ಹೌರಾ (ಪಶ್ಚಿಮ ಬಂಗಾಳ) : ಜಾರ್ಖಂಡ್ನ ಮೂವರು ಕಾಂಗ್ರೆಸ್ ಶಾಸಕರನ್ನು ಪಶ್ಚಿಮ ಬಂಗಾಳ ಪೊಲೀಸರು ಶನಿವಾರ ಹೌರಾದಲ್ಲಿ ಭಾರಿ ಮೊತ್ತದ ಹಣದೊಂದಿಗೆ ಬಂಧಿಸಿದ್ದಾರೆ.
ಬಂಧಿತ ಶಾಸಕರನ್ನು ಜಮ್ತಾರಾದ ಶಾಸಕ ಇರ್ಫಾನ್ ಅನ್ಸಾರಿ, ಖಿಜ್ರಿಯ ಶಾಸಕ ರಾಜೇಶ್ ಕಚ್ಚಪ್ ಮತ್ತು ಕೊಲೆಬಿರಾ ಶಾಸಕ ನಮನ್ ಬಿಕ್ಸಲ್ ಸೇರಿದ್ದಾರೆ. ಶನಿವಾರ ಸಂಜೆ ಕಾರುಗಳಲ್ಲಿ ಭಾರಿ ಮೊತ್ತದ ಹಣ ಸಾಗಿಸುವಾಗ ಹೌರಾದಲ್ಲಿ ಸಿಕ್ಕಿಬಿದ್ದಿದ್ದು, ಹಣವನ್ನು ಪೊಲೀಸರರು ವಶಪಡಿಸಿಕೊಂಡಿದ್ದಾರೆ.
Howrah,West Bengal| We’ve nabbed 3 MLAs of Congress from Jharkhand namely Irfan Ansari, MLA from Jamtara, Rajesh Kachhap, MLA from Khijri & Naman Bixal, MLA from Kolebira with huge amounts of cash. We would only be able to count it once counting machines come: SP Swati Bhangalia pic.twitter.com/yo8VYyW9Yq
— ANI (@ANI) July 30, 2022
#Breaking: Major cash recovery in Bengal’s Howrah district. A car with name plate MLA Jamtara intercepted at Howrah’s Ranihati area Machines being brought in to count the cash. Three Jharkhand MLAs were reportedly traveling in the said vehicle. Identities being verified. pic.twitter.com/wvAyYeVmzF
— Pooja Mehta (@pooja_news) July 30, 2022
“ನಾವು ಜಾರ್ಖಂಡ್ನ 3 ಕಾಂಗ್ರೆಸ್ ಶಾಸಕರಾದ ಜಮ್ತಾರಾ ಶಾಸಕ ಇರ್ಫಾನ್ ಅನ್ಸಾರಿ, ಖಿಜ್ರಿಯ ಶಾಸಕ ರಾಜೇಶ್ ಕಚ್ಚಪ್ ಮತ್ತು ಕೊಲೆಬೀರಾದ ಶಾಸಕ ನಮನ್ ಬಿಕ್ಸಾಲ್ ಅವರು ಸಾಗಿಸುತ್ತಿದ್ದ ಅಪಾರ ಪ್ರಮಾಣದ ನಗದು ಹಣವನ್ನು ವಶಪಡಿಸಿಕೊಂಡಿದ್ದೇವೆ. ಎಣಿಕೆ ಯಂತ್ರಗಳು ಬಂದ ನಂತರ ಮಾತ್ರ ನಾವು ಹಣವನ್ನು ಎಣಿಸಲು ಸಾಧ್ಯ” ಎಂದು ಹೌರಾದ ಪೊಲೀಸ್ ವರಿಷ್ಠಾಧಿಕಾರಿ ಸ್ವಾತಿ ಭಂಗಾಲಿಯಾ ಹೇಳಿದ್ದಾರೆ.
BIG UPDATE: ಆತಂಕದ ನಡುವೆ ನೆಮ್ಮದಿಯ ಸುದ್ದಿ, ರಾಜ್ಯದಲ್ಲಿ ಮಂಕಿಪಾಕ್ಸ್ ಪತ್ತೆಯಾಗಿಲ್ಲ ಸುಧಾಕರ್ ಸ್ಪಷ್ಟನೆ
BIGG NEWS : ದಯವಿಟ್ಟು ರಾಜೀನಾಮೆ ವಾಪಸ್ ಪಡೆಯಿರಿ : ಬಿಜೆಪಿ ಕಾರ್ಯಕರ್ತರಲ್ಲಿ ಶಾಸಕ ರೇಣುಕಾಚಾರ್ಯ ಮನವಿ