ಸಚಿವ ಸಂಪುಟ ಪುನಾರಚನೆಯಾದ್ರೆ ತಪ್ಪೇನು?: ಶಿವಮೊಗ್ಗದಲ್ಲಿ ಸಚಿವ ಬೈರತಿ ಸುರೇಶ್ ಪ್ರಶ್ನೆ

ಶಿವಮೊಗ್ಗ: “ರಾಜ್ಯ ಸಚಿವ ಸಂಪುಟ ಪುನಾರಚನೆಯಾದ್ರೆ ತಪ್ಪೇನು? ಇದರಿಂದ ಎಲ್ಲರಿಗೂ ಅವಕಾಶ ಸಿಗುತ್ತದೆ” ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಅಭಿಪ್ರಾಯಪಟ್ಟಿದ್ದಾರೆ. ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯ ವಿದ್ಯಮಾನಗಳು ಮತ್ತು ಅಭಿವೃದ್ಧಿ ಯೋಜನೆಗಳ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡರು. ಹೈಕಮಾಂಡ್ ತೀರ್ಮಾನವೇ ಅಂತಿಮ ಸಚಿವ ಸಂಪುಟ ಬದಲಾವಣೆಯ ಕುರಿತು ಮಾತನಾಡಿದ ಅವರು, “ನಾವೆಲ್ಲಾ ಹೈಕಮಾಂಡ್ ಹೇಳಿದಂತೆ ಕೇಳುವವರು. ಹೈಕಮಾಂಡ್ ಹೇಳುವ ತನಕ ನಾವು ಅಧಿಕಾರದಲ್ಲಿ ಇರುತ್ತೇವೆ, ಇಲ್ಲವಾದರೆ ಸಾಮಾನ್ಯ ಶಾಸಕರಾಗಿ ಮುಂದುವರಿಯುತ್ತೇವೆ” ಎಂದರು. … Continue reading ಸಚಿವ ಸಂಪುಟ ಪುನಾರಚನೆಯಾದ್ರೆ ತಪ್ಪೇನು?: ಶಿವಮೊಗ್ಗದಲ್ಲಿ ಸಚಿವ ಬೈರತಿ ಸುರೇಶ್ ಪ್ರಶ್ನೆ