‘ವಾಟ್ಸ್ಆ್ಯಪ್’ ಸುರಕ್ಷತೆಗೆ ಬಂತು ‘ಫಿಂಗರ್ಪ್ರಿಂಟ್ ಲಾಕ್’
Saturday, November 2nd, 2019 5:43 pm

ಸ್ಪೆಷಲ್ ಡೆಸ್ಕ್ : ಈಗಾಗಲೇ ಅನೇಕ ಆಪ್ ಗಳಿಗೆ ಫಿಂಗರ್ ಪ್ರಿಂಟ್ ಲಾಕ್ ಪರಿಚಯಿಸಲಾಗಿದೆ. ಅದೇ ರೀತಿ ಈಗಾಗಲೇ ಅನೇಕ ಹೊಸ ಹೊಸ ವಿನೂತನ ಪ್ರೀಚರ್ಸ್ ಬಳಕೆದಾರರಿಗೆ ನೀಡಿದೆ. ವಾಟ್ಸ್ ಅಪ್ ಇದೀಗ ಮತ್ತೊಂದು ಹೊಸ ಹೆಜ್ಜೆಯನ್ನು ಇರಿಸಿದ್ದು, ವಾಟ್ಸ್ ಆಪ್ ಸುರಕ್ಷತೆಗಾಗಿ ಈಗ ಫಿಂಗರ್ ಪ್ರಿಂಟ್ ಲಾಕ್ ಅನ್ನು ತನ್ನ ಬಳಕೆದಾರರಿಗಾಗಿ ನೀಡಿದೆ.
ಈ ಮೊದಲು ಪ್ರಾಯೋಗಿಕವಾಗಿ ಕೆಲವೇ ಕೆಲವು ಸ್ಮಾರ್ಟ್ ಪೋನ್ ಬಳಕೆದಾರರಿಗೆ ಮಾತ್ರ ನೀಡಲಾಗಿದ್ದ ವಾಟ್ಸ್ ಆಪ್ ಫಿಂಗರ್ ಪ್ರಿಂಟ್ ಲಾಕ್, ಇದೀಗ ಎಲ್ಲಾ ಆವೃತ್ತಿಯ ಸ್ಮಾರ್ಟ್ ಪೋನ್ ಬಳಕೆದಾರರಿಗೂ ಬಿಡುಗಡೆ ಮಾಡಿದೆ. ಈ ಮೂಲಕ ವಿನೂತನ ಸುರಕ್ಷತಾ ಕ್ರಮವನ್ನು ವಾಟ್ಸ್ ಅಪ್ ಪರಿಚಯಿಸಿದೆ.
ಅಂದಹಾಗೇ ನಿಮ್ಮ ಸ್ಮಾರ್ಟ್ ಪೋನ್ ನಲ್ಲಿ ಹೊಸ ಫಿಂಗರ್ ಪ್ರಿಂಟ್ ಲಾಕ್ ಫೀಚರ್ ಬಳಕೆ ಮಾಡಲು, ಈ ಕೆಳಗಿನ ವಿಧಾನ ಅನುಸರಿಸಿದರೇ ಕೆಲವೇ ಕ್ಷಣಗಳಲ್ಲಿ ನಿಮ್ಮ ವಾಟ್ಸ್ ಆಪ್ ಫಿಂಗರ್ ಪ್ರಿಂಟ್ ಲಾಕ್ ಗೆ ಒಳಬಡುತ್ತದೆ. ಇದಕ್ಕೆ ಥರ್ಡ್ ಪಾರ್ಟಿ ಯಾವುದೇ ಆಪ್ ಕೂಡ ಬೇಕಾಗಿಲ್ಲ.
ವಾಟ್ಸ್ ಆಪ್ ಫಿಂಗರ್ ಪ್ರಿಂಟ್ ಲಾಂಕ್ ಆನ್ ಮಾಡಲು ಈ ಕೆಳಗಿನ ಕ್ರಮ ಅನುಸರಿಸಿ
- ಮೊದಲು ನಿಮ್ಮ ಸ್ಮಾರ್ಟ್ ಪೋನ್ ನಲ್ಲಿನ ಗೂಗಲ್ ಪ್ಲೇ ಸ್ಟೋರ್ ಅಥವಾ ಐಒಎಸ್ ಸ್ಟೋರ್ ನಲ್ಲಿ ವಾಟ್ಸ್ ಆಪ್ ಅಪ್ ಡೇಟ್ ತೋರಿಸುತ್ತಿದೆಯಾ ಎಂದು ಚೆಕ್ ಮಾಡಿ.
- ಒಂದು ವೇಳೆ ವಾಟ್ಸ್ ಅಪ್ ಅಪ್ ಡೇಟ್ ತೋರಿಸುತ್ತಾ ಇದ್ದರೇ, ಮೊದಲು ಅಪ್ ಡೇಟ್ ಮಾಡಿಕೊಳ್ಳೋದು ಮರೆಯಬೇಡಿ.
- ಆನಂತ್ರ ನಿಮ್ಮ ವಾಟ್ಸ್ ಅಪ್ ತೆರೆಯಿರಿ. ಬಳಿಕ ಸೆಟ್ಟಿಂಗ್ಸ್ ಗೆ ಹೋಗಿ
- ಸೆಟ್ಟಿಂಗ್ಸ್ ತೆರೆದ ನಂತ್ರ, ಅಕೌಂಟ್ಸ್ ಆಯ್ಕೆ ಮಾಡಿಕೊಂಡು ಕ್ಲಿಕ್ ಮಾಡಿ ತೆರೆಯಿರಿ
- ಆ ಬಳಿಕ ಪ್ರೈವೆಸಿ ಆಯ್ಕೆ ಮಾಡಿಕೊಂಡು ಒಪನ್ ಮಾಡಿ
- ಪ್ರೈವೆಸಿ ಒಪನ್ ಆದ ಬಳಿಕ ಕೊನೆಗೆ ಹೋಗಿ ನೋಡಿ, ಅಲ್ಲಿ ನಿಮಗೆ ಫಿಂಗರ್ ಪ್ರಿಂಟ್ ಲಾಕ್ ಆನ್ ಮಾಡಲು ಫೀಚರ್ ತೋರಿಸುತ್ತದೆ. ಅದನ್ನು ಆನ್ ಮಾಡಿ.
- ನೀವು ಫಿಂಗರ್ ಪ್ರಿಂಟ್ ಲಾಕ್ ಆನ್ ಮಾಡಿದ ತಕ್ಷಣ ನಿಮ್ಮ ಕೈ ಬೆರಳಿನ ಗುರುತನ್ನು ಕೇಳುತ್ತದೆ. ಆ ಗುರುತನ್ನು ನೀಡಿ ದಾಖಲಿಸಿಕೊಳ್ಳಿ.
- ಆನಂತ್ರದಲ್ಲಿ ನಿಮಗೆ ವಾಟ್ಸ್ ಆಪ್ ಎಷ್ಟು ಹೊತ್ತಿನ ನಂತ್ರ ಲಾಕ್ ಆಗಬೇಕು ಎಂಬ ಆಯ್ಕೆ ತೋರಿಸುತ್ತದೆ. ಅಲ್ಲಿನ ತಕ್ಷಣವೇ, 1 ನಿಮಿಷಗಳಲ್ಲಿ, 30 ನಿಮಿಷಗಳಲ್ಲಿ ಆಯ್ಕೆ ಮಾಡಿಕೊಂಡ್ರೇ, ನಿಮ್ಮ ಸ್ಮಾರ್ಟ್ ಪೋನ್ ನಲ್ಲಿ ವಾಟ್ಸ್ ಅಪ್ ಫಿಂಗರ್ ಪ್ರಿಂಟ್ ಲಾಕ್ ಆನ್ ಮಾಡಿದಂತೆ… ಇಷ್ಟೇ.. ಇದು ಒಂದು ಎರಡು ನಿಮಿಷದ ಕೆಲಸ..
