದಾಖಲೆಗಳ ಬಗ್ಗೆ ಮಾಹಿತಿ ನೀಡಬೇಕು. PMMY ಬಗ್ಗೆ ಇನ್ನಷ್ಟು ತಿಳಿಯಲು ನೀವು http://www.mudra.org.in/ ಭೇಟಿ ನೀಡಬಹುದು .
ಅಧಿಕೃತ ವೆಬ್ಸೈಟ್ʼನಿಂದ ಆನ್ಲೈನ್ ಫಾರ್ಮ್ʼನ್ನ ತೆಗೆದುಕೊಂಡ ನಂತ್ರ ನೀವು ಈ ನಮೂನೆಯನ್ನ ಭರ್ತಿ ಮಾಡಬೇಕು.
ನಂತರ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಬ್ಯಾಂಕ್ʼಗೆ ಹೋಗಿ ಠೇವಣಿ ಇಡಬೇಕಾಗುತ್ತದೆ. ಈ ಸಮಯದಲ್ಲಿ ನೀವು ಎಲ್ಲಾ ಅಗತ್ಯ ಕಾಗದಪತ್ರಗಳನ್ನ ಸಲ್ಲಿಸಬೇಕು. ಪರಿಶೀಲನೆಯ ನಂತರ, ನಿಮ್ಮ ಸಾಲವನ್ನ ನಿಗದಿತ ಸಮಯದಲ್ಲಿ ನೀಡಲಾಗುತ್ತೆ.
ಅರ್ಜಿ ಹಾಕಿದ ನಂತರ ಬ್ಯಾಂಕಿನ ಶಾಖಾ ವ್ಯವಸ್ಥಾಪಕರು ನಿಮ್ಮ ಕೆಲಸದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಾರೆ. ಅದರ ಆಧಾರದ ಮೇಲೆ PMMY ಸಾಲವನ್ನ ಅನುಮೋದಿಸುತ್ತೆ. ಕೆಲಸದ ಸ್ವರೂಪವನ್ನ ಅವಲಂಬಿಸಿ, ಬ್ಯಾಂಕ್ ಮ್ಯಾನೇಜರ್ ನಿಮಗೆ ಪ್ರಾಜೆಕ್ಟ್ ರಿಪೋರ್ಟ್ ಮಾಡುವಂತೆ ಕೇಳಬಹುದು.
ಸಾಲಕ್ಕೆ ತೆಗೆದುಕೊಳ್ಳಲು ಬೇಕಿರುವ ಅಗತ್ಯ ದಾಖಲೆಗಳು..!
* ಅರ್ಜಿ ನಮೂನೆ
* 2 ಪಾಸ್ ಪೋರ್ಟ್ ಗಾತ್ರದ ಫೋಟೋಗಳು
* ಗುರುತಿನ ಪುರಾವೆ
* ಪಾಸ್ ಪೋರ್ಟ್
* ವೋಟರ್ ಐಡಿ ಮತ್ತು 1000 ರೂ.
* ಪ್ಯಾನ್ ಕಾರ್ಡ್
* ಆಧಾರ್ ಕಾರ್ಡ್
ಬ್ರೇಕಿಂಗ್: ಗುಜರಾತ್ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿಗೆ ʼಬಿಗ್ ಲೀಡ್ʼ