ಸುಭಾಷಿತ :

Tuesday, February 18 , 2020 1:50 PM

ಸಂಕ್ರಾಂತಿಯಂದು ನೀಡುವ ಎಳ್ಳು ಬೆಲ್ಲದ ಮಹತ್ವ ಏನು? ಇಲ್ಲಿದೆ ಓದಿ


Tuesday, January 14th, 2020 3:37 pm

ಸ್ಪೆಷಲ್ ಡೆಸ್ಕ್: ಸಂಕ್ರಾಂತಿ ಎಂದರೇನೇ ಒಂಥರಾ ಸಂಭ್ರಮ. ಮನೆಯಲ್ಲಿ ವಿಶೇಷ ತಿನಿಸು ಮಾಡಿಕೊಂಡು ನೆರೆಹೊರೆಯವರಿಗೆ ನೀಡಿ ಸಂಭ್ರಮಿಸುತ್ತಾರೆ ಜನ. ಅಲ್ಲದೆ ಈ ದಿನ ಎಲ್ಲರಿಗೂ ಎಳ್ಳು ಬೆಲ್ಲ ನೀಡಲಾಗುತ್ತದೆ. ಸಂಕ್ರಾಂತಿ ದಿನ ಎಳ್ಳು ಬೆಲ್ಲ ಕೊಟ್ಟು ಒಳ್ಳೆ ಮಾತಾಡಿ ಎಂಬ ನಾಣ್ನುಡಿ ಇದೆ. ಆ ದಿನ ನಾವು ಎಲ್ಲರೊಂದಿಗೆ ಸಿಹಿ ಮಾತುಗಳನ್ನೇ ಆಡಬೇಕು ಎಂದು ಹೇಳಲಾಗುತ್ತದೆ.

ಸಂಕ್ರಾಂತಿ ದಿನ ಎಲ್ಲರಿಗೂ ಕೊಡುವ ತಿಂಡಿಯಲ್ಲಿ ಮುಖ್ಯವಾಗಿ ಎಳ್ಳು, ಬೆಲ್ಲ, ನೆಲಗಡಲೆ, ತೆಂಗಿನ ಕಾಯಿ ತುಂಡು, ಹುರಿಗಡಲೆ, ಕಬ್ಬು ಮೊದಲಾದ ವಸ್ತುಗಳು ಇರುತ್ತವೆ. ಇವುಗಳನ್ನು ನೀಡುವುದಕ್ಕೂ ಒಂದು ಹಿನ್ನೆಲೆ ಇದೆ. ಅದು ಏನು ಎಂದು ನೀವು ತಿಳಿಯಿರಿ.

ಎಳ್ಳು ಮತ್ತು ಬೆಲ್ಲದ ಮಿಶ್ರಣವನ್ನು ನಾವು ಯಾರಿಗಾದರೂ ನೀಡುತ್ತೇವೆ ಎಂದಾದಲ್ಲಿ ನಾವು ಸ್ವತಂತ್ರರಾಗಿದ್ದು, ಆ ವ್ಯಕ್ತಿಯಿಂದ ಯಾವುದನ್ನೂ ಪಡೆದುಕೊಂಡಿಲ್ಲ ಎಂದಾಗಿದೆ. ಇನ್ನೊಂದು ಅರ್ಥದಲ್ಲಿ ಋಣಮುಕ್ತರು ಎಂಬುದನ್ನು ಇದು ಸೂಚಿಸುತ್ತದೆ. ನಮ್ಮ ಮಾತು ಸಿಹಿಯಾಗಿರಬೇಕು ಮತ್ತು ಇನ್ನೊಬ್ಬರಿಗೆ ಒಳಿತನ್ನೇ ಬಯಸಬೇಕು ಎಂಬುದನ್ನು ಬೆಲ್ಲ ಸೂಚಿಸುತ್ತದೆ.

ಇನ್ನು ಕಬ್ಬನ್ನು ಸಹ ನೀಡಲಾಗುತ್ತದೆ. ಸಂಬಂಧವನ್ನು ಗಟ್ಟಿಗೊಳಿಸುವುದನ್ನು ಕಬ್ಬು ಮಾಡುತ್ತದೆ. ನೀವು ಯಾವುದೇ ಕೆಲಸವನ್ನು ಮಾಡಿ ಅದರಲ್ಲಿ ದೃಢತೆ ಇರಲಿ ಎಂಬುದನ್ನು ಕಬ್ಬು ಸೂಚಿಸುತ್ತದೆ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions