ಉಡುಪಿ: ಜಿಲ್ಲೆಯಿಂದ ಆರಂಭಗೊಂಡಂತ ಹಿಜಾಬ್-ಕೇಸರಿ ಶಾಲು ವಿವಾದ (Hijab and Kesari Shalu Controversy ), ಈಗ ಮತ್ತಷ್ಟು ತಾರಕಕ್ಕೇರಿದೆ. ಹಿಜಾಬ್ ವಿರೋಧಿಸಿ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳ ( Students ) ಬಳಿಕ, ನೀಲಿ ಶಾಲು ಧರಿಸಿಯೂ ವಿದ್ಯಾರ್ಥಿಗಳು ಆಗಮಿಸಿದ್ದರು. ಈಗ ಮುಂದುವರೆದು ವಿದ್ಯಾರ್ಥಿಗಳು ಕೇಸರಿ ಶಾಲು ಜೊತೆಗೆ, ಕೇಸರಿ ಪೇಟ ಧರಿಸಿ ವಿದ್ಯಾರ್ಥಿಗಳು ಕಾಲೇಜಿಗೆ ( College ) ಆಗಮಿಸಿದ್ದಾರೆ.
ಹೌದು.. ಉಡುಪಿ ಜಿಲ್ಲೆಯ ಎಂ.ಜಿ.ಎಂ ಕಾಲೇಜಿನ ವಿದ್ಯಾರ್ಥಿಗಳು ಹಿಜಾಬ್ ( Hijab Row ) ವಿರೋಧಿಸಿ, ಶಾಲೆಗೆ ಕೇಸರಿ ಶಾಲು ಧರಿಸಿದ್ದಲ್ಲದೇ, ಕೇಸರಿ ಪೇಟಾ ಕೂಡ ಧರಿಸಿ ಬಂದಿರೋದಾಗಿ ತಿಳಿದು ಬಂದಿದೆ.
ವಿದ್ಯಾರ್ಥಿಗಳು ಕೇಸರಿ ಶಾಲು ಜೊತೆಗೆ, ಕೇಸರಿ ಪೇಟ ಧರಿಸಿ ಬಂದ ಕಾರಣ, ಕಾಲೇಜಿನ ಆವರಣದಲ್ಲಿ ಬಿಗುವಿನ ವಾತಾವರಣ ಸೃಷ್ಠಿಯಾಗಿದೆ. ಸ್ಥಳಕ್ಕೆ ಆಗಮಿಸಿದಂತ ಪೊಲೀಸರು, ವಿದ್ಯಾರ್ಥಿಗಳನ್ನು ಮನವೊಲಿಸಿದರು. ಬಳಿಕ ಕಾಲೇಜಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
BIGG NEWS : ಪ್ರಥಮ PUC ವಿದ್ಯಾರ್ಥಿಗಳೇ ಗಮನಿಸಿ : ಮಾರ್ಚ್ 28 ರಿಂದ ವಾರ್ಷಿಕ ಪರೀಕ್ಷೆ