ಕೆಎನ್‌ಎನ್‌ಸಿನಿಮಾಡೆಸ್ಕ್: ಭಾರತೀಯ ಚಿತ್ರರಂಗದಲ್ಲೀಗ ಸೌತ್ ಇಂಡಸ್ಟ್ರೀಯ ಸಿನಿಮಾಗಳು ದೊಡ್ಡ ಮಟ್ಟಿಗೆ ಸದ್ದು-ಸುದ್ದಿ ಮಾಡುತ್ತಿದೆ. ಕೆಜಿಎಫ್-2, ತ್ರಿಬಲ್ ಹಾಗೂ ಪುಷ್ಪ ಸಿನಿಮಾಗಳು ಗಲ್ಲಾಪೆಟ್ಟಿಗೆಯನ್ನೂ ಕಮಾಯಿ ಮಾಡಿವೆ. ಈಗ ಇದೇ ಭರವಸೆಯೊಂದಿಗೆ ತಯಾರಾಗ್ತಿರುವ ಪುಷ್ಪ ಸೀಕ್ವೆಲ್ ಮೇಲೆ ನಿರೀಕ್ಷೆ ಜಗದಗಲ ಇದೆ. ಇಂಟ್ರೆಸ್ಟಿಂಗ್ ಅಂದ್ರೆ ಶೂಟಿಂಗ್ ಗೂ ಮುನ್ನ ಪುಷ್ಪ-2 ಸಿನಿಮಾ ಹೊಸ ರೆಕಾರ್ಡ್ ಬರೆದಿದೆ.
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟಿಸಲಿರುವ ಪುಷ್ಪ-2 ಶೂಟಿಂಗ್ ಗೂ ಮುನ್ನ ಒಳ್ಳೆ ಬ್ಯುಸಿನೆಸ್ ಮಾಡಿದೆ. ಪ್ರೀ-ರಿಲೀಸ್ ಬ್ಯುಸಿನೆಸ್ ನಲ್ಲಿ 700 ಕೋಟಿ ರೂಪಾಯಿ ಹಣವನ್ನು ಪುಷ್ಪ ತನ್ನದಾಗಿಸಿಕೊಂಡಿದೆ ಅಂತಿವೆ ಟಾಲಿವುಡ್ ಮೂಲಗಳು. ಡಿಜಿಟಲ್ ಹಕ್ಕು 300 ಕೋಟಿಗೆ ಸೇಲ್ ಆದ್ರೆ, ದಕ್ಷಿಣ ಭಾರತದ ಥಿಯೇಟ್ರಿಕಲ್ ಹಕ್ಕು 200 ಕೋಟಿ ಹಾಗೂ ಹಿಂದಿ ಭಾಷೆಯಲ್ಲಿ 200 ಕೋಟಿಗೆ ಮಾರಾಟವಾಗಿದೆ. ಒಟ್ಟಾರೆ 700 ಕೋಟಿ ಮೊತ್ತ ಪುಷ್ಪ-2 ಬಳಗದ ಪಾಲಾಗಿದೆ. ಇಂಟ್ರೆಸ್ಟಿಂಗ್ ಅಂದ್ರೆ ತ್ರಿಬಲ್ ಆರ್ ಸಿನಿಮಾದ ಪ್ರೀ-ರಿಲೀಸ್ ಬ್ಯುಸಿನೆಸ್ 800 ಕೋಟಿ ಎಂದು ಅಂದಾಜಿಸಲಾಗಿತ್ತು.
ಸ್ಟಾರ್ ನಿರ್ದೇಶಕ ಸುಕುಮಾರ್ ನಿರ್ದೇಶನದಲ್ಲಿ ಮೂಡಿ ಬರಲಿರುವ ಪುಷ್ಪ-2 ಸಿನಿಮಾದ ಶೂಟಿಂಗ್ ಜುಲೈ ತಿಂಗಳಿನಿಂದ ಶುರುವಾಗಲಿದ್ದು, ಈಗಾಗ್ಲೇ ಸಕುಮಾರ್ ಅದಕ್ಕೆ ತಕ್ಕುದಾದ ಕಥೆಯನ್ನು ಸಿದ್ಧಪಡಿಸ್ತಿದ್ದಾರೆ. ಇನ್ನು ಅಲ್ಲು ಅರ್ಜುನ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಲಿದ್ದು, ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಕಿಕ್ ಸಿನಿಮಾದಲ್ಲಿದೆ.