ಕೆಎನ್​ಎನ್​ ಡಿಜಿಟಲ್ ಡೆಸ್ಕ್ : ಒಮ್ಮೆ ತೂಕ ಹೆಚ್ಚಾದರೆ ಕಡಿಮೆ ಮಾಡುವುದು ತುಂಬಾ ಕಷ್ಟ. ಕೆಲವರು ತೂಕ ಕಡಿಮೆ ಮಾಡಿಕೊಳ್ಳಲು ದುಬಾರಿ ಡಯಟ್ ಮತ್ತು ವರ್ಕೌಟ್ ಮಾಡುತ್ತಾರೆ. ಆದರೆ ಕೆಲವು ಮನೆಯಲ್ಲಿಯೇ ದೊರೆಯವ ಆಹಾರ ಪದಾರ್ಥಗಳಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದು.

BREAKING NEWS : PSI ಅಕ್ರಮ ನೇಮಕಾತಿ ಪ್ರಕರಣ : ‘ADGP ಅಮೃತ್‌ ಪಾಲ್‌’ 10 ದಿನ ಕಸ್ಟಡಿ ನೀಡಿ ಕೋರ್ಟ್‌ ಆದೇಶ

ತೂಕದ ಹೆಚ್ಚಳಕ್ಕೆ ದುರ್ಬಲ ಜೀವನಶೈಲಿ ಹಾಗೂ ಆಹಾರದ ಕ್ರಮವೂ ಕೂಡ ಪ್ರಮುಖ ಕಾರಣವಾಗಿದೆ. ಆದರೆ ಮನೆಮದ್ದುಗಳನ್ನು ಆಹಾರದಲ್ಲಿ ಸರಿಯಾಗಿ ಅಳವಡಿಸಿಕೊಂಡರೆ, ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ತೂಕವನ್ನು ಕಡಿಮೆ ಮಾಡಬಹುದು. ಇದಕ್ಕೆ ಉತ್ತಮ ಉದಾಹರಣೆಯೆಂದೆ ಅಜವಾನ​ ಅಥವಾ ಅಜ್ವಾನ​ (ಅಜ್ವೈನ್)ಕಾಳುಗಳು. ಇವು ಉತ್ಕರ್ಷಣ ನಿರೋಧಕಗಳನ್ನು ಹೊಂದಿವೆ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಜೊತೆಗೆ ಚಯಾಪಚಯ ದರವನ್ನು ಸುಧಾರಿಸುತ್ತದೆ. ವ್ಯಾಯಾಮದ ಜೊತೆಗೆ ಈ ಎರಡು ಅಜವೈನ್ ಸಲಹೆಗಳೊಂದಿಗೆ ತೂಕವನ್ನು ಕಡಿಮೆ ಮಾಡಿಕೊಳ್ಳಬಹದು.

‘ಅಜ್ವೈನ್ ನೀರು’
ಇದನ್ನು ತಯಾರಿಸಲು ಮೊದಲಿಗೆ ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿಎರಡು ಚಮಚ ಅಥವಾ ಒಂದೂವರೆ ಚಮಚ ಅಜವಾನ ಕಾಳುಗಳನ್ನು ನೆನೆಸಿಡಬೇಕು. ರಾತ್ರಿಯಿಡೀ ನೆನೆಸಿದ ನಂತರ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ ಮತ್ತು ಬೀಜಗಳನ್ನು ಎಸೆಯುವ ಬದಲು 30 ರಿಂದ 32 ಬಾರಿ ಅಗಿಯಿರಿ. ನೀವು ಸುಮಾರು 3 ತಿಂಗಳ ಕಾಲ ಈ ಪಾಕ ವಿಧಾನವನ್ನು ನಿಯಮಿತವಾಗಿ ಕುಡಿಯಬೇಕು. ಈ ಸಮಯದಲ್ಲಿ ನೀವು ವ್ಯಾಯಾಮದ ದಿನಚರಿಯನ್ನು ಅನುಸರಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಈ ದಿನಚರಿಯಿಂದ, ನೀವು ಆರೋಗ್ಯವಂತರಾಗಿರುತ್ತೀರಿ ಮತ್ತು ನಿಮ್ಮ ರೋಗನಿರೋಧಕ ಶಕ್ತಿಯು ಬಲವಾಗಿರುತ್ತದೆ.

‘ಜೀರಿಗೆ ಮತ್ತು ಸೋಂಪು ಸೇವನೆ’
ಅಜವೈನ್ ಜೊತೆಗೆ ಜೀರಿಗೆ ಮತ್ತು ಸೋಂಪಿನ ಕಾಳನ್ನು ಬೆರಸಿದರೆ ಉತ್ತಮ. ಇದರಿಂದ ಡಬಲ್ ಪ್ರಯೋಜನಗಳನ್ನು ಪಡೆಯಬಹುದು. ರಾತ್ರಿಯಲ್ಲಿ ಜೀರಿಗೆ, ಸೋಂಪು ಮತ್ತು ಅಜವಾನ ಕಾಳುಗಳನ್ನು ನೆನಸಿಡಬೇಕು.
ಬೆಳಿಗ್ಗೆ ಎದ್ದ ನಂತರ ಈ ನೀರನ್ನು ಕುಡಿಯಬೇಕು. ಈ ನೀರನ್ನು ಕುಡಿಯುವ ಮೊದಲು ಫಿಲ್ಟರ್ ಮಾಡಬೇಕು ಮತ್ತು ನಂತರ ಈ ವಸ್ತುಗಳನ್ನು ಅಗಿಯಲು ಮರೆಯಬೇಡಿ. ನೀವು ಈ ರೆಸಿಪಿಯನ್ನು ಎರಡರಿಂದ ಮೂರು ತಿಂಗಳ ಕಾಲ ನಿಯಮಿತವಾಗಿ ಪ್ರಯತ್ನಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಹೊಟ್ಟೆ ಕೂಡ ಆರೋಗ್ಯಕರವಾಗಿರುತ್ತದೆ ಮತ್ತು ಚಯಾಪಚಯವು ಸುಧಾರಿಸುತ್ತದೆ.

BREAKING NEWS: 10 ರಾಜ್ಯಗಳಲ್ಲಿ ಹೊಸ ಓಮಿಕ್ರಾನ್ ಸಬ್ ವೇರಿಯಂಟ್ ಪತ್ತೆ; ಈ ಬಗ್ಗೆ ಇಸ್ರೇಲ್ ತಜ್ಞರು ಏನು ಹೇಳುತ್ತಾರೆ ಗೊತ್ತಾ?

Share.
Exit mobile version