ನವದೆಹಲಿ : ಪಾಕಿಸ್ತಾನದ ಆರ್ಥಿಕತೆಯ ಅಡಿಪಾಯ ಅಲುಗಾಡಿದ್ದು, ದೇಶ ನಿರಂತರವಾಗಿ ಸಾಲದ ಸುಳಿಯಲ್ಲಿ ಮುಳುಗುತ್ತಿದೆ. ಆದ್ರೆ, ಪಾಕಿಸ್ತಾನಿಗಳು ತಮ್ಮ ನೀಚ ಕೃತ್ಯಗಳನ್ನ ಮುಂದುವರೆಸಿದ್ದು, ಭಾರತೀಯರನ್ನ ಗುರಿಯಾಗಿಸಿಕೊಂಡಿದ್ದಾರೆ. ವಾಸ್ತವವಾಗಿ ಪಾಕಿಸ್ತಾನಿಗಳು ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ವಂಚನೆಯ ದಂಧೆಯನ್ನ ನಡೆಸುತ್ತಿದ್ದಾರೆ. ಈ ಮೂಲಕ ಸಂಕಷ್ಟದಲ್ಲಿರುವ ಪಾಕಿಸ್ತಾನಿಗಳು, ಭಾರತೀಯರ ಹಣ ಲೂಟಿ ಮಾಡಿ ತಮ್ಮ ಮನೆಯ ಖರ್ಚು ನಿಭಾಯಿಸುವ ಕೆಲಸ ಮಾಡುತ್ತಿದ್ದಾರೆ.

ಈ ರೀತಿ ವಂಚನೆ
ಪಾಕಿಸ್ತಾನ ಮೂಲದ ಸೈಬರ್ ಹಬ್‌ನಿಂದ ಭಾರತೀಯರಿಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಲಾಗುತ್ತಿದೆ, ಕೆಬಿಸಿಯಲ್ಲಿ 25 ಲಕ್ಷ ಲಾಟರಿ ಗೆಲ್ಲಲು ಆಮಿಷವೊಡ್ಡುತ್ತಿದೆ. ಇದರಲ್ಲಿ ಲಾಟರಿ ಸಂಖ್ಯೆಗಳ ಜೊತೆಗೆ ಹಲವು ರೀತಿಯ ವಿವರಗಳಿವೆ. ವಾಯ್ಸ್ ಅಟ್ಯಾಚ್‌ಮೆಂಟ್ ಕೂಡ ಇದ್ದು, ಲಾಟರಿ ಹಣವನ್ನ ಪಡೆಯಲು ವಾಟ್ಸಾಪ್‌ನಲ್ಲಿ ನಂಬರ್‌ಗೆ ಕರೆ ಮಾಡಲು ಕೇಳಲಾಗುತ್ತದೆ, ಇಲ್ಲಿಂದ ವಂಚನೆ ಪ್ರಾರಂಭವಾಗುತ್ತದೆ. ವಾಟ್ಸಾಪ್ ಕರೆಗಳನ್ನು ರೆಕಾರ್ಡ್ ಮಾಡಲು ಸಾಧ್ಯವಿಲ್ಲ ಎಂದು ಎಲ್ಲರಿಗೂ ತಿಳಿದಿದೆ. ಇದರ ಲಾಭವನ್ನ ಪಡೆದುಕೊಳ್ತಿರುವ ಪಾಕಿಸ್ತಾನಿಗಳು, ಭಾರತೀಯರನ್ನ ದೋಚುತ್ತಿದ್ದಾರೆ. ಹಾಗಾಗಿ ಭಾರತೀಯರು ಅಂತಹ ಯಾವುದೇ ಸಂಖ್ಯೆಯಿಂದ ಬರುವ ಸಂದೇಶಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಸೈಬರ್ ತಜ್ಞರು ಸಲಹೆ ನೀಡಿದ್ದಾರೆ.

ಪಾಕಿಸ್ತಾನಿ ಸಂಖ್ಯೆಯನ್ನ ಗುರುತಿಸುವುದು ಹೇಗೆ?
ಭಾರತೀಯ ಸಂಖ್ಯೆಗಳು +91 ರಿಂದ ಪ್ರಾರಂಭವಾಗುವಂತೆ, ಪಾಕಿಸ್ತಾನಿ ಮೊಬೈಲ್ ಸಂಖ್ಯೆಗಳು +92 ರಿಂದ ಪ್ರಾರಂಭವಾಗುತ್ತವೆ. ಹಾಗಾಗಿ +92 ನಿಂದ ಪ್ರಾರಂಭವಾಗುವ ಯಾವುದೇ ಸಂದೇಶಕ್ಕೆ ಪ್ರತ್ಯುತ್ತರಿಸಬೇಡಿ ಅಥವಾ ಅವರಿಗೆ ವಾಟ್ಸಾಪ್ ಆಡಿಯೋ ಅಥವಾ ವೀಡಿಯೊ ಕರೆಗಳನ್ನ ಮಾಡಬೇಡಿ. ಅಲ್ಲದೇ, ಅಂತಹ ಯಾವುದೇ ಸಂದೇಶವನ್ನ ವಂಚನೆ ಸಂದೇಶವೆಂದೇ ಪರಿಗಣಿಸಿ, ಅದು ಯಾವುದೇ ಮೊಬೈಲ್ ಸಂಖ್ಯೆಯಿಂದ ಮಾಡಿದ್ದರು ಕೂಡ.

Share.
Exit mobile version