ಕೆಎನ್‌ಎನ್‌ಸಿನಿಮಮಾಡೆಸ್ಕ್: ಟ್ರೇಲರ್ ನಿಂದಲೇ ಸದ್ದು ಮಾಡಿದ್ದ ವೀಲ್ ಚೇರ್ ರೋಮಿಯೋ 27ಕ್ಕೆ ಥಿಯೇಟರ್ ನಲ್ಲಿ ಕೆಲವೊಂದು ಸಿನಿಮಾಗಳು ತುದಿಗಾಲಿನಲ್ಲಿ ನಿಂತು ಕಾಯುವಂತೆ ಮಾಡಿಬಿಡುತ್ತದೆ. ಅದೇ ರೀತಿಯ ಮನಸ್ಥಿತಿ ಕ್ರಿಯೇಟ್ ಮಾಡಿರುವುದು ವೀಲ್ ಚೇರ್ ರೋಮಿಯೋ ಸಿನಿಮಾ.
ಇದೇ ತಿಂಗಳ 27ಕ್ಕೆ ತೆರೆಗೆ ಬರುತ್ತಿದೆ. ಕಾತುರ ಕೂಡ ಅಷ್ಟೇ ಹೆಚ್ಚಾಗಿದೆ. ಒಂದು ಸಿನಿಮಾಗೆ ಟ್ರೇಲರ್ ಮತ್ತು ಹಾಡುಗಳು ಥಿಯೇಟರ್ ಗೆ ಆಹ್ವಾನವಿದ್ದಂತೆ. ಟ್ರೇಲರ್ ನಲ್ಲಿಯೆ ಸಿನಿಮಾ ಹೇಗಿರಲಿದೆ ಎಂದು ಪ್ರೇಕ್ಷಕರು ಅಳೆಯುತ್ತಾರೆ. ಆ ವಿಚಾರದಲ್ಲಿ ವೀಲ್ ಚೇರ್ ರೋಮಿಯೋ ಮೊದಲೇ ಗೆದ್ದಿದೆ. ಟ್ರೇಲರ್ ನೋಡಿದವರಿಗೆ ಒಂದಷ್ಟು ನಗು ಸಿಕ್ಕಿದೆ, ಸೀರಿಯಸ್ ಕಥೆ ಅರ್ಥವಾಗಿದೆ. ಅಪ್ಪ ಮಗನ ಎಮೋಷನ್ಸ್ ಕಂಡಿದೆ. ಈ ಎಲ್ಲಾ ಅಂಶ ಈಗಾಗಲೆರ ಸಿನಿಮಾವನ್ನು ನೋಡುವ ಕ್ಯೂರಿಯಾಸಿಟಿ ಹುಟ್ಟಿಸಿದೆ. ಅಷ್ಟೇ ಅಲ್ಲ ಹಾಡುಗಳು ಕೂಎ ಮನಸ್ಸಿನಲ್ಲಿ ಗುನುಗುವಂತೆ ಮಾಡಿದೆ. ಹೀಗಾಗಿ ಡಿಫ್ರೆಂಟ್ ಕಥೆಯನ್ನು ಮನಸ್ಸಿನಲ್ಲಿ ತುಂಬಿಕೊಳ್ಳಲು ಜನರ ಕಾತುರ ಹೆಚ್ಚಾಗಿದೆ.
ಈ ಸಿನಿಮಾಗೆ ಹಲವು ವರ್ಷಗಳ ಕಾಲ, ಸಿನಿಮಾದ ಹಲವು ಕ್ಷೇತ್ರದಲ್ಲಿ ಪಳಗಿರುವ ನಟರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಿರುತೆರೆಯಲ್ಲಿ ತನ್ನದೇ ಖ್ಯಾತಿ ಗಳಿಸಿರುವ ರಾಮ್ ಚೇತನ್ ನಾಯಕನಾಗಿ ನಟಿಸಿದ್ದು, ಮಯೂರಿ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ಬಿ.ಜೆ.ಭರತ್ ಸಂಗೀತ ನಿರ್ದೇಶನದಲ್ಲಿ ಹಾಡು ಹಾಗೂ ಹಿನ್ನೆಲೆ ಸಂಗೀತ ಮೂಡಿ ಬಂದಿದ್ದು, ಗುರುಕಶ್ಯಪ್ ಸಂಭಾಷಣೆ, ಸಂತೋಷ್ ಪಾಂಡಿ ಕ್ಯಾಮೆರಾ ವರ್ಕ್, ವಿ ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ ಸಾಹಿತ್ಯ ಕೃಷಿ ಚಿತ್ರಕ್ಕಿದೆ. ಸುಚೇಂದ್ರಪ್ರಸಾದ್, ತಬಲ ನಾಣಿ, ರಂಗಾಯಣ ರಘು ಚಿತ್ರ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಅಗಸ್ತ್ಯ ಕ್ರಿಯೇಷನ್ಸ್ ಬ್ಯಾನರ್ ನಡಿ
ವೆಂಕಟಾಚಲಯ್ಯ ಚಿತ್ರಕ್ಕೆ ಬಂಡವಾಳ ಹೂಡಿ ಚಿತ್ರ ನಿರ್ಮಾಣ ಮಾಡಿದ್ದಾರೆ.