ಸುಭಾಷಿತ :

Wednesday, January 22 , 2020 12:09 PM

ಗೋಧಿ ಹಿಟ್ಟಿನ ಫೇಸ್ ಸ್ಕ್ರಬ್ ಮಾಡಿ ಸುಂದರ ತ್ವಚೆ ಮಾಡಿ…


Friday, November 8th, 2019 12:46 pm

ಸ್ಪೆಷಲ್ ಡೆಸ್ಕ್ : ಗೋಧಿ ಹಿಟ್ಟಿನಿಂದ ಚಪಾತಿ, ಪೂರಿ ಮಾಡಿ ತಿನ್ನೋದು ಮಾತ್ರ ಅಲ್ಲಾ, ಇದು ತ್ವಚೆಯ ಅಂದ ಹೆಚ್ಚಿಸಲು ಸಹಕಾರಿಯಾಗುತ್ತದೆ. ಹೇಗೆ ಅನ್ನೋದನ್ನು ನಾವು ನಿಮಗೆ ತಿಳಿಸುತ್ತೇವೆ.

ಕ್ಲಿಯರ್‌ ಸ್ಕಿನ್‌ : ಗೋಧಿ ಹಿಟ್ಟನ್ನು ನೀರಿನ ಜೊತೆ ಮಿಕ್ಸ್‌ ಮಾಡಿ ಪೇಸ್ಟ್‌‌ ಮಾಡಿ, ಅದನ್ನು ಮುಖಕ್ಕೆ ಹಚ್ಚಿ ಸ್ಕ್ರಬ್‌ ಮಾಡಿ. ಒಣಗಿದ ನಂತರ ತೊಳೆಯಿರಿ. ಇದು ಸ್ಕಿನ್‌ನ್ನು ಆಳವಾಗಿ ಸ್ವಚ್ಛ ಮಾಡಿ ಡೆಡ್‌ ಸೆಲ್ಸ್‌ ನಿವಾರಣೆ ಮಾಡುತ್ತದೆ.

ಟ್ಯಾನಿಂಗ್‌ : 2 ಚಮಚ ಜೇನು, 3 ಚಮಚ ಗೋಧಿ ಹಿಟ್ಟು ಮತ್ತು 2 ಚಮಚ ಹಾಲು ಮಿಕ್ಸ್‌ ಮಾಡಿ ಪೇಸ್ಟ್‌ ಮಾಡಿ ಮುಖಕ್ಕೆ ಹಾಕಿ. 20 ನಿಮಿಷದ ನಂತರ ತೊಳೆಯಿರಿ.

ಆಯಿಲಿ ಸ್ಕಿನ್‌ಗಾಗಿ : ಒಂದು ಕಪ್ ಹಾಲು ಕಾಯಿಸಿ. ಅದನ್ನು ಇಳಿಸಿದ ಮೇಲೆ ಒಂದು ಸಣ್ಣ ಚಮಚ ಜೇನು ಮತ್ತು ರೋಸ್‌ ವಾಟರ್‌ ಮಿಕ್ಸ್‌ ಮಾಡಿ ಅದಕ್ಕೆ 3 ದೊಡ್ಡ ಚಮಚ ಗೋಧಿ ಹಿಟ್ಟು ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿ. ಒಣಗಿದ ನಂತರ ತೊಳೆಯಿರಿ. ಇದನ್ನು ವಾರದಲ್ಲಿ ಎರಡು ಬಾರಿ ಮಾಡಿ.

ಗ್ಲೋಯಿಂಗ್‌ ಸ್ಕಿನ್‌ : ಇದಕ್ಕಾಗಿ 3 ಚಮಚ ಕೆನೆಗೆ 2 ಚಮಚ ಗೊಧಿ ಹಿಟ್ಟು ಸೇರಿಸಿ ಪೇಸ್ಟ್‌ ಮಾಡಿ. ಮುಖವನ್ನು ಚೆನ್ನಾಗಿ ವಾಶ್‌ ಮಾಡಿ ಇದನ್ನು ಹಚ್ಚಿ, ಒಣಗಿದ ಬಳಿಕ ತೊಳೆಯಿರಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions